ಸಿನಿ ಸ್ನೇಹ ಪಕ್ಕಕ್ಕಿಟ್ಟು ಪ್ರಚಾರ ಕಾರ್ಯದಲ್ಲಿ ತೊಡೆ ತಟ್ಟಿದ ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು: ಸಿನಿಮಾ ಸಂಬಂಧದ ಕಬಂದಬಾಹುವಿನಲ್ಲಿ ಸಿಲುಕಿ ನಟ ನಿಖಿಲ್ ಕುಮಾರಸ್ವಾಮಿ ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯಲ್ಲಿ ಪ್ರಚಾರ ಕಾರ್ಯದಿಂದ ದೂರವುಳಿಯುತ್ತಾರೆ ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ಜೆಡಿಎಸ್ ಯುವ ನಾಯಕ, ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಕುಡಿ ನಿಖಿಲ್ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಇಂದು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಚಿತ್ರ ನಿರ್ಮಾಪಕರು. ಅದರಲ್ಲೂ ನಿಖಿಲ್ ಕುಮಾರಸ್ವಾಮಿ ಚಿತ್ರಗಳನ್ನು ನಿರ್ಮಿಸಿಕೊಟ್ಟವರು. ಜೊತೆಗೆ ಭವಿಷ್ಯದಲ್ಲೂ ನಿಖಿಲ್ ಕುಮಾರಸ್ವಾಮಿ ಅವರನ್ನು […]

ಸಿನಿ ಸ್ನೇಹ ಪಕ್ಕಕ್ಕಿಟ್ಟು ಪ್ರಚಾರ ಕಾರ್ಯದಲ್ಲಿ ತೊಡೆ ತಟ್ಟಿದ ನಿಖಿಲ್​ ಕುಮಾರಸ್ವಾಮಿ
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Oct 24, 2020 | 12:13 PM

ಬೆಂಗಳೂರು: ಸಿನಿಮಾ ಸಂಬಂಧದ ಕಬಂದಬಾಹುವಿನಲ್ಲಿ ಸಿಲುಕಿ ನಟ ನಿಖಿಲ್ ಕುಮಾರಸ್ವಾಮಿ ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯಲ್ಲಿ ಪ್ರಚಾರ ಕಾರ್ಯದಿಂದ ದೂರವುಳಿಯುತ್ತಾರೆ ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ಜೆಡಿಎಸ್ ಯುವ ನಾಯಕ, ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಕುಡಿ ನಿಖಿಲ್ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಇಂದು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಚಿತ್ರ ನಿರ್ಮಾಪಕರು. ಅದರಲ್ಲೂ ನಿಖಿಲ್ ಕುಮಾರಸ್ವಾಮಿ ಚಿತ್ರಗಳನ್ನು ನಿರ್ಮಿಸಿಕೊಟ್ಟವರು. ಜೊತೆಗೆ ಭವಿಷ್ಯದಲ್ಲೂ ನಿಖಿಲ್ ಕುಮಾರಸ್ವಾಮಿ ಅವರನ್ನು ಹಾಕಿಕೊಂಡು ಒಂದೆರಡು ಸಿನಿಮಾ ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಸಿನಿ ಲೋಕದ ನಂಟು ಹೀಗಿರುವಾಗ ನಿಖಿಲ್, ಆರ್ ಆರ್ ನಗರದ ಕಡೆ ತಲೆಹಾಕುವುದಿಲ್ಲ ಎಂಬ ರಾಜಕೀಯ ಲೆಕ್ಕಾಚಾರವಿತ್ತು. ಆದ್ರೆ ಆರ್ ಆರ್ ನಗರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ನಿಖಿಲ್ ತಿಳಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸತ್ಯನಾರಾಯಣ ಅವರ ಪರ ಚುನಾವಣಾ ಪ್ರಚಾರ ಆರಂಭಿಸುವುದಕ್ಕೂ ಮುನ್ನ.. ನಿಖಿಲ್ ಕುಮಾರಸ್ವಾಮಿ ಅವರು ಸ್ಫಟಿಕಪುರಿಯ ಶ್ರೀ ಕ್ಷೇತ್ರ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಯ ದರ್ಶನ ಪಡೆದರು. ನಂತರ ಶ್ರೀ ಮಠದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಿಖಿಲ್ ಕುಮಾರಸ್ವಾಮಿ ಪ್ರಚಾರದಿಂದ ದೂರ ಉಳಿಯುತ್ತಾರೆ ಎಂದು ಲೆಕ್ಕ ಹಾಕಲಾಗಿತ್ತು.

ಪ್ರಧಾನವಾಗಿ ಪ್ರಜ್ವಲ್​ ರೇವಣ್ಣ ಅವರು ಅದಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರಿಂದ ನಿಖಿಲ್ ತಾವೂ ಸಹ ಪ್ರಚಾರಕ್ಕೆ ಬರುವುದು ಬೇಡವೆಂದು ಲೆಕ್ಕ ಹಾಕಬಹುದು ಎಂದು ಭಾವಿಸಲಾಗಿತ್ತು. ಆದ್ರೆ ಅದನ್ನೆಲ್ಲ ಪಕ್ಕಕ್ಕಿಟ್ಟು ನಿಖಿಲ್ ಕುಮಾರಸ್ವಾಮಿ ಅಮ್ಮಾಜಮ್ಮ ಸತ್ಯನಾರಾಯಣ ಅವರ ಪರ ಚುನಾವಣಾ ಪ್ರಚಾರಕ್ಕೆ ಇಂದು ಧುಮುಕಿದರು.