ಕರ್ತವ್ಯದ ಸಮಯದಲ್ಲಿ ನಗರಸಭೆ ಸಿಬ್ಬಂದಿಯಿಂದ ಟಿಕ್ ಟಾಕ್

ಕರ್ತವ್ಯದ ಸಮಯದಲ್ಲಿ ನಗರಸಭೆ ಸಿಬ್ಬಂದಿಯಿಂದ ಟಿಕ್ ಟಾಕ್

ಹಾಸನ: ಕರ್ತವ್ಯದ ಸಮಯದಲ್ಲಿ ನಗರಸಭೆ ಸಿಬ್ಬಂದಿ ಟಿಕ್ ಟಾಕ್ ಮಾಡಿ ಜನರ ಆಕ್ರೋಶಕ್ಕೆ ಕಾರಣರಾಗಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಅರಸೀಕೆರೆ ನಗರಸಭೆ ಸಿಬ್ಬಂದಿಯಿಂದ ಟಿಕ್ ಟಾಕ್ ಮಾಡಲಾಗಿದೆ. ಇಡೀ ದೇಶದ ರಕ್ಷಣೆಗೆ ಕೊರೊನಾ ವಿರುದ್ಧ ಕೊರೊನಾ ವಾರಿಯರ್ಸ್ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.

ಆದರೆ ಇಲ್ಲಿ ನಗರಸಭೆ ಸಿಬ್ಬಂದಿಗಳೇ ಟಿಕ್ ಟಾಕ್ ಮಾಡಿತ್ತಿದ್ದು, ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅರಸೀಕೆರೆ ನಗರಸಭೆಯ ಕೆಲ ಸಿಬ್ಬಂದಿಗಳ ಟಿಕ್ ಟಾಕ್ ವೀಡಿಯೋ ವೈರಲ್ ಆಗಿದ್ದು, ಟಿಕ್ ಟಾಕ್ ಮಾಡಿದ್ದ ಸಿಬ್ಬಂದಿಗೆ ನಗರಸಭೆ ಆಯುಕ್ತರು ಶೋಕಾಸ್ ನೋಟಿಸ್ ನೀಡಿದ್ದಾರೆ.

ಟಿಕ್ ಟಾಕ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದ್ದು, ಕರ್ತವ್ಯನಿರತ ಸಿಬ್ಬಂದಿಗಳ ವರ್ತನೆ ವಿರುದ್ದ ಜನರ ತೀವೃ ಆಕ್ರೋಶ ಹೊರಹಾಕಿದ್ದಾರೆ.

Published On - 8:56 am, Thu, 30 April 20

Click on your DTH Provider to Add TV9 Kannada