ಬಿಗ್ ಬಾಸ್ ಮನೆ ಸೇರಿರೋ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಸಮ್​ಥಿಂಗ್ ಸ್ಪೆಷಲ್?

|

Updated on: Oct 13, 2023 | 10:20 AM

ಇತ್ತೀಚೆಗೆ ಸ್ನೇಹಿತ್ ಹಾಗೂ ಸಂಗೀತಾ ಮಾತನಾಡುತ್ತಿದ್ದರು. ಇವರನ್ನು ಕಾರ್ತಿಕ್ ನೋಡುತ್ತಾ ಇದ್ದರು. ಆ ಬಳಿಕ ಸ್ನೇಹಿತ್ ಹೊರಗೆ ಬಂದು ‘ಏನಾಯ್ತು’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾರ್ತಿಕ್, ‘ಬಾಯಿಗೆ ಬಂದ ತುತ್ತು ಕೈಗೆ ಬಂದಿಲ್ಲ’ ಎಂದರು.

ಬಿಗ್ ಬಾಸ್ ಮನೆ ಸೇರಿರೋ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಸಮ್​ಥಿಂಗ್ ಸ್ಪೆಷಲ್?
ಕಾರ್ತಿಕ್-ಸಂಗೀತಾ
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಮಧ್ಯೆ ದೊಡ್ಮನೆಯಲ್ಲಿ ಪ್ರೀತಿ ಹುಟ್ಟಿತು. ಅದೇ ರೀತಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಮಧ್ಯೆ ಪ್ರೀತಿ ಮೂಡಿದ್ದು ಇವರು ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿದ್ದು ಮತ್ತೊಂದು ಲವ್​ಸ್ಟೋರಿ ಹುಟ್ಟಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ನಡೆದುಕೊಳ್ಳುತ್ತಿರುವ ರೀತಿ ಈ ಅನುಮಾನ ಹುಟ್ಟುಹಾಕಿದೆ.

ಇತ್ತೀಚೆಗೆ ಸ್ನೇಹಿತ್ ಹಾಗೂ ಸಂಗೀತಾ ಮಾತನಾಡುತ್ತಿದ್ದರು. ಇವರನ್ನು ಕಾರ್ತಿಕ್ ನೋಡುತ್ತಾ ಇದ್ದರು. ಆ ಬಳಿಕ ಸ್ನೇಹಿತ್ ಹೊರಗೆ ಬಂದು ‘ಏನಾಯ್ತು’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾರ್ತಿಕ್, ‘ಬಾಯಿಗೆ ಬಂದ ತುತ್ತು ಕೈಗೆ ಬಂದಿಲ್ಲ’ ಎಂದರು.

ಇನ್ನು, ಪ್ರಥಮ್ ಬಂದಾಗ ಸಂಗೀತಾ ಹಾಗೂ ಕಾರ್ತಿಕ್ ಅವರನ್ನು ಒಟ್ಟಿಗೇ ಕರೆಯುತ್ತಿದ್ದರು. ಸಂಗೀತಾ ಬಳಿ ಸ್ವೀಟ್ ಮಾಡಿಕೊಂಡು ಬರುವಂತೆ ಸೂಚಿಸಿದರು ಪ್ರಥಮ್. ಸಂಗೀತಾ ಬಳಿ ಸ್ವೀಟ್ ತಿನ್ನಿಸುವಂತೆ ಸೂಚಿಸಿದರು. ಆಗ ಕಾರ್ತಿಕ್ ಅವರನ್ನು ಸಮೀಪವೇ ಕರೆದು ಇಟ್ಟುಕೊಂಡಿದ್ದರು ಪ್ರಥಮ್. ಈ ಮೂಲಕ ಕಾರ್ತಿಕ್​ಗೆ ಹೊಟ್ಟೆ ಉರಿಸುವ ಕೆಲಸ ಮಾಡಿದರು ಪ್ರಥಮ್.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮಿಲಿಟರಿ ಡ್ರೆಸ್ ಧರಿಸಿ ಬಂದ ಪ್ರಥಮ್; ಹೇಗಿತ್ತು ನೋಡಿ ಖದರ್

ಪ್ರಥಮ್ ಮನೆಯಿಂದ ಹೊರ ಹೋದ ಬಳಿಕ ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಈ ವಿಚಾರ ಚರ್ಚೆಗೆ ಬಂತು. ‘ನಮ್ಮಿಬ್ಬರನ್ನು ಹೊರಗೆ ಜನರು ಇಷ್ಟಪಡುತ್ತಿದ್ದಾರೆ. ಪ್ರಥಮ್ ನಡೆದುಕೊಂಡ ರೀತಿ ಇದೇ ಸಾಕ್ಷಿ. ಆದರೆ, ನಾವಿಬ್ಬರು ಫ್ರೆಂಡ್ಸ್ ಎನ್ನುವ ಕ್ಲಾರಿಟಿ ನಮಗೆ ಇರಲಿ’ ಎಂದರು ಕಾರ್ತಿಕ್. ಸದ್ಯ ಇವರ ಮಧ್ಯೆ ಸಮ್​ಥಿಂಗ್ ಸ್ಪೆಷಲ್ ನಡೆಯುತ್ತಿದೆಯೇ ಎನ್ನುವ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ