ಸಂಜೆಯಾಗುತ್ತಿದ್ದಂತೆ ಮನೆಗಳ ಮೇಲೆ ಬೀಳುತ್ತಿವೆ ಕಲ್ಲುಗಳು: ಆತಂಕದಲ್ಲಿ ಗ್ರಾಮಸ್ಥರು!

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಇದ್ದಕ್ಕಿದ್ದಂತೆ ಮನೆಗಳ ಮೇಲೆ ಬೀಳುವ ಕಲ್ಲುಗಳಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕಿಡಿಗೇಡಿಗಳ ಕೃತ್ಯವೋ ಇಲ್ಲಾ ಭಾನಾಮತಿಯ ಕಾಟವೋ ಎಂಬ ಆಂತಕದಲ್ಲಿ ಜನರಿದ್ದಾರೆ. ಸಂಜೆಯಾಗುತ್ತಿದ್ದಂತೆ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದು, ಕಲ್ಲಿನ ಹೊಡೆತಕ್ಕೆ ಮನೆಗಳ ಹೆಂಚುಗಳು ತೂತು ಬಿದ್ದಿವೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಅಚ್ಚರಿ ಎದುರಾಗಿದೆ. ಪೊಲೀಸರ ಟೈಟ್ ಸೆಕ್ಯೂರಿಟಿ ನಡುವೆಯೂ ಕಲ್ಲುಗಳು ಬೀಳುತ್ತಿವೆ. ಪೊಲೀಸರು ಕಲ್ಲುಗಳನ್ನು ಸಂಗ್ರಹಿಸಿ ಕೊಂಡೊಯ್ದಿದ್ದಾರೆ. ಈ […]

ಸಂಜೆಯಾಗುತ್ತಿದ್ದಂತೆ ಮನೆಗಳ ಮೇಲೆ ಬೀಳುತ್ತಿವೆ ಕಲ್ಲುಗಳು: ಆತಂಕದಲ್ಲಿ ಗ್ರಾಮಸ್ಥರು!

Updated on: Jan 25, 2020 | 11:27 AM

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಇದ್ದಕ್ಕಿದ್ದಂತೆ ಮನೆಗಳ ಮೇಲೆ ಬೀಳುವ ಕಲ್ಲುಗಳಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕಿಡಿಗೇಡಿಗಳ ಕೃತ್ಯವೋ ಇಲ್ಲಾ ಭಾನಾಮತಿಯ ಕಾಟವೋ ಎಂಬ ಆಂತಕದಲ್ಲಿ ಜನರಿದ್ದಾರೆ.

ಸಂಜೆಯಾಗುತ್ತಿದ್ದಂತೆ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದು, ಕಲ್ಲಿನ ಹೊಡೆತಕ್ಕೆ ಮನೆಗಳ ಹೆಂಚುಗಳು ತೂತು ಬಿದ್ದಿವೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಅಚ್ಚರಿ ಎದುರಾಗಿದೆ. ಪೊಲೀಸರ ಟೈಟ್ ಸೆಕ್ಯೂರಿಟಿ ನಡುವೆಯೂ ಕಲ್ಲುಗಳು ಬೀಳುತ್ತಿವೆ. ಪೊಲೀಸರು ಕಲ್ಲುಗಳನ್ನು ಸಂಗ್ರಹಿಸಿ ಕೊಂಡೊಯ್ದಿದ್ದಾರೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Published On - 10:28 am, Sat, 25 January 20