ಪೊಲೀಸ್‌ ಕಮಿಷನರ್‌ ಕಚೇರಿ ಮೇಲೆಯೇ ಅಟ್ಯಾಕ್‌, 3 ದಿನ ಕಚೇರಿ ಸೀಲ್‌ಡೌನ್‌

ಬೆಂಗಳೂರು: ಹೋದೆಯಾ ಪೀಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಅಂದಂಗೆ, ಕೊರೊನಾ ಹೆಮ್ಮಾರಿ ತನ್ನ ಕಬಂಧ ಬಾಹುಗಳನ್ನ ಚಾಚ್ತಾನೇ ಇದೆ. ಸಿಕ್ಕಸಿಕ್ಕಲ್ಲಿ ನುಗ್ಗುತ್ತಿರುವ ಕೊರೊನಾ ವೈರಸ್‌, ಈಗ ಬೆಂಗಳೂರಿನ ಪೊಲೀಸರ ಹೃದಯಭಾಗಕ್ಕೇ ಚುಚ್ಚಿದೆ. ಹೌದು, ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯ ಎಟಿಎಸ್‌ ಸ್ಕ್ಯಾಡ್‌ ವಿಂಗ್‌ನ ಎಎಸ್‌ಐಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಅದರಲ್ಲೂ ಈ ಸೋಂಕಿತ ಎಎಸ್‌ಐ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈಗ ಪೊಲೀಸ್‌ ಕಮಿಷನರ್‌ ಕಚೇರಿಯನ್ನ ಮೂರು ದಿನಗಳ ಕಾಲ ಸೀಲ್‌ಡೌನ್‌ […]

ಪೊಲೀಸ್‌ ಕಮಿಷನರ್‌ ಕಚೇರಿ ಮೇಲೆಯೇ ಅಟ್ಯಾಕ್‌, 3 ದಿನ ಕಚೇರಿ ಸೀಲ್‌ಡೌನ್‌
Edited By:

Updated on: Jun 26, 2020 | 7:11 PM

ಬೆಂಗಳೂರು: ಹೋದೆಯಾ ಪೀಶಾಚಿ ಅಂದ್ರೆ ಬಂದೆ ಗವಾಕ್ಷಿಯಲ್ಲಿ ಅಂದಂಗೆ, ಕೊರೊನಾ ಹೆಮ್ಮಾರಿ ತನ್ನ ಕಬಂಧ ಬಾಹುಗಳನ್ನ ಚಾಚ್ತಾನೇ ಇದೆ. ಸಿಕ್ಕಸಿಕ್ಕಲ್ಲಿ ನುಗ್ಗುತ್ತಿರುವ ಕೊರೊನಾ ವೈರಸ್‌, ಈಗ ಬೆಂಗಳೂರಿನ ಪೊಲೀಸರ ಹೃದಯಭಾಗಕ್ಕೇ ಚುಚ್ಚಿದೆ.

ಹೌದು, ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯ ಎಟಿಎಸ್‌ ಸ್ಕ್ಯಾಡ್‌ ವಿಂಗ್‌ನ ಎಎಸ್‌ಐಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಅದರಲ್ಲೂ ಈ ಸೋಂಕಿತ ಎಎಸ್‌ಐ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈಗ ಪೊಲೀಸ್‌ ಕಮಿಷನರ್‌ ಕಚೇರಿಯನ್ನ ಮೂರು ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.

ಹಾಗಂತ ಬೆಂಗಳೂರಿನ ರಕ್ಷಕ ಪೊಲೀಸ್‌ ಕಮಿಷನರ್‌ ಕಚೇರಿಯ ಕಾರ್ಯವನ್ನ ನಿಲ್ಲಿಸುವಂತಿಲ್ಲವಲ್ಲ. ಹೀಗಾಗಿ ಜೂನ್‌ 27ರಿಂದ ಜೂನ್‌ 29ರವರೆಗೆ ಕಮಿಷನರ್‌ ಕಚೇರಿಯ ಸಿಬ್ಬಂದಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.

Published On - 7:10 pm, Fri, 26 June 20