ನಾಲ್ಕೇ 4 ಮದುವೆ, 13 ಹುಡುಗಿಯರಿಗೆ ಮೋಸ: ಐನಾತಿ ಭೂಪನ ಕತೆ ಕೇಳಿ ಪೊಲೀಸರೇ ಸುಸ್ತು
ಬೆಂಗಳೂರು: ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದಿದ್ದಳಂತೆ ಐನಾತಿ ಚೆಲುವೆ. ಇಂಥದ್ದೆ ಒಂದು ಪ್ರಕರಣ ಈಗ ಬೆಂಗಳೂರಲ್ಲಿ ಸದ್ದು ಮಾಡ್ತಿದೆ. ಗುಂಡು ಗುಂಡಾಗಿರುವ ಐನಾತಿ ಒಬ್ಬನಿಗೆ ಪಾಪ ಪೊಲೀಸರು, ಎನಪ್ಪ ಮದುವೆ ಗಿದುವೆ ಏನಾದ್ರೂ ಆಗಿದೆಯಾ? ಯಾಕೆ ಪೊಲೀಸ್ ಸ್ಟೇಷನ್ ಏರೋ ಕೇಲಸ ಅಂತಾ ಕೇಳವ್ರೆ. ಈ ಐನಾತಿ ಸುರೇಶ ಅನ್ನೋ ಭೂಪ ಮೆಲ್ಲಗೆ, ಏನಿಲ್ಲ ಸಾರ್ ನಾಲ್ಕೇ ನಾಲ್ಕು ಮದುವೆಯಾಗಿವೆ, ಇನ್ನೂ ಒಂದಿಷ್ಟು ಬಾಕಿ ಇವೆ ಅಂದ್ನಂತೆ. ಅವನ ಉತ್ತರ ಕೇಳಿದ […]
ಬೆಂಗಳೂರು: ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದಿದ್ದಳಂತೆ ಐನಾತಿ ಚೆಲುವೆ. ಇಂಥದ್ದೆ ಒಂದು ಪ್ರಕರಣ ಈಗ ಬೆಂಗಳೂರಲ್ಲಿ ಸದ್ದು ಮಾಡ್ತಿದೆ. ಗುಂಡು ಗುಂಡಾಗಿರುವ ಐನಾತಿ ಒಬ್ಬನಿಗೆ ಪಾಪ ಪೊಲೀಸರು, ಎನಪ್ಪ ಮದುವೆ ಗಿದುವೆ ಏನಾದ್ರೂ ಆಗಿದೆಯಾ? ಯಾಕೆ ಪೊಲೀಸ್ ಸ್ಟೇಷನ್ ಏರೋ ಕೇಲಸ ಅಂತಾ ಕೇಳವ್ರೆ. ಈ ಐನಾತಿ ಸುರೇಶ ಅನ್ನೋ ಭೂಪ ಮೆಲ್ಲಗೆ, ಏನಿಲ್ಲ ಸಾರ್ ನಾಲ್ಕೇ ನಾಲ್ಕು ಮದುವೆಯಾಗಿವೆ, ಇನ್ನೂ ಒಂದಿಷ್ಟು ಬಾಕಿ ಇವೆ ಅಂದ್ನಂತೆ. ಅವನ ಉತ್ತರ ಕೇಳಿದ ಪೊಲೀಸರು ಸುಸ್ತೋ ಸುಸ್ತು.
ಮುಗ್ದ ಯುವತಿಯರೇ ಐನಾತಿ ಸುರೇಶನ ಟಾರ್ಗೆಟ್ ಹೌದು, ಬ್ಯಾಡರಹಳ್ಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಕಾಮುಕ ಅಲಿಯಾಸ್ ಸುರೇಶ್ ತನ್ನ ಒಂದೊಂದೆ ಲೀಲೆಗಳನ್ನ ಹೇಳ್ತಾಹೋದ್ರೆ.. ಕೇಳ್ತಿದ್ದ ಪೊಲೀಸರೇ ಸುಸ್ತೋ ಸುಸ್ತು.. ಈ ಐನಾತಿ ಸುರೇಶ್ ಇದುವರೆಗೆ ಅಧಿಕೃತವಾಗಿ ನಾಲ್ಕು ಮದುವೆ ಆಗಿದ್ದಾನಂತೆ. ಇನ್ನೂ 13 ಜನ ಹುಡುಗಿಯರಿಗೆ ಮದುವೆ ಆಗ್ತೀನಿ ಅಂತಾ ಬೆಂಗಳೂರಿಂದಲೇ ತಾಜ್‌ಮಹಲ್ ತೋರಿಸಿ, ರಸ ಘಳಿಗೆ ಅನುಭವಿಸಿದ್ದಾನೆ. ನಂತರ ಯೂಸ್ ಅಂಡ್ ಥ್ರೋ ಥರ ಸಾರಾಸಗಟಾಗಿ ಕೈಕೊಟ್ಟಿದ್ದಾನೆ.
ಹುಡುಗಿಯರ ಬ್ಲ್ಯಾಕ್‌ಮೇಲ್ ಕೇಸ್ 2011ರಲ್ಲೇ ದಾಖಲು ಇಷ್ಟೇ ಅಲ್ಲ ಈ ಖತರ್‌ನಾಕ್ ಆಸಾಮಿ ಕಥೆ ಕೇಳಿ ಇವನ ಇತಿಹಾಸದ ಪುಟಗಳನ್ನ ತಿರುವಿ ಹಾಕಿದ್ದಾರೆ ಪೊಲೀಸರು. ಆಗ ಮತ್ತಷ್ಟು ಭಯಂಕರ ರಹಸ್ಯಗಳು ಹೊರಬಿದ್ದಿವೆ. ಇವನ ಮಾತಿಗೆ ಮರುಳಾಗಿ ಲವ್ವಲ್ಲಿ ಬಿದ್ದಿರೋ ಮಗ್ದೆಯರು ಮೈಮರೆತಾಗ, ಮೆಲ್ಲನೇ ಅದನ್ನ ಗುಟ್ಟಾಗಿ ಚಿತ್ರೀಕರಿಸಿಕೊಂಡು ಬ್ಲ್ಯಾಕ್ ಮೇಲ್ ಬೇರೆ ಮಾಡಿದ್ದಾನೆ. ಈ ಸಂಬಂಧ 2011ರಲ್ಲೇ ಇವನ ಮೇಲೆ ಕೇಸ್ ರಿಜಿಸ್ಟರ್ ಆಗಿದೆ.
ನಿರುದ್ಯೋಗಿ ಯುವಕರಿಗೂ ಮಸಾಲೆ ವಡೆ ತಿನಿಸಿದ್ದಾನೆ! ಈ ಸುರೇಶ್ ಅನ್ನೋ ಭೂಪನ ಇತಿಹಾಸ ಪುಟಗಳಿಗೆ ಸಿಕ್ಕಿ ಬಿದ್ದ ಮತ್ತೊಂದು ಕೇಸ್ ಅಂದ್ರೆ ಕೇವಲ ಹುಡುಗಿಯರು ಮಾತ್ರವಲ್ಲ, ನಿರುದ್ಯೋಗಿ ಯುವಕರಿಗೂ ಈತ ಮಸಾಲೆ ವಡೆ ತಿನಿಸಿದ್ದಾನೆ. ತನಗೆ ಆ ಮಿನಿಸ್ಟರ್ ಗೊತ್ತು, ಈ ಮಂತ್ರಿ ಗೊತ್ತು, ಸಿನಿಮಾ ಆಕ್ಟರ್‌ಗಳು ತುಂಬಾ ಕ್ಲೋಸ್ ಅಂತಾ ಪುಂಗಿ ಬಿಟ್ಟು, ಅವರೊಟ್ಟಿಗಿದ್ದ ಪೊಟೋಗಳನ್ನ ತೋರಿಸಿ ಲಕ್ಷಾಂತರ ಹಣ ಪೀಕಿದ್ದಾನೆ. ಈ ಸಂಬಂಧ ಬ್ಯಾಡರಹಳ್ಳಿ ಅಷ್ಟೇ ಅಲ್ಲ, ಆರ್ ಆರ್ ನಗರ, ಕೆಎಸ್ ಲೇಔಟ್, ಕೆಂಗೇರಿ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಸಾಲು ಸಾಲು ಪ್ರಕರಣಗಳು ಇವನ ವಿರುದ್ಧ ದಾಖಲಾಗಿವೆ.
Published On - 7:50 pm, Sat, 13 June 20