ಬಾಲಕನಿಗೆ ಕಾರು ಡಿಕ್ಕಿ: ಎದೆ ಝಲ್ಲೆನಿಸುವ ಅವಘಡದ ಸಿಸಿಟಿವಿ ದೃಶ್ಯಾವಳಿ ಆಯ್ತು Viral
ದಕ್ಷಿಣ ಕನ್ನಡ: ಹಾಲು ತರಲು ಹೋಗುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿನಿಂದ ಬರುತ್ತಿದ್ದ ಬೈಕ್ನ ಅಡಿಯಲ್ಲಿ ಬಿದ್ದ ದೃಶ್ಯವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಆಗಸ್ಟ್ 28 ರಂದು ಸಂಜೆ 4.35 ರ ಸುಮಾರಿಗೆ ಜಿಲ್ಲೆಯ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್ ಆ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು […]

ದಕ್ಷಿಣ ಕನ್ನಡ: ಹಾಲು ತರಲು ಹೋಗುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿನಿಂದ ಬರುತ್ತಿದ್ದ ಬೈಕ್ನ ಅಡಿಯಲ್ಲಿ ಬಿದ್ದ ದೃಶ್ಯವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಆಗಸ್ಟ್ 28 ರಂದು ಸಂಜೆ 4.35 ರ ಸುಮಾರಿಗೆ ಜಿಲ್ಲೆಯ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್ ಆ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಂಥವರ ಎದೆಯನ್ನೂ ಝಲ್ಲೆನಿಸುವಂತ್ತಿದ್ದು, ಕಾರಿನಲ್ಲಿರೋರು ಮತ್ತು ಬೈಕ್ ಸವಾರರೂ ಸಂಪೂರ್ಣ ಭಯಭೀತರಾಗಿರೋದು ದೃಶ್ಯದಲ್ಲಿ ಕಂಡು ಬಂದಿದೆ.






