ಗೋಲಿಬಾರ್ನಲ್ಲಿ ಮೃತಪಟ್ಟವನ ಗುರುತು ಇನ್ನೂ ಸಿಕ್ಕಿಲ್ಲ! ಹಾಗಾದ್ರೆ ಯಾರವ?
ಬೆಂಗಳೂರು: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೇರಳ ಲಿಂಕ್ ಇದೆಯಾ ಅನ್ನೋ ಅನುಮಾನ ಬಲವಾಗ್ತಿದೆ. ಇದಕ್ಕೆ ಕಾರಣ ಇನ್ನೂ ಪತ್ತೆಯಾಗದ ಮೃತ ಮೂರನೆ ವ್ಯಕ್ತಿಯ ಗುರುತು. 40 ವರ್ಷದ ವ್ಯಕ್ತಿಯೊಬ್ಬ ನಿನ್ನೆ ರಾತ್ರಿ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಸಾವನ್ನಪ್ಪಿದ್ದಾನೆ. ಆದ್ರೆ ಈತನ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಇನ್ನಿಬ್ಬರು ಮೃತರ ಗುರುತು ಪತ್ತೆಯಾಗಿದೆ. ಅವರು ಸ್ಥಳೀಯರು. ಆದ್ರೆ ಈ ಮೂರನೇ ವ್ಯಕ್ತಿಯ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ! ಇದಕ್ಕೆ […]

ಬೆಂಗಳೂರು: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೇರಳ ಲಿಂಕ್ ಇದೆಯಾ ಅನ್ನೋ ಅನುಮಾನ ಬಲವಾಗ್ತಿದೆ. ಇದಕ್ಕೆ ಕಾರಣ ಇನ್ನೂ ಪತ್ತೆಯಾಗದ ಮೃತ ಮೂರನೆ ವ್ಯಕ್ತಿಯ ಗುರುತು.
40 ವರ್ಷದ ವ್ಯಕ್ತಿಯೊಬ್ಬ ನಿನ್ನೆ ರಾತ್ರಿ ನಡೆದ ಪೊಲೀಸ್ ಗೋಲಿಬಾರ್ನಲ್ಲಿ ಸಾವನ್ನಪ್ಪಿದ್ದಾನೆ. ಆದ್ರೆ ಈತನ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಇನ್ನಿಬ್ಬರು ಮೃತರ ಗುರುತು ಪತ್ತೆಯಾಗಿದೆ. ಅವರು ಸ್ಥಳೀಯರು. ಆದ್ರೆ ಈ ಮೂರನೇ ವ್ಯಕ್ತಿಯ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ! ಇದಕ್ಕೆ ಕಾರಣ ಈತ ಸ್ಥಳೀಯ ಅಲ್ಲದಿರುವುದು! ಎನ್ನುತ್ತಿವೆ ಪೊಲೀಸ್ ಮೂಲಗಳು.
ಹಾಗಾದ್ರೆ ಯಾರು ಈ ಮೂರನೇ ವ್ಯಕ್ತಿ? ಈತ ಗಲಾಟೆ ಸಮಯದಲ್ಲಿ ಯಾಕೆ ಬಂದಿದ್ದ? ಎಲ್ಲಿಯವನು ಈ ವ್ಯಕ್ತಿ? ಪೊಲೀಸ್ ಫೈರಿಂಗ್ ಮಾಡಿದ್ದು ಗಲಭೆಕೋರರತ್ತ. ಆದ್ರೆ ಈತ ಯಾಕೆ ಗಲಭೆ ಜಾಗದಲ್ಲಿದ್ದ? ಅಲ್ಲಿಗೆ ಈತ ಹೇಗೆ ಮತ್ತು ಯಾಕೆ ಬಂದ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಈಗ ತನಿಖಾಧಿಕಾರಿಗಳಿಗೆ ಕಾಡುತ್ತಿವೆ.
ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿಂದೆ ಹೊರಗಿನವರ ಕೈವಾಡದ ಶಂಕೆ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಸಾವಿರಾರು ಜನರನ್ನು ಒಮ್ಮೆಲೆ ಸೇರಿಸಿ ಗಲಭೆ ಸೃಷ್ಟಿಸಲಾಗಿದೆ. ಗಲಾಟೆಯಲ್ಲಿ ಮೂವರು ಸಾವನ್ನಪ್ಪಿದ್ದು ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಬೆಂಗಳೂರು ಪೊಲೀಸರೇ ಅನಿರೀಕ್ಷಿತ ರೀತಿಯ ಈ ಗಲಾಟೆಗೆ ದಂಗಾಗಿದ್ದಾರೆ. ಹೀಗಾಗಿಯೇ ಈಗ ಪೊಲೀಸರು ಹೊರಗಿನ ಅದರಲ್ಲೂ ಕೇರಳ ಮತ್ತು SDPI ಲಿಂಕ್ ಬಗ್ಗೆಯೂ ತನಿಖೆ ಮಾಡುತ್ತಿದ್ದಾರೆ ಎನ್ನುತ್ತಿವೆ ಪೊಲೀಸ್ ಮೂಲಗಳು.
Published On - 4:01 pm, Wed, 12 August 20



