ಬೆಂಗಳೂರು: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಜ.8ರಂದು ವಿವಿಧ ಸಂಘಟನೆಗಳಿಂದ ಭಾರತ್ ಬಂದ್ಗೆ ಕರೆ ನೀಡಿವೆ. ಸಂಘಟಿತ, ಅಸಂಘಟಿತ ವಲಯದ ಸುಮಾರು 40 ಕೋಟಿ ಕಾರ್ಮಿಕರು ಭಾರತ್ ಬಂದ್ಗೆ ಕರೆ ನೀಡಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಜ.8ರಂದು BMTC, KSRTC ಬಸ್ ಸಂಚಾರ ಅನುಮಾನವಿದೆ. ಈಗಾಗಲೇ KSRTC, BMTC, ಐಟಿ-ಬಿಟಿ ವಲಯದ ನೌಕರರು, ಆಟೋ ಚಾಲಕರು, ಬ್ಯಾಂಕ್ ನೌಕರರು ಸೇರಿದಂತೆ ಎಲ್ಲ ಕಾರ್ಮಿಕರು ಭಾರತ್ ಬಂದ್ಗೆ ಬೆಂಬಲ ಸೂಚಿಸಿದ್ದಾರೆ.
ಬಂದ್ ದಿನ BMTC ನೌಕರರಿಗೆ ರಜೆ ಇಲ್ಲ:
ಜನವರಿ 8ರಂದು ಭಾರತ್ ಬಂದ್ಗೆ ಕರೆ ನೀಡಿರುವ ಸಂಬಂಧ ನಮ್ಮ ಯೂನಿಯನ್‌ನಿಂದ ನಮಗೆ ಮಾಹಿತಿ ಬಂದಿಲ್ಲ. ಅಂದು ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಇರುತ್ತೆ. ಭದ್ರತಾ ಮತ್ತು ಜಾಗೃತ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದೆ ಎಂದು BMTC ಎಂಡಿ ಶಿಖಾ ಸ್ಪಷ್ಟಪಡಿಸಿದ್ದಾರೆ. ಭಾರತ್ ಬಂದ್ ದಿನ ಬಿಎಂಟಿಸಿ ನೌಕರರಿಗೆ ರಜೆ ನೀಡುವುದಿಲ್ಲ. ಅಂದು ರಜೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಬಂದ್‌ನಲ್ಲಿ ಭಾಗಿಯಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಶಿಖಾ ಎಚ್ಚರಿಕೆ ನೀಡಿದ್ದಾರೆ.
Published On - 4:15 pm, Mon, 6 January 20