ರಜೆ ಮುಗಿಸಿ, ಉ. ಪ್ರದೇಶದಲ್ಲಿ ಕ್ವಾರಂಟೈನ್​ನಲ್ಲಿದ್ದ ಬೆಳ್ತಂಗಡಿ ಯೋಧ ಹೃದಯಾಘಾತಕ್ಕೆ ಬಲಿ

ದಕ್ಷಿಣ ಕನ್ನಡ/ಉತ್ತರ ಪ್ರದೇಶ: ಕರುನಾಡಿನ ಯೋಧರಿಗೆ ಇಂದು ಕರಾಳ ದಿನವಾಗಿ ಮಾಪಾರ್ಡಾಗಿದೆ. ಆನೇಕಲ್​ನಲ್ಲಿ ಓರ್ವ BSF​ ಯೋಧನಲ್ಲಿ ಸೋಂಕು ಪತ್ತೆಯಾಗಿದ್ದರೆ, ಮತ್ತೊಂದೆಡೆ ಹಾಸನ ಮೂಲದ CRPF ಯೋಧರೊಬ್ಬರು ಛತ್ತೀಸ್‌ಗಢದ ಸುಕ್ಮಾದಲ್ಲಿ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದರು. ಇದೀಗ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮ ಮೂಲದ ಸೈನಿಕರೊಬ್ಬರೂ ಸಹ ಹೃದಯಾಘಾತದಿಂದ ಕ್ವಾರಂಟೈನ್ ಕೇಂದ್ರದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಯೋಧರನ್ನು 34 ವರ್ಷದ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಕಳೆದ 14 ವರ್ಷಗಳಿಂದ […]

ರಜೆ ಮುಗಿಸಿ, ಉ. ಪ್ರದೇಶದಲ್ಲಿ ಕ್ವಾರಂಟೈನ್​ನಲ್ಲಿದ್ದ ಬೆಳ್ತಂಗಡಿ ಯೋಧ ಹೃದಯಾಘಾತಕ್ಕೆ ಬಲಿ
ಸಾಧು ಶ್ರೀನಾಥ್​

Updated on: Jun 13, 2020 | 6:16 PM

ದಕ್ಷಿಣ ಕನ್ನಡ/ಉತ್ತರ ಪ್ರದೇಶ: ಕರುನಾಡಿನ ಯೋಧರಿಗೆ ಇಂದು ಕರಾಳ ದಿನವಾಗಿ ಮಾಪಾರ್ಡಾಗಿದೆ. ಆನೇಕಲ್​ನಲ್ಲಿ ಓರ್ವ BSF​ ಯೋಧನಲ್ಲಿ ಸೋಂಕು ಪತ್ತೆಯಾಗಿದ್ದರೆ, ಮತ್ತೊಂದೆಡೆ ಹಾಸನ ಮೂಲದ CRPF ಯೋಧರೊಬ್ಬರು ಛತ್ತೀಸ್‌ಗಢದ ಸುಕ್ಮಾದಲ್ಲಿ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದರು.

ಇದೀಗ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮ ಮೂಲದ ಸೈನಿಕರೊಬ್ಬರೂ ಸಹ ಹೃದಯಾಘಾತದಿಂದ ಕ್ವಾರಂಟೈನ್ ಕೇಂದ್ರದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಯೋಧರನ್ನು 34 ವರ್ಷದ ಸಂದೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಕಳೆದ 14 ವರ್ಷಗಳಿಂದ ಸೇನೆಯಲ್ಲಿ‌ ಸೇವೆ ಸಲ್ಲಿಸುತ್ತಿದ್ದ ಸಂದೇಶ್ ಶೆಟ್ಟಿಯವರು ಇತ್ತೀಚೆಗೆ ರಜೆ ಮುಗಿಸಿ ಉತ್ತರ ಪ್ರದೇಶದಲ್ಲಿದ್ದ ತಮ್ಮ ಸೇನಾ ನೆಲೆಗೆ ಕರ್ತವ್ಯಕ್ಕೆ ಹಾಜರಾಗಲು ಕಳೆದ ಸೋಮವಾರ ಹಿಂದಿರುಗಿದ್ದರು. ಈ ವೇಳೆ ಅಂತಾರಾಜ್ಯ ಪ್ರವಾಸ ಕೈಗೊಂಡಿದ್ದರಿಂದ ಅಲ್ಲಿನ ಮಥುರಾ ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಇವರನ್ನು ಇರಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಸಂದೇಶ್ ಇಂದು ತಾವಿದ್ದ ಕ್ವಾರಂಟೈನ್ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Published On - 6:15 pm, Sat, 13 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us