ದೊಡ್ಡ ನಿಟ್ಟುಸಿರು ಬಿಟ್ಟ ಬೆಂಗಳೂರು, ಹೊಂಗಸಂದ್ರದಲ್ಲಿ 171 ಮಂದಿಗೆ ಸೋಂಕು ಇಲ್ಲ

ದೊಡ್ಡ ನಿಟ್ಟುಸಿರು ಬಿಟ್ಟ ಬೆಂಗಳೂರು, ಹೊಂಗಸಂದ್ರದಲ್ಲಿ 171 ಮಂದಿಗೆ ಸೋಂಕು ಇಲ್ಲ

ಬೆಂಗಳೂರು: ಹೊಂಗಸಂದ್ರ… ಈ ಏರಿಯಾದ ಹೆಸ್ರು ಕೇಳಿದ್ರೆ ಸಾಕು ಬೆಂಗ್ಳೂರು ಜನ ನಿದ್ದೆಯಲ್ಲೂ ಎದ್ದು ಕೂರ್ತಾರೆ. ಅಲ್ಲಿನ ಜನರ ನೆರಳು ಕೂಡ ಸೋಕೋದು ಬೇಡ ಅಂತಾರೆ. ಯಾಕಂದ್ರೆ ಹೊಂಗಸಂದ್ರದಲ್ಲಿದ್ದ ಬಿಹಾರಿ ಕಾರ್ಮಿಕನಿಂದ ಬರೋಬ್ಬರಿ 29ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಿರೋದು ಎಲ್ರನ್ನೂ ಚಿಂತೆಗೀಡು ಮಾಡಿತ್ತು. ಅದ್ರಲ್ಲೂ ಹೊಂಗಸಂದ್ರದ ನಿವಾಸಿಗಳಂತೂ ಯಾವಾಗ ಮಾರಿ ವಕ್ಕರಿಸುತ್ತೋ ಅನ್ನೋ ಭೀತಿಯಿಂದ ಪತರಗುಟ್ಟಿ ಹೋಗಿದ್ರು. ಹೀಗಾಗಿ ಬಿಬಿಎಂಪಿ ಸಿಬ್ಬಂದಿ ಸ್ಥಳೀಯರನ್ನೆಲ್ಲಾ ಕರೆದುಕೊಂಡು ಪರೀಕ್ಷೆ ಮಾಡಿಸಿತ್ತು. ನಿನ್ನೆ ವರದಿ ಬಂದಿದ್ದು ಹೊಂಗಸಂದ್ರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಹೊಂಗಸಂದ್ರದ 171 ಜನರ ವರದಿ ನೆಗೆಟಿವ್! ಹೌದು ಬಿಬಿಎಂಪಿ ಅಧಿಕಾರಿಗಳು, ಹೊಂಗಸಂದ್ರದ 171 ಜನರ ಥ್ರೋಟ್ ಸ್ವ್ಕ್ಯಾಬ್​ನ ಪರೀಕ್ಷೆಗೆ ಕಳುಹಿಸಿತ್ತು. ಭಾನುವಾರ 49, ಸೋಮವಾರ 73 ಹಾಗೂ ಮಂಗಳವಾರ 72 ಜನರ ಸ್ಯಾಂಪಲ್​ನ ಪರೀಕ್ಷಿಸಲಾಗಿದೆ. ಇದ್ರಲ್ಲಿ ಒಬ್ಬರಿಗೂ ಸೋಂಕು ಪತ್ತೆಯಾಗಿಲ್ಲ. 171 ಮಂದಿಯ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ. ಅದ್ರಲ್ಲೂ ವಿದ್ಯಾಜ್ಯೋತಿ ನಗರದ ಯಾವುದೇ ರಿಪೋರ್ಟ್​ ಬಾಕಿ ಉಳಿದಿಲ್ಲ. ಇದ್ರಿಂದ ಸ್ಥಳೀಯರು ಖುಷಿಪಟ್ರು.

ಹೊಂಗಸಂದ್ರಕ್ಕೆ ವಿಶೇಷ ಅಧಿಕಾರಿ ಭೇಟಿ! ಇನ್ನು ನಿನ್ನೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಿಶೇಷಾಧಿಕಾರಿ ಹೊಂಗಸಂದ್ರಕ್ಕೆ ಅನ್ಬು ಕುಮಾರ್ ಭೇಟಿ ನೀಡಿದ್ರು. ಮಳೆ ಬಂದಿದ್ದಕ್ಕೆ ಸೋಂಕು ಹರಡೋ ಸಾಧ್ಯತೆ ಹೆಚ್ಚಿರುತ್ತೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಹೀಗಾಗಿ ಇಡೀ ಏರಿಯಾವನ್ನ ಪರಿಶೀಲಿಸಿ, ಏನಾದ್ರೂ ಸಮಸ್ಯೆಗಳಿದ್ದಾವಾ ಅಂತಾ ಸ್ಥಳೀಯರನ್ನ ಪ್ರಶ್ನಿಸಿದ್ರು.

ತದನಂತ್ರ ಮಾತ್ನಾಡಿದ ಅನ್ಬು ಕುಮಾರ್, ಏರಿಯಾ ತುಂಬಾ ಔಷಧವನ್ನು ಸಿಂಪಡಿಸಲಾಗಿದೆ. ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಅಂದ್ರು.

ಒಟ್ನಲ್ಲಿ ಬಿಹಾರದ ಕಾರ್ಮಿಕನಿಂದ ಶುರುವಾಗಿದ್ದ ಸೋಂಕಿನ ಭೀತಿ ನಿನ್ನೆ ಕಮ್ಮಿಯಾಗಿದೆ. ವಿದ್ಯಾಜ್ಯೋತಿ ನಗರದ ನಿವಾಸಿಗಳಂತೂ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಮಹಾಮಾರಿ ಯಾವಾಗ, ಹೇಗೆ ಯಾರಿಂದ ಎಂಟ್ರಿ ಕೊಡುತ್ತೋ ಹೇಳೋಕಾಗಲ್ಲ. ಹೀಗಾಗಿ ಯಾವುದಕ್ಕೂ ಎಚ್ಚರದಿಂದ ಇದ್ರೆ ಒಳ್ಳೇದು. https://www.facebook.com/Tv9Kannada/videos/572985613343612/

Published On - 7:26 am, Thu, 30 April 20

Click on your DTH Provider to Add TV9 Kannada