AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಗುಳಿ’ ಉಪ್ಪು ಹಾಕಿಸ್ಕೊಂಡ, ಬಾಯ್ಬಿಡಿಸಿದಾಗ ಕಿಲ್ಲರ್ ಅಂತಾನೂ ​ಒಪ್ಕೊಂಡ!

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಕಾಲದಲ್ಲಿ ಉಗುಳುವುದು ಮಹಾ ಅಪರಾಧ ಅಲ್ವಾ! ಅಂಥಾದ್ರಲ್ಲಿ ಇಲ್ಲೊಬ್ಬ ಐನಾತಿ ಕ್ರಿಮಿನಲ್ ಏನ್ಮಾಡಿದ್ದಾನೆ ನೋಡಿ. ಹೋಟೆಲ್​ಗೆ ಹೋಗಿ ಊಟ ಕೇಳಿದ್ದಾನೆ. ಮಾಲೀಕರು ಕೊಡಲ್ಲ ಅಂದಿದ್ದಕ್ಕೆ ಹೋಟೆಲ್​ನಲ್ಲೇ ಉಗುಳಿದ್ದಾನೆ. ಇದರಿಂದ ಪಿತ್ತ ನೆತ್ತಿಗೇರಿಸ್ಕೊಂಡ ಹೋಟೆಲ್ ಮಾಲೀಕ ಸೀದಾ ಪೊಲೀಸರಿಗೆ ಬುಲಾವ್ ನೀಡಿದ್ದಾನೆ. ಆ ಮೇಲೆ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುವಾಗ ಮತ್ತೆ ಬಾಯ್ಬಿಟ್ಟ ಆ ಕ್ರಿಮಿನಲ್ ಹೇಳಿದ್ದು ತಾನೊಬ್ಬ ಸೀರಿಯಲ್ ಕಿಲ್ಲರ್ ಅಂತಾ! ತಡರಾತ್ರಿ ಕಂಠಪೂರ್ತಿ ಕುಡಿದು ಸಲೀಂ ಬಳ್ಳಾರಿ ನೇಕಾರ ನಗರದಲ್ಲಿರುವ ಹೋಟೆಲ್​ಗೆ […]

‘ಉಗುಳಿ’ ಉಪ್ಪು ಹಾಕಿಸ್ಕೊಂಡ, ಬಾಯ್ಬಿಡಿಸಿದಾಗ ಕಿಲ್ಲರ್ ಅಂತಾನೂ ​ಒಪ್ಕೊಂಡ!
Follow us
ಸಾಧು ಶ್ರೀನಾಥ್​
|

Updated on:May 16, 2020 | 2:20 PM

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಕಾಲದಲ್ಲಿ ಉಗುಳುವುದು ಮಹಾ ಅಪರಾಧ ಅಲ್ವಾ! ಅಂಥಾದ್ರಲ್ಲಿ ಇಲ್ಲೊಬ್ಬ ಐನಾತಿ ಕ್ರಿಮಿನಲ್ ಏನ್ಮಾಡಿದ್ದಾನೆ ನೋಡಿ. ಹೋಟೆಲ್​ಗೆ ಹೋಗಿ ಊಟ ಕೇಳಿದ್ದಾನೆ. ಮಾಲೀಕರು ಕೊಡಲ್ಲ ಅಂದಿದ್ದಕ್ಕೆ ಹೋಟೆಲ್​ನಲ್ಲೇ ಉಗುಳಿದ್ದಾನೆ. ಇದರಿಂದ ಪಿತ್ತ ನೆತ್ತಿಗೇರಿಸ್ಕೊಂಡ ಹೋಟೆಲ್ ಮಾಲೀಕ ಸೀದಾ ಪೊಲೀಸರಿಗೆ ಬುಲಾವ್ ನೀಡಿದ್ದಾನೆ. ಆ ಮೇಲೆ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುವಾಗ ಮತ್ತೆ ಬಾಯ್ಬಿಟ್ಟ ಆ ಕ್ರಿಮಿನಲ್ ಹೇಳಿದ್ದು ತಾನೊಬ್ಬ ಸೀರಿಯಲ್ ಕಿಲ್ಲರ್ ಅಂತಾ!

ತಡರಾತ್ರಿ ಕಂಠಪೂರ್ತಿ ಕುಡಿದು ಸಲೀಂ ಬಳ್ಳಾರಿ ನೇಕಾರ ನಗರದಲ್ಲಿರುವ ಹೋಟೆಲ್​ಗೆ ತೆರಳಿದ್ದಾನೆ. ಲಾಕ್​ಡೌನ್ ಕಾರಣ ಊಟ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ಹೋಟೆಲ್​ನಲ್ಲಿ ಉಗುಳಿದ್ದಾನೆ. ನಂತರ ಪೊಲೀಸರಿಗೆ ಸ್ಥಳೀಯರು ಹಾಗೂ ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈತ ಕೊಲೆ ಕೇಸ್​ನ ಆರೋಪಿ ಸಲೀಂ ಬಳ್ಳಾರಿ ಎಂದು ಬಂಧಿಸಿ ಕಸಬಾಪೇಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಕುಖ್ಯಾತ ರೌಡಿ, ಕಲಬುರ್ಗಿಯಲ್ಲಿ ನಡೆದ ಕೊಲೆ‌ ಪ್ರಕರಣ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಮೇಲೆ ಹಲವು ಪ್ರಕರಣಗಳಿದ್ದು ಎಲ್ಲವನ್ನು ‌ಮರೆಮಾಚಿ ನೇಕಾರ ನಗರದಲ್ಲಿ ಮನೆ ಮಾಡಿಕೊಂಡಿದ್ದ.

Published On - 1:16 pm, Sat, 16 May 20