Gas tanker overturns ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಮೀಪದಲ್ಲಿ ಬೆಂಕಿ ಬಳಸದಂತೆ ಸೂಚನೆ
ರಸ್ತೆ ಸಂಚಾರ ಬಹುತೇಕ ವ್ಯತ್ಯಯವಾಗಿದ್ದು, ಮಂಗಳೂರು-ಮಾಣಿ-ಪುತ್ತೂರು ಮಾರ್ಗವಾಗಿ ಸಂಚರಿಸುವವರು ಬದಲಿ ಮಾರ್ಗ ಪುತ್ತೂರು- ಕಬಕ—ವಿಟ್ಲ-ಕಲ್ಲಡ್ಕ ಮಾರ್ಗವಾಗಿ ಸಂಚರಿಸಬಹುದಾಗಿದೆ.
ಮಂಗಳೂರು: ಜಿಲ್ಲೆಯಿಂದ ಬೆಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಂಟ್ವಾಳ ತಾಲೂಕಿನ ಸೂರಿಕುಮೇರುವಿನ ಮಸೀದಿ ಎದುರು ರಸ್ತೆ ಮಧ್ಯೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ. ಅದೃಷ್ಟವಶಾತ್ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗಿಲ್ಲ.
ಸುತ್ತಮುತ್ತಲಿನ ಮನೆಗಳಲ್ಲಿ ಬೆಂಕಿ ಬಳಸದಂತೆ ಮಸೀದಿಯ ಮೈಕ್ನಲ್ಲಿ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆ ಸಂಚಾರ ಬಹುತೇಕ ವ್ಯತ್ಯಯವಾಗಿದ್ದು, ಮಂಗಳೂರು-ಮಾಣಿ-ಪುತ್ತೂರು ಮಾರ್ಗವಾಗಿ ಸಂಚರಿಸುವವರು ಬದಲಿ ಮಾರ್ಗ ಪುತ್ತೂರು- ಕಬಕ—ವಿಟ್ಲ-ಕಲ್ಲಡ್ಕ ಮಾರ್ಗವಾಗಿ ಸಂಚರಿಸಬಹುದಾಗಿದೆ.
Published On - 10:51 am, Tue, 2 February 21