
ಬೆಂಗಳೂರು: ಬೆಂಗಳೂರಿನಲ್ಲಿ ಸಮಾಜ ಘಾತಕ ಕೃತ್ಯಕ್ಕೆ ನಡೆಯುತ್ತಿದ್ಯಾ ಪ್ಲಾನ್ ? ಹಾಗೊಂದು ಅನುಮಾನ ಈಗ ಬೆಂಗಳೂರಿನ ಪೊಲೀಸ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಕೊಟ್ಟ ವರದಿಯಲ್ಲಿನ ಸ್ಫೋಟಕ ಮಾಹಿತಿ.
ಹೌದು ಬೆಂಗಳೂರಿನ ಡಿ.ಜೆ ಹಳ್ಳಿ , ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಏರಿಯಾಗಳು ಈಗ ಬೂದಿ ಮುಚ್ಚಿದ ಕೆಂಡದಂತಿವೆ. ಗಲಭೆ ಮಾಡಲು ಕೆಲ ಸಮಾಜ ಘಾತಕ ಶಕ್ತಿಗಳು ಸದ್ದಿಲ್ಲದೆ ಗುಂಪು ಕಟ್ತಾ ಇದ್ದಾರಂತೆ. ತಮ್ಮ ಬಾತ್ಮಿದಾರರು ಹಾಗು ಕ್ರೈಂ ಸಿಬ್ಬಂದಿಯಿಂದ ಮಾಹಿತಿ ಪಡೆದು, ಸೂಕ್ಷ್ಮಮವಾಗಿ ಸ್ಟಡೀ ಮಾಡಿರುವ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ, ಗಲಭೆ ಪ್ರದೇಶದ ಬೆಳವಣಿಗೆಗಳ ಕುರಿತು ಸ್ಫೋಟಕ ವರದಿ ನೀಡಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ಅವರ ಈ ವರದಿ ಆಧಾರಿಸಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಮತ್ತೇ ಈ ಭಾಗಗಳಲ್ಲಿ ನಿಷೇಧಾಜ್ಞೆಯನ್ನು ವಿಸ್ತರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.