ಮತ್ತೆ ಶುರುವಾದ ಮಳೆ ಅಬ್ಬರ, ಭಾಗಮಂಡಲದಲ್ಲಿ ಮತ್ತೆ ಸೇತುವೆ ಮುಳುಗಡೆ
ಕೊಡಗು: ಭಾಗಮಂಡಲ ತಲಕಾವೇರಿ ಭಾಗದಲ್ಲಿ ಬೆಳಗ್ಗೆಯಿಂದ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ರಾತ್ರಿಯಿಂದ ಬಿಡುವು ನೀಡಿದ್ದ ವರುಣ ಮುಂಜಾನೆಯಿಂದ ತನ್ನ ರೂಪ ತೋರಿಸಿದ್ದಾನೆ. ಮಳೆ ಇದೇ ರೀತಿ ಮುಂದುವರೆದರೆ ಪ್ರವಾಹ ಉಂಟಾಗುವ ಭೀತಿ ಇದೆ. ಮೂರನೆ ಬಾರಿಗೆ ಮತ್ತೆ ತ್ರಿವೇಣಿ ಸಂಗಮ ಜಾಲವೃತಗೊಳ್ಳುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಮಳೆಯಿಂದ ಭಾಗಮಂಡಲದಲ್ಲಿ ಮತ್ತೆ ಸೇತುವೆ ಮುಳುಗಡೆಯಾಗಿದೆ. ನಿನ್ನೆ ರಾತ್ರಿ ಪ್ರವಾಹ ತಗ್ಗಿದ್ದರಿಂದ ಸಂಚಾರ ಸುಗಮವಾಗಿತ್ತು. ಈಗ ಸೇತುವೆ ಮುಳುಗಡೆಯಾಗಿದ್ದರಿಂದ ಮತ್ತೆ ಸಂಚಾರ […]
Follow us on
ಕೊಡಗು: ಭಾಗಮಂಡಲ ತಲಕಾವೇರಿ ಭಾಗದಲ್ಲಿ ಬೆಳಗ್ಗೆಯಿಂದ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ರಾತ್ರಿಯಿಂದ ಬಿಡುವು ನೀಡಿದ್ದ ವರುಣ ಮುಂಜಾನೆಯಿಂದ ತನ್ನ ರೂಪ ತೋರಿಸಿದ್ದಾನೆ. ಮಳೆ ಇದೇ ರೀತಿ ಮುಂದುವರೆದರೆ ಪ್ರವಾಹ ಉಂಟಾಗುವ ಭೀತಿ ಇದೆ.
ಮೂರನೆ ಬಾರಿಗೆ ಮತ್ತೆ ತ್ರಿವೇಣಿ ಸಂಗಮ ಜಾಲವೃತಗೊಳ್ಳುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಮಳೆಯಿಂದ ಭಾಗಮಂಡಲದಲ್ಲಿ ಮತ್ತೆ ಸೇತುವೆ ಮುಳುಗಡೆಯಾಗಿದೆ. ನಿನ್ನೆ ರಾತ್ರಿ ಪ್ರವಾಹ ತಗ್ಗಿದ್ದರಿಂದ ಸಂಚಾರ ಸುಗಮವಾಗಿತ್ತು. ಈಗ ಸೇತುವೆ ಮುಳುಗಡೆಯಾಗಿದ್ದರಿಂದ ಮತ್ತೆ ಸಂಚಾರ ಸ್ಥಗಿತವಾಗಿದೆ.