Aero India 2021: BIAL ಏರ್‌ಪೋರ್ಟ್‌ಗೆ ತೆರಳುವ ಮಾರ್ಗ ಬದಲಾವಣೆ.. ಡಿಟೇಲ್ಸ್ ಇಲ್ಲಿದೆ

|

Updated on: Feb 02, 2021 | 10:51 AM

ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3ರಿಂದ ಫೆ. 5ರವರೆಗೆ ಏರೋ ಶೋ ನಡೆಯಲಿದ್ದು ಮೂರು ದಿನ ಬೆಳಗ್ಗೆ 5ರಿಂದ ರಾತ್ರಿ 10ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

Aero India 2021: BIAL ಏರ್‌ಪೋರ್ಟ್‌ಗೆ ತೆರಳುವ ಮಾರ್ಗ ಬದಲಾವಣೆ.. ಡಿಟೇಲ್ಸ್ ಇಲ್ಲಿದೆ
Aero India 2021: BIAL ಏರ್‌ಪೋರ್ಟ್‌ಗೆ ತೆರಳುವ ಮಾರ್ಗ ಬದಲಾವಣೆ..
Follow us on

ದೇವನಹಳ್ಳಿ: ನಾಳೆಯಿಂದ 13 ನೇ ಆವೃತ್ತಿಯ ಏರೋ ಶೋ ಆರಂಭವಾಗುತ್ತಿದೆ. ನಾಳೆಯಿಂದ 3 ದಿನ ‘ಏರೋ ಇಂಡಿಯಾ ಶೋ’ Aero India 2021 ನಡೆಯಲಿರುವ ಹಿನ್ನೆಲೆಯಲ್ಲಿ 3 ದಿನ ಏರ್‌ಪೋರ್ಟ್‌ಗೆ ತೆರಳುವ ಮಾರ್ಗ ಬದಲಾವಣೆಯಾಗಲಿದೆ.

ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3ರಿಂದ ಫೆ. 5ರವರೆಗೆ ಏರೋ ಶೋ ನಡೆಯಲಿದ್ದು ಮೂರು ದಿನ ಬೆಳಗ್ಗೆ 5ರಿಂದ ರಾತ್ರಿ 10ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರು ಪಶ್ಚಿಮ, ಉತ್ತರದಿಂದ ಬರುವ ವಾಹನಗಳಿಗೆ ಇದರಿಂದ ಕೊಂಚ ತೊಂದರೆ ಉಂಟಾಗಲಿದ್ದು ಗೊರಗುಂಟೆಪಾಳ್ಯ, ಬಿಇಎಲ್ ಸರ್ಕಲ್, MS ಪಾಳ್ಯ, ಯಲಹಂಕ ಮದರ್ ಡೈರಿ, ರಾಜಾನುಕುಂಟೆ, MVIT ಜಂಕ್ಷನ್, ಚಿಕ್ಕಜಾಲ ಮೂಲಕ ಏರ್‌ಪೋರ್ಟ್ ಟೋಲ್‌ಗೇಟ್ ತಲುಪುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಬೆಂಗಳೂರು ದಕ್ಷಿಣ, ಕೇಂದ್ರದಿಂದ ಬರುವ ವಾಹನಗಳು ಬಸವೇಶ್ವರ ಸರ್ಕಲ್, ಸದಾಶಿವನಗರ ಪೊಲೀಸ್ ಠಾಣೆ, ಹೆಬ್ಬಾಳ ಸರ್ಕಲ್, ನಾಗವಾರ ಜಂಕ್ಷನ್, ಥಣಿಸಂದ್ರ ಮುಖ್ಯರಸ್ತೆ, ರೇವಾ ಕಾಲೇಜ್ ಜಂಕ್ಷನ್, ಬಾಗಲೂರು, ಮೈಲನಹಳ್ಳಿ ಮೂಲಕ ಏರ್‌ಪೋರ್ಟ್ ಟೋಲ್‌ಗೇಟ್ ತಲುಪುವಂತೆ ಸೂಚಿಸಲಾಗಿದೆ.

ಬೆಂಗಳೂರು ಪೂರ್ವದಿಂದ ಏರ್‌ಪೋರ್ಟ್ ತಲುಪಲು ಟಿನ್‌ಫ್ಯಾಕ್ಟರಿ, ರಾಮಮೂರ್ತಿನಗರ, ಹೆಣ್ಣೂರು ಕ್ರಾಸ್, ಬೈರತಿ ಕ್ರಾಸ್, ಹೊಸೂರು ಬಂಡೆ, ಜಾಗಲಹಟ್ಟಿ, ಗುಂಡಪ್ಪ ಸರ್ಕಲ್, ಬಾಗಲೂರು, ಬಿ.ಕೆ.ಹಳ್ಳಿ ಮೂಲಕ ಬೇಗೂರು ಬ್ಯಾಕ್‌ಗೇಟ್‌ನಿಂದ ಏರ್‌ಪೋರ್ಟ್‌ಗೆ ರೀಚ್ ಆಗುಬೇಕಾಗುತ್ತೆ. ಇನ್ನು ಹೆಬ್ಬಾಳದಿಂದ ಏರ್‌ಪೋರ್ಟ್‌ವರೆಗೆ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು ಹೈದರಾಬಾದ್‌ನತ್ತ ತೆರಳುವ ವಾಹನಗಳಿಗೂ ಇದು ಅನ್ವಯಿಸಲಿದೆ. ಆದ್ರೆ ಕೇವಲ ಏರ್‌ಶೋಗೆ ಹೋಗುವ ವಾಹನಗಳಿಗೆ ಮಾತ್ರ ಅವಕಾಶ ಇರುತ್ತೆ.

ಲೋಕದ ಹಕ್ಕಿಗಳ ತಾಲೀಮು

Aero India 2021

ನಾಳೆಯಿಂದ ಏರೋ ಶೋ 2021 ಆರಂಭ ಹಿನ್ನೆಲೆಯಲ್ಲಿ ಇಂದು ಲೋಕದ ಹಕ್ಕಿಗಳ ತಾಲೀಮು ನಡೆಯಲಿದೆ. ಒಟ್ಟು 14 ದೇಶಗಳು ಏರೋ ಶೋ ನಲ್ಲಿ ಭಾಗಿಯಾಗಲಿವೆ. ಈ ಬಾರಿ ರಫೆಲ್‌ ಯುದ್ಧ ವಿಮಾನ ಕೂಡ ಭಾಗಿಯಾಗಲಿದೆ. ಇದೇ ಮೊದಲ‌ ಬಾರಿಗೆ ಸೂರ್ಯಕಿರಣ್ ಹಾಗೂ ಸಾರಂಗ ತಂಡ ಜಂಟಿಯಾಗಿ ಪ್ರದರ್ಶನ ನೀಡಲಿದೆ. ನಾಳೆ ಬೆಳಗ್ಗೆ 9:30 ರ ಸುಮಾರಿಗೆ ಏರೋ ಶೋಗೆ ಚಾಲನೆ ಸಿಗಲಿದ್ದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಲಿದ್ದಾರೆ.

ಪಾಕ್ ಗೆ ಡವಡವ, ಚೀನಾ ಎದೆಯಲ್ಲಿ ನಡುಕ: ಮಿಂಚಿನಂತೆ ಭಾರತಕ್ಕೆ ಬರುತ್ತಿದೆ ಫೈಟರ್ ಜೆಟ್

Published On - 10:44 am, Tue, 2 February 21