Visit to Rashtrapati Bhavan ಫೆಬ್ರವರಿ 6ರಿಂದ ಸಾರ್ವಜನಿಕರ ಭೇಟಿಗೆ ತೆರೆದುಕೊಳ್ಳಲಿದೆ ರಾಷ್ಟ್ರಪತಿ ಭವನ
ಫೆಬ್ರವರಿ 6ರಿಂದ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ವೆಬ್ಸೈಟ್ ಮೂಲಕ ಭವನಕ್ಕೆ ಪ್ರವೇಶಿಸುವ ಸಮಯವನ್ನು ನಿಗದಿ ಮಾಡಿಕೊಳ್ಳಬಹುದಾಗಿದೆ.

ರಾಷ್ಟ್ರಪತಿ ಭವನ
ಬೆಂಗಳೂರು: ಹತ್ತು ತಿಂಗಳ ಕೊರೊನಾ ಹಾವಳಿ ಬಳಿಕ ಫೆಬ್ರವರಿ 6ರಿಂದ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಪತಿ ಭವನದ ವೆಬ್ಸೈಟ್ ಮೂಲಕ ಭೇಟಿ ಸಮಯ ನಿಗದಿ ಮಾಡಿಕೊಳ್ಳಬಹುದಾಗಿದೆ.
ಕೊವಿಡ್ ಹಿನ್ನೆಲೆಯಲ್ಲಿ ಮಾರ್ಚ್ 13ರಿಂದ ಸಾರ್ವಜನಿಕರಿಗೆ Visit to Rashtrapati Bhavan ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ವಾರಾಂತ್ಯ ಸರ್ಕಾರಿ ರಜೆ ಹೊರತುಪಡಿಸಿ ಶನಿವಾರ, ಭಾನುವಾರದಂದು ರಾಷ್ಟ್ರಪತಿ ಭವನವನ್ನು ತೆರೆಯಲಾಗುತ್ತದೆ. ಸಾರ್ವಜನಿಕರು ವೆಬ್ಸೈಟ್ ಮೂಲಕ ಸಮಯ ನಿಗದಿ ಮಾಡಿಕೊಳ್ಳಬಹುದು.
Budget 2021 Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು