ರಾಯಣ್ಣ ವಿವಾದ ಮುಗಿದರೂ facebookನಲ್ಲಿ ಕಿಡಿಗೇಡಿಗಳಿಂದ ಪೋಸ್ಟ್‌, ಪೊಲೀಸರಿಂದ FIR

ಬೆಳಗಾವಿ: ಇಡೀ ರಾಜ್ಯದ ಗಮನ ಸೆಳೆದ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯ ಕಂಡಿದೆ. ಆದರೂ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಪೋಸ್ಟ್‌ಗಳನ್ನು ಹಾಕಿ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಈಗ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಿವಾಜಿಗೆ ಅಪಮಾನವಾಗಿದೆಯಂದು ಬೆಳಗಾವಿಯ ಸೈಬರ್ ಕ್ರೈಮ್ ಠಾಣೆ ಎದುರು ಮರಾಠಿ ಸಂಘಟನೆಗಳ ಕಾರ್ಯಕರ್ತರು ಧರಣಿಗೆ ಮುಂದಾಗಿದ್ದರು. ಈ ವೇಳೆ ಮರಾಠಿ ಸಂಘಟನೆ ಮುಖಂಡರಿಗೆ ಎಸಿಪಿ ನಾರಾಯಣ ಭರಮಣಿ ಬುದ್ದಿವಾದ ಹೇಳಿ […]

ರಾಯಣ್ಣ ವಿವಾದ ಮುಗಿದರೂ facebookನಲ್ಲಿ ಕಿಡಿಗೇಡಿಗಳಿಂದ ಪೋಸ್ಟ್‌, ಪೊಲೀಸರಿಂದ FIR

Updated on: Aug 30, 2020 | 3:08 PM

ಬೆಳಗಾವಿ: ಇಡೀ ರಾಜ್ಯದ ಗಮನ ಸೆಳೆದ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಸುಖಾಂತ್ಯ ಕಂಡಿದೆ. ಆದರೂ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದ ಪೋಸ್ಟ್‌ಗಳನ್ನು ಹಾಕಿ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಈಗ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶಿವಾಜಿಗೆ ಅಪಮಾನವಾಗಿದೆಯಂದು ಬೆಳಗಾವಿಯ ಸೈಬರ್ ಕ್ರೈಮ್ ಠಾಣೆ ಎದುರು ಮರಾಠಿ ಸಂಘಟನೆಗಳ ಕಾರ್ಯಕರ್ತರು ಧರಣಿಗೆ ಮುಂದಾಗಿದ್ದರು. ಈ ವೇಳೆ ಮರಾಠಿ ಸಂಘಟನೆ ಮುಖಂಡರಿಗೆ ಎಸಿಪಿ ನಾರಾಯಣ ಭರಮಣಿ ಬುದ್ದಿವಾದ ಹೇಳಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.ಅಷ್ಟೇ ಅಲ್ಲ ಯಾರೂ ಸಹ ಪೊಲೀಸ್ ಠಾಣೆ ಎದುರು‌ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ಕೂಡಾ ನೀಡಿದ್ದಾರೆ.

ಪೊಲೀಸರ ಭರವಸೆ ಮತ್ತು ಎಚ್ಚರಿಕೆ ಬಳಿಕ ಮರಾಠಿ ಸಂಘಟನೆಗಳು ಧರಣಿ ಹಿಂಪಡೆದಿವೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಹಾಗೂ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರತ್ಯೇಕವಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.