ಡಿಜೆ ಹಳ್ಳಿ ಗಲಭೆ ಪ್ರದೇಶಕ್ಕೆ ಎಫ್ಎಸ್ಎಲ್ ತಂಡ, ಸಿಸಿಟಿವಿ ಪರಿಶೀಲನೆ
ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರದ ಗಲಾಟೆಯಲ್ಲಿ ಹಾನಿಗೊಳಗಾದ ನಿವಾಸಿ ಮುನೇಗೌಡ ಮನೆಗೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸುಟ್ಟ ವಾಹನಗಳು, ಹಾನಿಯಾದ ಮನೆಯ ವಸ್ತುಗಳನ್ನು ಮಹಜರು ಮಾಡಲಾಗುತ್ತಿದೆ. ಆಗಸ್ಟ್ 11 ರ ರಾತ್ರಿ ಮನೆಗೆ ನುಗ್ಗಿ ದಾಂದಲೇ ನಡೆಸಿದ್ದ ದುಷ್ಕರ್ಮಿಗಳ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. […]

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.
ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರದ ಗಲಾಟೆಯಲ್ಲಿ ಹಾನಿಗೊಳಗಾದ ನಿವಾಸಿ ಮುನೇಗೌಡ ಮನೆಗೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸುಟ್ಟ ವಾಹನಗಳು, ಹಾನಿಯಾದ ಮನೆಯ ವಸ್ತುಗಳನ್ನು ಮಹಜರು ಮಾಡಲಾಗುತ್ತಿದೆ.
ಆಗಸ್ಟ್ 11 ರ ರಾತ್ರಿ ಮನೆಗೆ ನುಗ್ಗಿ ದಾಂದಲೇ ನಡೆಸಿದ್ದ ದುಷ್ಕರ್ಮಿಗಳ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಯ ಪೆನ್ ಡ್ರೈವ್ ಪಡೆದು ಪೊಲೀಸರು ಮಹಜರು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಮುನೇಗೌಡ ಮನೆಗೆ ಡಾಗ್ ಸ್ಕ್ವಾಡ್ ಕೂಡಾ ಕರೆತಂದು ಪರಿಶೀಲನೆ ನಡೆಸಿದ್ದಾರೆ.
Published On - 3:18 pm, Sun, 16 August 20



