
ಬೀದರ್: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವಿಷಯದಲ್ಲಿ ಆಸ್ಪತ್ರೆಗಳು ಎಡವಟ್ಟಿನ ಮೇಲೆ ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತವೆ. ಇದೇ ರೀತಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯ ವೈದ್ಯರು ಭಾರಿ ಎಡವಟ್ಟು ಮಾಡಿದ್ದಾರೆ. ಕೋವಿಡ್ ವರದಿ ಬರುವ ಮುನ್ನವೇ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಬೀದರ್ ತಾಲೂಕಿನ S.M.ಕೃಷ್ಣ ಬಡಾವಣೆಯ ನಿವಾಸಿ ಲೋ ಬಿಪಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಜುಲೈ 16ರಂದು ದಾಖಲಾಗಿದ್ರು. ಅಂದು ರಾತ್ರಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಆದರೆ ಅವರ ಕೋವಿಡ್ ವರದಿ ಬರುವ ಮುನ್ನವೇ ವ್ಯಕ್ತಿಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಅಲ್ಲದೆ ಸಹಜ ಸಾವೆಂದು ಶವ ಪ್ಯಾಕ್ ಮಾಡದೆ ನೀಡಿದ್ದಾರೆ. ಜುಲೈ 17ರಂದು ನೂರಾರು ಜನ, ಸಂಬಂಧಿಕರು ಸೇರಿ ಅಂತ್ಯಕ್ರಿಯೆ ನಡೆಸಿದ್ದಾರೆ. ಆದರೆ ಕೊರೊನಾ ವರದಿ ಬಂದ ಮೇಲೆ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದವರಿಗೆ ಈಗ ಆತಂಕ ಶುರುವಾಗಿದೆ.
Published On - 2:15 pm, Wed, 22 July 20