ಯಾದಗಿರಿ: ಚಿಕಿತ್ಸೆ ಸಿಗದೆ ನರಳಿ ನರಳಿ ಪಿಡಿಒ ತಂದೆ ಮೃತಪಟ್ಟಿದ್ದಾರೆ ಎಂಬ ಆರೋಪ ಹೇಳಿ ಬಂದಿದೆ. ಬೆಸ್ಟ್ ಕೊರೊನಾ ವಾರಿಯರ್ ಎಂಬ ಪ್ರಶಸ್ತಿ ಪಡೆದಿದ್ದ PDO ಅವರ ತಂದೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಯಾದಗಿರಿಯ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ನರಳಿ ನರಳಿ ಸತ್ತರು ನೋಡುವವರಿಲ್ಲ. ಕೊವಿಡ್ ಆಸ್ಪತ್ರೆಯಲ್ಲಿ ಕೂಗಿ ಕೂಗಿ ಕರೆದ್ರು ವೈದ್ಯರು ಸಿಗದೆ ಕೊನೆಗೆ ನರಳಿ ನರಳಿ ಪಿಡಿಒ ತಂದೆ ಪ್ರಾಣ ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಮಾಡಲು ಯಾರು ಗತಿ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ಆಸ್ಪತ್ರೆ ಇದೆ.
ಡಿಎಚ್ಒ ಲಂಚ ಪಡೆಯಲು ಹೋಗಿ ಎಸಿಬಿ ಬಲೆಗೆ ಬಿದ್ದು ಸಸ್ಪೆಂಡ್ ಆಗಿದ್ದರು. ಜಿಲ್ಲಾ ಸರ್ಜನ್ ಹುಷಾರ್ ಇಲ್ಲ ಅಂತ ಮೂರು ತಿಂಗಳಿನಿಂದ ರಜೆಯಲ್ಲಿದ್ದಾರೆ. ಕೋವಿಡ್ ನಿರ್ವಹಣೆ ಮಾಡುತ್ತಿದ್ದ ವೈದ್ಯೆ ಕಳೆದ ವಾರದಿಂದ ರಜೆಯಲ್ಲಿದ್ದಾರೆ. ಜಿಲ್ಲಾಧಿಕಾರಿಯನ್ನು ಕಳೆದ ವಾರ ವರ್ಗಾವಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ವರ್ಗಾವಣೆ ಬಳಿಕ ಕೋವಿಡ್ ಆಸ್ಪತ್ರೆಗೆ ಬರ್ತಾಯಿದ್ದ ಐಎಂಎ ವೈದ್ಯರು ಕೈಕೊಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎನ್ನುವಂತಾಗಿದೆ.