ಬೆಟ್ಟದಿಂದ ಜಿಗಿದು ಬೆಂಗಳೂರಿನ ಹೆಲ್ತ್​ ಇನ್ಸ್​ಪೆಕ್ಟರ್ ಆತ್ಮಹತ್ಯೆ!

ರಾಮನಗರ: ತಾಲೂಕಿನ ಎಸ್​ಆರ್​ಎಸ್ ಬೆಟ್ಟದಿಂದ ಜಿಗಿದು ಹೆಲ್ತ್​ ಇನ್ಸ್​ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಲಹಂಕದಲ್ಲಿ ಆರೋಗ್ಯ ನಿರೀಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರುಕ್ಮಿಣಿ ನಗರದ ನಿವಾಸಿಯಾಗಿರುವ ಪ್ರಶಾಂತ್, ಮೂರು ದಿನಗಳ ಹಿಂದೆ ಮನೆಯಿಂದ ತೆರಳಿದ್ದರು. ಮಗ ನಾಪತ್ತೆಯಾಗಿರುವುದಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ, ಎಸ್ಅರ್​ಎಸ್ ಬೆಟ್ಟದ ಕಡೆ ಲೊಕೇಷನ್ ತೋರಿಸಿದೆ. ಬೆಟ್ಟದ ಬಳಿ ಬಂದ ಪೊಲೀಸರಿಗೆ ಹೆಲ್ತ್​ ಇನ್ಸ್​ಪೆಕ್ಟರ್ ಪ್ರಶಾಂತ್​ ಅವರ ಬೈಕ್ […]

ಬೆಟ್ಟದಿಂದ ಜಿಗಿದು ಬೆಂಗಳೂರಿನ ಹೆಲ್ತ್​ ಇನ್ಸ್​ಪೆಕ್ಟರ್ ಆತ್ಮಹತ್ಯೆ!

Updated on: Feb 17, 2020 | 1:13 PM

ರಾಮನಗರ: ತಾಲೂಕಿನ ಎಸ್​ಆರ್​ಎಸ್ ಬೆಟ್ಟದಿಂದ ಜಿಗಿದು ಹೆಲ್ತ್​ ಇನ್ಸ್​ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಲಹಂಕದಲ್ಲಿ ಆರೋಗ್ಯ ನಿರೀಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ರುಕ್ಮಿಣಿ ನಗರದ ನಿವಾಸಿಯಾಗಿರುವ ಪ್ರಶಾಂತ್, ಮೂರು ದಿನಗಳ ಹಿಂದೆ ಮನೆಯಿಂದ ತೆರಳಿದ್ದರು. ಮಗ ನಾಪತ್ತೆಯಾಗಿರುವುದಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ, ಎಸ್ಅರ್​ಎಸ್ ಬೆಟ್ಟದ ಕಡೆ ಲೊಕೇಷನ್ ತೋರಿಸಿದೆ.

ಬೆಟ್ಟದ ಬಳಿ ಬಂದ ಪೊಲೀಸರಿಗೆ ಹೆಲ್ತ್​ ಇನ್ಸ್​ಪೆಕ್ಟರ್ ಪ್ರಶಾಂತ್​ ಅವರ ಬೈಕ್ ಸಿಕ್ಕಿದೆ. ಬಳಿಕ ಬೆಟ್ಟದ ಸುತ್ತಮುತ್ತ ಹುಡುಕಿದಾಗ ಪ್ರಶಾಂತ್ ಮೃತದೇಹ ಪತ್ತೆಯಾಗಿದೆ. ಸದ್ಯ ಹೆಲ್ತ್​ ಇನ್ಸ್​ಪೆಕ್ಟರ್ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.