ಲಕ್ಷ್ಮೀದೇವಿ ಜಾತ್ರೆಯಲ್ಲಿ ಕುದುರೆ ಕಲರವ- ಇಲ್ಲಿ ನಡೆಯುತ್ತೆ ರಾಜ್ಯದ ಏಕೈಕ ಕುದುರೆ ಸಂತೆ!
ಬೆಳಗಾವಿ: ಇದು ರಾಜ್ಯದಲ್ಲಿ ನಡೆಯುವ ಏಕೈಕ ಕುದುರೆ ಸಂತೆ. ಕುದುರೆ ಮಾರಾಟದಿಂದ ಹಿಡಿದು ಕುದುರೆ ಕುಣಿತದವರೆಗೂ ಎಲ್ಲಾ ಕಲರ್ಫುಲ್. ಇಲ್ಲಿಗೆ ಬರುವ ಕುದುರೆಗಳ ರೆಟ್ ಕೇಳಿದ್ರೆ ನೀವು ದಂಗಾಗಿ ಹೋಗ್ತೀರ. ನೆರೆದವರ ಹುಬ್ಬೇರಿಸುವಂತೆ ಸ್ಟೆಪ್ ಹಾಕ್ತಿರೋ ಕುದುರೆಗಳು. ಇನ್ನು ಡ್ಯಾನ್ಸ್ಗೆ ಫಿದಾ ಆಗಿ, ಕುದುರೆ ನೃತ್ಯವನ್ನು ನೋಡೋದ್ರಲ್ಲಿ ಮಗ್ನರಾಗಿರೋ ಜನ. ಅಷ್ಟಕ್ಕೂ ಈ ಕುದುರೆ ಸಂತೆ ನಡೆಯೋದಾದ್ರೂ ಎಲ್ಲಿ ಅಂದ್ರಾ? ಇದು ಕಂಡಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ. 3 ದಿನ ನಡೆಯುವ ಜಾತ್ರೆ: ವರ್ಷಕ್ಕೊಮ್ಮೆ ರಾಯಬಾಗ […]
ಬೆಳಗಾವಿ: ಇದು ರಾಜ್ಯದಲ್ಲಿ ನಡೆಯುವ ಏಕೈಕ ಕುದುರೆ ಸಂತೆ. ಕುದುರೆ ಮಾರಾಟದಿಂದ ಹಿಡಿದು ಕುದುರೆ ಕುಣಿತದವರೆಗೂ ಎಲ್ಲಾ ಕಲರ್ಫುಲ್. ಇಲ್ಲಿಗೆ ಬರುವ ಕುದುರೆಗಳ ರೆಟ್ ಕೇಳಿದ್ರೆ ನೀವು ದಂಗಾಗಿ ಹೋಗ್ತೀರ. ನೆರೆದವರ ಹುಬ್ಬೇರಿಸುವಂತೆ ಸ್ಟೆಪ್ ಹಾಕ್ತಿರೋ ಕುದುರೆಗಳು. ಇನ್ನು ಡ್ಯಾನ್ಸ್ಗೆ ಫಿದಾ ಆಗಿ, ಕುದುರೆ ನೃತ್ಯವನ್ನು ನೋಡೋದ್ರಲ್ಲಿ ಮಗ್ನರಾಗಿರೋ ಜನ. ಅಷ್ಟಕ್ಕೂ ಈ ಕುದುರೆ ಸಂತೆ ನಡೆಯೋದಾದ್ರೂ ಎಲ್ಲಿ ಅಂದ್ರಾ? ಇದು ಕಂಡಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ.
3 ದಿನ ನಡೆಯುವ ಜಾತ್ರೆ: ವರ್ಷಕ್ಕೊಮ್ಮೆ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಲಕ್ಷ್ಮೀದೇವಿ ಜಾತ್ರೆಯನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ. 3 ದಿನಗಳ ಕಾಲ ನಡೆಯುವ ಜಾತ್ರೆ, ಈ ಬಾರಿಯೂ ಕಳೆಗಟ್ಟಿದೆ. ರಾಜ್ಯದ ವಿವಿಧ ಭಾಗಗಳಿಂದಲೂ ಇಲ್ಲಿದೆ ಜನ ಬರ್ತಾರೆ. ಹಾಗೇ ನೆರೆ ರಾಜ್ಯಗಳ ಭಕ್ತರು ಕೂಡ ಇಲ್ಲಿಗೆ ಹಾಜರಾಗ್ತಾರೆ. ಜಾತ್ರೆ ಮತ್ತೊಂದು ವಿಶೇಷತೆ ಅಂದ್ರೆ, ಲಕ್ಷ್ಮೀ ದೇವಿ ಜಾತ್ರೆ ಜತೆ ಜತೆಗೆ ಕುದುರೆ ಸಂತೆ ಕೂಡ ಇಲ್ಲಿ ನಡೆಯುತ್ತೆ. 3 ದಿನಗಳ ಕಾಲ ನಡೆಯುವ ಈ ಸಂತೆಯಲ್ಲಿ 200ಕ್ಕೂ ಹೆಚ್ಚು ಕುದುರೆಗಳು ಭಾಗವಹಿಸುತ್ತವೆ. ಮಹಾರಾಷ್ಟ್ರದ ಮಿರಜ್, ಇಚಲಕರಂಜಿ ಸೇರಿದಂತೆ ಮುಧೋಳ, ಮಹಾಲಿಂಗಪುರ, ಹಾರೋಗೇರಿ, ಚಿಂಚಲಿ ಮತ್ತಿತರ ಭಾಗಗಳಿಂದ ವ್ಯಾಪಾರಕ್ಕೆಂದು ಕುದುರೆಗಳನ್ನ ಈ ಸಂತೆಗೆ ತರ್ತಾರೆ.
10ಕ್ಕೂ ಅಧಿಕ ಕುದುರೆ ತಳಿಗಳು: ಈ ಕುದರೆ ಸಂತೆಯಲ್ಲಿ ಕಾಟೆವಾಡ್, ಮಾರ್ವಾಡ್, ಸಿಂಧ್ ಪಂಜಾಬಿ, ಸಿಂಧ್, ಪಂಚಕಲ್ಯಾಣಿ ಸೇರಿದಂತೆ ಹತ್ತಕ್ಕೂ ಅಧಿಕ ಕುದುರೆ ತಳಿಗಳು ಕಂಡು ಬಂದ್ವು. ತಳಿಗಳ ಮತ್ತು ಕುದುರೆ ದಷ್ಟಪುಷ್ಟತೆ ಆಧಾರದ ಮೇಲೆ ರೇಟ್ ಫಿಕ್ಸ್ ಆಗುತ್ತೆ. 50 ಸಾವಿರದಿಂದ ಹಿಡಿದು 2ರಿಂದ3 ಲಕ್ಷದವರೆಗೂ ಕುದುರೆಗಳು ಇಲ್ಲಿ ಮಾರಾಟವಾಗ್ತಿವೆ. ರೈತರು, ಮೆರವಣಿಗೆ ಮಾಡುವವರು, ಕುದುರೆ ಮೇಲೆ ಓಡಾಡಬೇಕೆನ್ನುವವರು ಕುದುರೆಗಳನ್ನ ಖರೀದಿ ಮಾಡ್ತಾರೆ. ಕಳೆದ ವರ್ಷದಿಂದ ಕುದುರೆ ಸಂತೆ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.
Published On - 5:49 pm, Mon, 6 January 20