ಡಿಜೆ ಹಳ್ಳಿ ಗಲಭೆ: ಬಿಗ್‌ಬಾಸ್‌ ವಿನ್ನರ್‌ ಪ್ರಥಮ್‌ಗೆ ಪೊಲೀಸ್‌ ನೋಟಿಸ್‌

  • Publish Date - 9:07 pm, Tue, 18 August 20
ಡಿಜೆ ಹಳ್ಳಿ ಗಲಭೆ: ಬಿಗ್‌ಬಾಸ್‌ ವಿನ್ನರ್‌ ಪ್ರಥಮ್‌ಗೆ ಪೊಲೀಸ್‌ ನೋಟಿಸ್‌

ಬೆಂಗಳೂರು: ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಬಾಸ್‌ ವಿನ್ನರ್‌ ಪ್ರಥಮ್‌ಗೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಿದ್ದ ವಿಡಿಯೋಗೆ ಬಿಗ್‌ ಬಾಸ್‌ ವಿಜೇತ ಪ್ರಥಮ್‌ ಕಮೆಂಟ್ ಮಾಡಿದ್ದ. ಈ ಸಂಬಂಧ ಪ್ರಥಮ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತ ಉಮರ್ ಫಾರೂಕ್ ದೂರು ದಾಖಲಿಸಿದ್ದ.

ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ಸಲ್ಲಿಸಿದ್ದ ದೂರಿನಲ್ಲಿ, ಪ್ರಥಮ್‌ ಸಮುದಾಯಕ್ಕೆ ಅವಹೇಳನ ಮಾಡಿದ್ದಾನೆಂದು ಆರೋಪಿಸಿಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 7 ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಪ್ರಥಮ್‌ಗೆ ನೋಟಿಸ್ ಕಳಿಸಿದ್ದಾರೆ.

 

Click on your DTH Provider to Add TV9 Kannada