ಇದೇ ತಿಂಗಳಿಂದ ಕನ್ನಡ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ತೆರೆಗೆ ಬರೋಕೆ ಸಿದ್ಧವಾಗಿದೆ. ಬಿಗ್ ಬಾಸ್ ಮನೆ ಒಳಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ನಡೆಯುತ್ತಿದೆ. ಇದರ ಜತೆ ಜತೆಗೆ ಸುದೀಪ್ ಸಂಭಾವನೆ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿವೆ. ಹಾಗಾದರೆ, ಸುದೀಪ್ ಒಂದು ಸೀಸನ್ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದಕ್ಕೆ ಇಲ್ಲಿದೆ ವಿವರ.
ಸೀಸನ್ 1ರಿಂದ ಕನ್ನಡ ಬಿಗ್ ಬಾಸ್ಅನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಈ ಬಾರಿಯು ಬಿಗ್ ಬಾಸ್ ಮನೆಗೆ ಸುದೀಪ್ ಸಾರಥ್ಯವೇ ಇರಲಿದೆ. ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳ ಜತೆ ಮಾತುಕತೆ ನಡೆಸುತ್ತಾರೆ. ಸುದೀಪ್ ತಮ್ಮ ಮಾತಿನ ಮೂಲಕವೇ ಎಲ್ಲರಿಗೂ ಇಷ್ಟವಾಗುತ್ತಾರೆ. ಅವರ ನಿರೂಪಣೆಯೆ ಬಿಗ್ ಬಾಸ್ಗೆ ಒಂದು ಶೋಭೆ ಎಂದರೆ ತಪ್ಪಾಗಲಾರದು. ಹೀಗಾಗಿ, ಬಿಗ್ಬಾಸ್ಗೆ ಸುದೀಪ್ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.
ಬಿಗ್ ಬಾಸ್ ಮೂರು ಸೀಸನ್ಗಳನ್ನು ಯಾವುದೇ ಒಪ್ಪಂದ ಇಲ್ಲದೆ ಸುದೀಪ್ ನಡೆಸಿಕೊಟ್ಟಿದ್ದರು. ನಂತರದ ಐದು ಸೀಸನ್ಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಸೀಸನ್ 8ಕ್ಕೆ ಈ ಒಪ್ಪಂದ ಪೂರ್ಣಗೊಳ್ಳಲಿದೆ. ಈ ಐದು ಸೀಸನ್ಗೆ ಸುದೀಪ್ 20 ಕೋಟಿ ರೂಪಾಯಿ ಪಡೆದಿದ್ದಾರೆ. ಅಂದರೆ, ಒಂದು ಸೀಸನ್ಗೆ 4 ಕೋಟಿ ರೂಪಾಯಿ ಆಗಲಿದೆ.
ಇನ್ನು, 8 ಸೀಸನ್ ಪೂರ್ಣಗೊಂಡ ನಂತರವೂ ಸುದೀಪ್ ಅವರೇ ಬಿಗ್ ಬಾಸ್ ನಡೆಸಿಕೊಡುವ ಸಾಧ್ಯತೆ ಇದೆ. ಸಾಕಷ್ಟು ವೀಕ್ಷಕರು ಸುದೀಪ್ಗಾಗಿಯೇ ಬಿಗ್ ಬಾಸ್ ನೋಡುವವರಿದ್ದಾರೆ. ಹೀಗಾಗಿ, ಮುಂದಿನ ಸೀಸನ್ಗಳನ್ನೂ ಅವರೇ ನಡೆಸಿಕೊಡಬಹುದು ಎನ್ನಲಾಗುತ್ತಿದೆ.
12 ವಾರಗಳ ಬಿಗ್ ಬಾಸ್ ಸೀಸನ್ಗೆ ಸಲ್ಲೂ ಪಡೆಯಲಿರೋದು ಬರೋಬ್ಬರಿ ರೂ. 450 ಕೋಟಿ!!!
Published On - 2:15 pm, Tue, 2 February 21