PUBG ಆಡಬೇಡ ಅಂತಾ ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ನೇಣಿಗೆ ಶರಣು
ಹೈದರಾಬಾದ್: PUBG ಆಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ತಿರುಮಲಗಿರಿ ನಗರದಲ್ಲಿ ನಡೆದಿದೆ. ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ 9ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಕೊರೊನಾ ಲಾಕ್ಡೌನ್ನಿಂದ ಶಾಲೆಗಳು ಬಂದಾಗಿದ್ದ ಹಿನ್ನೆಲೆಯಲ್ಲಿ ಮೃತ ಬಾಲಕನ ಶಾಲೆಯವರು ಆನ್ಲೈನ್ ಕ್ಲಾಸ್ಗಳನ್ನ ಪ್ರಾರಂಭಿಸಿದ್ದರು. ಹೀಗಾಗಿ, ಆತನ ತಾಯಿ ಆನ್ಲೈನ್ ಕ್ಲಾಸ್ಗಾಗಿ ಅವನಿಗೆ ಮೊಬೈಲ್ ಕೊಡಿಸಿದ್ದರು. ಆದರೆ, ಹುಡುಗ ಮೊಬೈಲ್ನಲ್ಲಿ ದಿನವಿಡಿ PUBG ಗೇಮ್ ಆಡುತ್ತಿದ್ದನಂತೆ. ಇದನ್ನು ಕಂಡು ಸಿಟ್ಟಾದ ತಾಯಿ ಆತನನ್ನ […]
ಹೈದರಾಬಾದ್: PUBG ಆಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ತಿರುಮಲಗಿರಿ ನಗರದಲ್ಲಿ ನಡೆದಿದೆ. ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ 9ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಕೊರೊನಾ ಲಾಕ್ಡೌನ್ನಿಂದ ಶಾಲೆಗಳು ಬಂದಾಗಿದ್ದ ಹಿನ್ನೆಲೆಯಲ್ಲಿ ಮೃತ ಬಾಲಕನ ಶಾಲೆಯವರು ಆನ್ಲೈನ್ ಕ್ಲಾಸ್ಗಳನ್ನ ಪ್ರಾರಂಭಿಸಿದ್ದರು. ಹೀಗಾಗಿ, ಆತನ ತಾಯಿ ಆನ್ಲೈನ್ ಕ್ಲಾಸ್ಗಾಗಿ ಅವನಿಗೆ ಮೊಬೈಲ್ ಕೊಡಿಸಿದ್ದರು.
ಆದರೆ, ಹುಡುಗ ಮೊಬೈಲ್ನಲ್ಲಿ ದಿನವಿಡಿ PUBG ಗೇಮ್ ಆಡುತ್ತಿದ್ದನಂತೆ. ಇದನ್ನು ಕಂಡು ಸಿಟ್ಟಾದ ತಾಯಿ ಆತನನ್ನ ಬೈದಿದ್ದಾರೆ. ಇದರಿಂದ ಮನನೊಂದ ಬಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲಕನ ತಂದೆ ಸೇನೆಯಲ್ಲಿ ಸುಬೇದಾರ ಆಗಿ ಕೆಲಸ ಮಾಡುತ್ತಿದ್ದು ಸದ್ಯ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.