ಜಮೀನಿನಲ್ಲಿ ನವಜಾತ ಶಿಶು ಎಸೆದು ಹೋದ ನಿರ್ದಯಿ ತಾಯಿ! ಯಾವೂರಲ್ಲಿ?
ರಾಯಚೂರು: ನಿರ್ದಯಿ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಜಮೀನಿನಲ್ಲಿ ಎಸೆದುಹೋಗಿರುವಂತಹ ಹೇಯ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗ್ರಾಮವೊಂದರ ಬಳಿ ನಡೆದಿದೆ. ಆ ನಿಷ್ಕರುಣಿ ತಾಯಿ ಬೆಂಡೋಣಿ ಬಳಿ ತನ್ನ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಶಿಶುವಿನ ಅಳು ಗಮನಿಸಿದ ಗ್ರಾಮಸ್ಥರಿಂದ ಶಿಶುವಿನ ರಕ್ಷಣೆಯಾಗಿದೆ. ಶಿಶು ಅಭಿವೃದ್ದಿ ಯೊಜನಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಮಧ್ಯೆ, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಶಿಶುವನ್ನು ದಾಖಲಿಸಿ, ಆರೈಕೆ ಮಾಡಲಾಗುತ್ತಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ರಾಯಚೂರು: ನಿರ್ದಯಿ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಜಮೀನಿನಲ್ಲಿ ಎಸೆದುಹೋಗಿರುವಂತಹ ಹೇಯ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗ್ರಾಮವೊಂದರ ಬಳಿ ನಡೆದಿದೆ.
ಆ ನಿಷ್ಕರುಣಿ ತಾಯಿ ಬೆಂಡೋಣಿ ಬಳಿ ತನ್ನ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಶಿಶುವಿನ ಅಳು ಗಮನಿಸಿದ ಗ್ರಾಮಸ್ಥರಿಂದ ಶಿಶುವಿನ ರಕ್ಷಣೆಯಾಗಿದೆ. ಶಿಶು ಅಭಿವೃದ್ದಿ ಯೊಜನಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಮಧ್ಯೆ, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಶಿಶುವನ್ನು ದಾಖಲಿಸಿ, ಆರೈಕೆ ಮಾಡಲಾಗುತ್ತಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.