ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’
ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು. ಸದ್ಯ ಸಕ್ಪಾಲ್ರವರು ಕೊರೊನಾದಿಂದ ಗುಣಮುಖರಾಗಿದ್ದು, ಐಎನ್ಹೆಚ್ಎಸ್ ಅಶ್ವಿನಿಯ (INHS Asvini) […]
ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು.
ಸದ್ಯ ಸಕ್ಪಾಲ್ರವರು ಕೊರೊನಾದಿಂದ ಗುಣಮುಖರಾಗಿದ್ದು, ಐಎನ್ಹೆಚ್ಎಸ್ ಅಶ್ವಿನಿಯ (INHS Asvini) ಸಿಬ್ಬಂದಿ ಸೋಂಕು ಗೆದ್ದ ಸಮರ ವೀರನಿಗೆ ಆತ್ಮೀಯ ವಿದಾಯ ಹೇಳಿದ್ದಾರೆ. INHS ಅಶ್ವಿನಿ ನೌಕೆ ಸಶಸ್ತ್ರ ಪಡೆಗಳಿಂದ ನಿವೃತ್ತಗೊಂಡ ಸೋಂಕಿತ ಯೋಧರಿಗೆ ಕೋವಿಡ್ -19 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಕಿಲ್ಲರ್ ಕೊರೊನಾ ವೈರಸ್ನಿಂದ ಯಶಸ್ವಿಯಾಗಿ ಗೆದ್ದು ಬಂದ ಭಾರತದ ಅನೇಕ ವೃದ್ಧರಲ್ಲಿ ನಿವೃತ್ತ ಸಿಪಾಯಿ ರಾಮು ಸಕ್ಪಾಲ್ ಕೂಡ ಒಬ್ಬರು. ತಮ್ಮ 98ನೇ ವಯಸ್ಸಿನಲ್ಲೂ ವೈರಸ್ ವಿರುದ್ಧ ಛಲ ಬಿಡದೆ ಹೋರಾಡಿ ಗೆದ್ದ ಸಮರ ವೀರನಿಗೆ ಸಲ್ಯೂಟ್.