ಬ್ಯೂಟಿ ಪಾರ್ಲರ್​ಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟ ಹೆಸ್ಕಾಂ!

|

Updated on: May 16, 2020 | 12:10 PM

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿರುವ ಪಾರ್ಲರ್‌ಗಳಿಗೆ ಹೆಸ್ಕಾಂ ಭಾರೀ ಶಾಕ್ ನೀಡಿದೆ. ಲಾಕ್​ಡೌನ್ ವೇಳೆ ಬಾಗಿಲು ತೆರೆಯದಿದ್ದರೂ ಕರೆಂಟ್ ಬಿಲ್ ಮಾತ್ರ ದುಪ್ಪಟ್ಟು ಬಂದಿದೆ. ಒಂದೊಂದು ಬ್ಯೂಟಿ ಪಾರ್ಲರ್​ನ ಬಿಲ್ 5ರಿಂದ 8 ಸಾವಿರದವರೆಗೆ ಹೆಚ್ಚಳವಾಗಿದೆ. ಒಂದು ದಿನವೂ ಪಾರ್ಲರ್ ತೆರೆದಿಲ್ಲ, ಲೈಟ್ ಆನ್ ಮಾಡಿಲ್ಲ. ಯಾವುದೇ ಪರಿಕರ ಬಳಸಿಲ್ಲ. ಆದ್ರೂ ದುಪ್ಪಟ್ಟು ಕರೆಂಟ್​ ಬಿಲ್ ಕಂಡು ಪಾರ್ಲರ್ ಉದ್ಯೋಗಿಗಳು ಶಾಕ್ ಆಗಿದ್ದಾರೆ. ವಿದ್ಯಾಗಿರಿಯಲ್ಲಿರುವ ಬಹುತೇಕ ಪಾರ್ಲರ್​ಗಳ ಕರೆಂಟ್ ಬಿಲ್ ಹೆಚ್ಚಳವಾಗಿದ್ದು, ಹೆಸ್ಕಾಂ ಅಧಿಕಾರಿಗಳು ಈ […]

ಬ್ಯೂಟಿ ಪಾರ್ಲರ್​ಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟ ಹೆಸ್ಕಾಂ!
Follow us on

ಬಾಗಲಕೋಟೆ: ಕೊರೊನಾ ಲಾಕ್​ಡೌನ್ ಅವಧಿಯಲ್ಲಿ ನಗರದಲ್ಲಿರುವ ಪಾರ್ಲರ್‌ಗಳಿಗೆ ಹೆಸ್ಕಾಂ ಭಾರೀ ಶಾಕ್ ನೀಡಿದೆ. ಲಾಕ್​ಡೌನ್ ವೇಳೆ ಬಾಗಿಲು ತೆರೆಯದಿದ್ದರೂ ಕರೆಂಟ್ ಬಿಲ್ ಮಾತ್ರ ದುಪ್ಪಟ್ಟು ಬಂದಿದೆ. ಒಂದೊಂದು ಬ್ಯೂಟಿ ಪಾರ್ಲರ್​ನ ಬಿಲ್ 5ರಿಂದ 8 ಸಾವಿರದವರೆಗೆ ಹೆಚ್ಚಳವಾಗಿದೆ.

ಒಂದು ದಿನವೂ ಪಾರ್ಲರ್ ತೆರೆದಿಲ್ಲ, ಲೈಟ್ ಆನ್ ಮಾಡಿಲ್ಲ. ಯಾವುದೇ ಪರಿಕರ ಬಳಸಿಲ್ಲ. ಆದ್ರೂ ದುಪ್ಪಟ್ಟು ಕರೆಂಟ್​ ಬಿಲ್ ಕಂಡು ಪಾರ್ಲರ್ ಉದ್ಯೋಗಿಗಳು ಶಾಕ್ ಆಗಿದ್ದಾರೆ. ವಿದ್ಯಾಗಿರಿಯಲ್ಲಿರುವ ಬಹುತೇಕ ಪಾರ್ಲರ್​ಗಳ ಕರೆಂಟ್ ಬಿಲ್ ಹೆಚ್ಚಳವಾಗಿದ್ದು, ಹೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Published On - 11:22 am, Sat, 16 May 20