ಆನೇಕಲ್: ಆನೇಕಲ್ ತಾಲೂಕಿನ ಹೆನ್ನಾಗರ 15 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಸುಮಾರು 700 ಎಕರೆ ಪ್ರದೇಶದಲ್ಲಿರುವ ವಿಶಾಲ ಹೆನ್ನಾಗರ ಕೆರೆ ಇದಾಗಿದೆ. ಮಳೆಯಿಂದಾಗಿ ಕೆರೆಕೋಡಿ ಹರಿದಿದ್ದು ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ.
ಹೊಳೆಯಂತೆ ಹರಿಯುತ್ತಿರುವ ಹಿರಿದಾದ ಹೆನ್ನಾಗರ ಕೆರೆ
ಜಿಗಣಿ ಕೈಗಾರಿಕಾ ಪ್ರದೇಶದ ಕಲುಷಿತ ನೀರು ತುಂಬಿರುವ ಹೆನ್ನಾಗರ ಕೆರೆಯಿಂದ ಕಲುಷಿತ ನೀರು ಸಹ ಹೊರಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದೂ ಸಹ ಮಳೆ ಹೆಚ್ಚಾದರೆ ಸ್ಥಳೀಯರಿಗೆ ಮತ್ತಷ್ಟು ಸಮಸ್ಯೆಯಾಗಬಹುದು ಎಂದು ಅಂದಾಜಿಸಲಾಗಿದೆ.