
ಬೆಂಗಳೂರು: ಬೆಂಗಳೂರಿನ ಪಾದರಾಯನಪುರ ಗಲಭೆಯ ಪ್ರಮುಖ ರೂವಾರಿ ಎನ್ನಲಾದ ಪರವೇಜ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.
ಪಾದರಾಯನಪುರದಲ್ಲಿ ಗಲಾಟೆ ಸೃಷ್ಟಿಸಿ, ದಾಂದಲೆ ನಡೆಸಿ ಪರಾರಿಯಾಗಿದ್ದ ಸೈಯದ್ ಪರವೇಜ್ ಪಾಷಾನನ್ನು ಬೆಂಗಳೂರಿನ ಜೆ.ಜೆ.ನಗರ ಠಾಣೆ ಪೊಲೀಸರು ಇವತ್ತು ಬಂಧಿಸಿದ್ದಾರೆ.
ಈ ಆರೋಪಿ ಗಲಭೆ ಸೃಷ್ಟಿಸಿ ನಂತರ ಅಲ್ಲಿಂದ ಪರಾರಿಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸಿಕ್ಕ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸವಲ್ಲಿ ಯಶಸ್ವಿಯಾಗಿದೆ.
ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ಈವರೆಗೂ ೧೨೬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್ ಪರವೇಜ್ ಪಾಷ ಅರೆಸ್ಟ್ ಆಗಿರುವ ೧೨೭ನೇ ಆರೋಪಿ.