ಮಳೆ ನೀರಲ್ಲಿ ಮುಳುಗಿದ ಕೃಷ್ಣ ನಗರಿ, ಎಲ್ಲೆಡೆ ಜಲದಿಗ್ಬಂಧನ
ಉಡುಪಿ: ಕರ್ನಾಟಕದ ಕರಾವಳಿಗೆ ವರುಣನ ಹೊಡೆತ ಶುರುವಾಗಿದೆ. ವರ್ಷಧಾರೆ ನಿಲ್ಲದಿದ್ರೆ ಮುಂದೆ ದೊಡ್ಡ ಕಂಟಕ ಎದುರಾಗಲಿದೆ. ಕೃಷ್ಣ ನಗರಿ ಉಡುಪಿ ಮಳೆ ನೀರಲ್ಲಿ ಮುಳುಗಿದೆ. ನಿನ್ನೆ ಜಿಲ್ಲೆಯಲ್ಲಿ 31 ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ 215 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಇನ್ನೂ 2 ದಿನ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನದಿಪಾತ್ರದ ನಡುಗಡ್ಡೆ ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ತುಂಬಿ ಹರಿಯುತ್ತಿದೆ ಕುಬ್ಜಾ ನದಿ: ಇನ್ನು ಧಾರಾಕಾರ ಮಳೆ […]

ಉಡುಪಿ: ಕರ್ನಾಟಕದ ಕರಾವಳಿಗೆ ವರುಣನ ಹೊಡೆತ ಶುರುವಾಗಿದೆ. ವರ್ಷಧಾರೆ ನಿಲ್ಲದಿದ್ರೆ ಮುಂದೆ ದೊಡ್ಡ ಕಂಟಕ ಎದುರಾಗಲಿದೆ. ಕೃಷ್ಣ ನಗರಿ ಉಡುಪಿ ಮಳೆ ನೀರಲ್ಲಿ ಮುಳುಗಿದೆ. ನಿನ್ನೆ ಜಿಲ್ಲೆಯಲ್ಲಿ 31 ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ 215 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಇನ್ನೂ 2 ದಿನ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನದಿಪಾತ್ರದ ನಡುಗಡ್ಡೆ ಜನ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ತುಂಬಿ ಹರಿಯುತ್ತಿದೆ ಕುಬ್ಜಾ ನದಿ: ಇನ್ನು ಧಾರಾಕಾರ ಮಳೆ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿರುವ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲಕ್ಕೆ ನುಗ್ಗಿದೆ. ದೇವಸ್ಥಾನದ ಒಳಗೆ ಕುಬ್ಜಾ ನದಿ ನೀರು ಪ್ರವೇಶಿಸಿದೆ. ವರ್ಷಕ್ಕೆ ಒಂದು ಬಾರಿ ಮಳೆ ನೀರು ಪ್ರವೇಶಿಸುತ್ತದೆ ಆದ್ರೆ ಈ ವರ್ಷ ಎರಡನೇ ಬಾರಿಗೆ ದೇಗುಲದೊಳಗೆ ನದಿ ನೀರು ಪ್ರವೇಶಿಸಿದೆ.
ಬಬ್ಬುಸ್ವಾಮಿ ದೈವಸ್ಥಾನಗಳಲ್ಲೂ ತಗ್ಗದ ಮಳೆ ನೀರು:
ಇನ್ನು ಮಳೆಯಿಂದಾಗಿ ಮನೆಗಳಿಗೂ ಕೂಡ ಜಲ ದಿಗ್ಬಂಧನವಾಗಿದೆ. ತಮ್ಮ ಮನೆಗಳನ್ನು ಬಿಟ್ಟು ಜನ ಸಂತ್ರಸ್ತರ ಕೇಂದ್ರ ಸೇರಿದ್ದಾರೆ. ಇಂದು ತಮ್ಮ ಮನೆ ಪರಿಸ್ಥಿತಿ ತಿಳಿಯಲು ನಾಡದೋಣಿಗಳಲ್ಲಿ ಹಿಂತಿರುಗುತ್ತಿದ್ದಾರೆ. ಉಡುಪಿಯ ಹಲವು ಕಡೆ ತೋಟದ ಮನೆಗಳು ಮುಳುಗಡೆಯಾಗಿವೆ.






