ತಾನು ಮೋಸ ಹೋಗಿದ್ದಕ್ಕೆ ಬೇರೆಯವರಿಗೂ ಉಂಡೆನಾಮ ಹಾಕಿದ Online ವಂಚಕ ಅಂದರ್
ಬೆಂಗಳೂರು: ತನಗೆ ಮೋಸವಾಯಿತು ಎಂಬ ಸಿಟ್ಟಿಗೆ ಇತರರಿಗೂ ಮೋಸ ಮಾಡಲು ಮುಂದಾದ ಖತರ್ನಾಕ್ ಆನ್ಲೈನ್ ವಂಚಕನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಮಂಜುನಾಥ್ ಅಲಿಯಾಸ್ ನಂದೀಶ್ ರೆಡ್ಡಿ ಅಲಿಯಾಸ್ ಬಾಬು ಅಲಿಯಾಸ್ ಭರತ್ ಅಲಿಯಾಸ್ ಶಿವಾಜಿರಾವ್ ಎಂದು ಗುರುತಿಸಲಾಗಿದೆ. ಆನ್ಲೈನ್ ಮಾರಾಟದ ವೆಬ್ಸೈಟ್ನಲ್ಲಿ ಮೊಬೈಲ್ ಖರೀದಿಸುವಾಗ ನಂದೀಶ್ ರೆಡ್ಡಿ 5 ಸಾವಿರ ರೂಪಾಯಿ ಕಳೆದುಕೊಂಡಿದ್ದನಂತೆ. ತಾನು ಮೋಸ ಹೋದ ಕಾರಣಕ್ಕೆ ಸಿಟ್ಟಾದ ನಂದೀಶ್ ತಾನೂ ವಂಚಕನಾಗಬೇಕು ಎಂದು ಮುಂದಾದನಂತೆ. ಅಂತೆಯೇ, ಉದ್ಯೋಗ ಹುಡುಕಿಕೊಂಡು ನಗರಕ್ಕೆ […]
ಬೆಂಗಳೂರು: ತನಗೆ ಮೋಸವಾಯಿತು ಎಂಬ ಸಿಟ್ಟಿಗೆ ಇತರರಿಗೂ ಮೋಸ ಮಾಡಲು ಮುಂದಾದ ಖತರ್ನಾಕ್ ಆನ್ಲೈನ್ ವಂಚಕನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಮಂಜುನಾಥ್ ಅಲಿಯಾಸ್ ನಂದೀಶ್ ರೆಡ್ಡಿ ಅಲಿಯಾಸ್ ಬಾಬು ಅಲಿಯಾಸ್ ಭರತ್ ಅಲಿಯಾಸ್ ಶಿವಾಜಿರಾವ್ ಎಂದು ಗುರುತಿಸಲಾಗಿದೆ.
ಆನ್ಲೈನ್ ಮಾರಾಟದ ವೆಬ್ಸೈಟ್ನಲ್ಲಿ ಮೊಬೈಲ್ ಖರೀದಿಸುವಾಗ ನಂದೀಶ್ ರೆಡ್ಡಿ 5 ಸಾವಿರ ರೂಪಾಯಿ ಕಳೆದುಕೊಂಡಿದ್ದನಂತೆ. ತಾನು ಮೋಸ ಹೋದ ಕಾರಣಕ್ಕೆ ಸಿಟ್ಟಾದ ನಂದೀಶ್ ತಾನೂ ವಂಚಕನಾಗಬೇಕು ಎಂದು ಮುಂದಾದನಂತೆ.
ಅಂತೆಯೇ, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬರುವವರನ್ನೇ ಬಳಸಿಕೊಂಡ ನಂದೀಶ್ ಅವರ ಹೆಸರಲ್ಲಿ ಹೊಸ ಸಿಮ್ ಖರೀದಿಸುತ್ತಿದ್ದನಂತೆ. ನಂತರ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂನಲ್ಲಿನ ಕಾರುಗಳ ಫೋಟೊ ತೆಗದು ಜಾಹಿರಾತು ಹಾಕಿ ಕಡಿಮೆ ಬೆಲೆಗೆ ಕಾರು ಮಾರಾಟಕ್ಕಿದೆ ಎಂದು ಜನರನ್ನ ನಂಬಿಸಿ ಲಕ್ಷ ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿದ್ದನಂತೆ.
ಕಾರ್ ಮಾಲೀಕರು ಹಾಗೂ ಗ್ರಾಹಕರಿಬ್ಬರಿಗೂ ಅನುಮಾನ ಬಾರದ ರೀತಿಯಲ್ಲಿ ಕೃತ್ಯವೆಸಗುತ್ತಿದ್ದ ನಂದೀಶ್ ಇದಲ್ಲದೆ ಬೇರೆ ಬೇರೆ ಹೆಸರಿನಲ್ಲಿ ನನಗೆ ಸೆಕೆಂಡ್ ಹ್ಯಾಂಡ್ ಕಾರ್ ಅಥವಾ ಬೈಕ್ ಬೇಕು ಅಂತಾ ನಕಲಿ ಜಾಹಿರಾತು ಸಹ ನೀಡುತ್ತಿದ್ದನಂತೆ. ಒಂದು ವೇಳೆ ಯಾರಾದ್ರೂ ಇವನನ್ನ ಸಂಪರ್ಕಿಸಿದರೆ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರ್ ಅಥವಾ ಬೈಕ್ನ ಕದ್ದು ಪರಾರಿಯಾಗುತ್ತಿದ್ದನಂತೆ.
ಹೀಗೆ, ಹಲವಾರು ಬಾರಿ ಜನರಿಗೆ ವಂಚನೆ ಮಾಡಿದ್ದ ನಂದೀಶ್ ಬಂದ ಹಣದಿಂದ ಐಷಾರಾಮಿ ವಸ್ತುಗಳನ್ನು ಖರೀದಿಸಿ ಎನ್ಜಾಯ್ ಮಾಡ್ತಿದ್ದ. ಈತನ ಕುರಿತು ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ನಂದೀಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತನಿಂದ 9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಒಂದು ಕಾರು, ಎರಡು ದ್ವಿಚಕ್ರ ವಾಹನ ಹಾಗೂ ಗೃಹ ಉಪಯೋಗಿ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿದೆ.