ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಜ.8 ಭಾರತ್ ಬಂದ್​, BMTCಗೆ ರಜೆ ಇಲ್ಲ

ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಜ.8 ಭಾರತ್ ಬಂದ್​, BMTCಗೆ ರಜೆ ಇಲ್ಲ

ಬೆಂಗಳೂರು: ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಜ.8ರಂದು ವಿವಿಧ ಸಂಘಟನೆಗಳಿಂದ ಭಾರತ್ ಬಂದ್​ಗೆ ಕರೆ ನೀಡಿವೆ. ಸಂಘಟಿತ, ಅಸಂಘಟಿತ ವಲಯದ ಸುಮಾರು 40 ಕೋಟಿ ಕಾರ್ಮಿಕರು ಭಾರತ್ ಬಂದ್​ಗೆ ಕರೆ ನೀಡಿದ್ದಾರೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಜ.8ರಂದು BMTC, KSRTC ಬಸ್​ ಸಂಚಾರ ಅನುಮಾನವಿದೆ. ಈಗಾಗಲೇ KSRTC, BMTC, ಐಟಿ-ಬಿಟಿ ವಲಯದ ನೌಕರರು, ಆಟೋ ಚಾಲಕರು, ಬ್ಯಾಂಕ್​ ನೌಕರರು ಸೇರಿದಂತೆ ಎಲ್ಲ ಕಾರ್ಮಿಕರು ಭಾರತ್​ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ.

ಬಂದ್ ದಿನ BMTC ನೌಕರರಿಗೆ ರಜೆ ಇಲ್ಲ:
ಜನವರಿ 8ರಂದು ಭಾರತ್​ ಬಂದ್​ಗೆ ಕರೆ ನೀಡಿರುವ ಸಂಬಂಧ ನಮ್ಮ ಯೂನಿಯನ್‌ನಿಂದ ನಮಗೆ ಮಾಹಿತಿ ಬಂದಿಲ್ಲ. ಅಂದು ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಇರುತ್ತೆ. ಭದ್ರತಾ ಮತ್ತು ಜಾಗೃತ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದೆ ಎಂದು BMTC ಎಂಡಿ ಶಿಖಾ ಸ್ಪಷ್ಟಪಡಿಸಿದ್ದಾರೆ. ಭಾರತ್​ ಬಂದ್ ದಿನ ಬಿಎಂಟಿಸಿ ನೌಕರರಿಗೆ ರಜೆ ನೀಡುವುದಿಲ್ಲ. ಅಂದು ರಜೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಬಂದ್‌ನಲ್ಲಿ ಭಾಗಿಯಾದ್ರೆ ಕಾನೂನು ಕ್ರಮ ‌ಕೈಗೊಳ್ಳುತ್ತೇವೆ ಎಂದು ಶಿಖಾ ಎಚ್ಚರಿಕೆ ನೀಡಿದ್ದಾರೆ.

Click on your DTH Provider to Add TV9 Kannada