AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಸಕ್ತಿ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣ’; ಪ್ರತಾಪ್ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್

ಬಿಗ್ ಬಾಸ್ ಮನೆಗೆ ಹೋದರೆ ಜನಪ್ರಿಯತೆ ಸಿಗುತ್ತದೆ. ಕೆಲವೊಮ್ಮೆ ಇದು ಉಲ್ಟಾ ಆಗಿದ್ದೂ ಇದೆ. ಕಾಂಟ್ರವರ್ಸಿ ಮಾಡಿಕೊಂಡು ಕುಖ್ಯಾತಿ ಪಡೆದವರೂ ಅನೇಕರಿದ್ದಾರೆ. ಕೆಲವರಿಗೆ ಈ ಆಟ ಇಷ್ಟವೇ ಆಗುವುದಿಲ್ಲ. ಪ್ರತಾಪ್​ಗೂ ಬಿಗ್ ಬಾಸ್ ಬಗ್ಗೆ ಆಸಕ್ತಿ ಇರಲಿಲ್ಲ. ಅವರು ಈ ಕುರಿತು ಹೇಳಿಕೊಂಡಿದ್ದರು.

‘ಆಸಕ್ತಿ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣ’; ಪ್ರತಾಪ್ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್
ಡ್ರೋನ್ ಪ್ರತಾಪ್
ರಾಜೇಶ್ ದುಗ್ಗುಮನೆ
|

Updated on:Oct 13, 2023 | 2:12 PM

Share

ಡ್ರೋನ್ ಪ್ರತಾಪ್ ಅವರು ಕಳೆದ ಕೆಲವು ವರ್ಷಗಳಿಂದ ಚರ್ಚೆಯಲ್ಲಿದ್ದಾರೆ. ಅವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ ಅನ್ನೋದು ಕೆಲವರ ಆರೋಪ. ಬಿಗ್ ಬಾಸ್ ಮನೆ ಒಳಗೆ ಹೋದ ಬಳಿಕವೂ ಅವರು ಸುದ್ದಿಯಲ್ಲಿದ್ದಾರೆ. ಅಲ್ಲಿಯೂ ಡ್ರೋನ್ ವಿಚಾರ ಇಟ್ಟುಕೊಂಡು ಅವರನ್ನು ಟೀಕೆ ಮಾಡಲಾಗುತ್ತಿದೆ. ದೊಡ್ಮನೆಯಲ್ಲಿ ಈ ಬಗ್ಗೆ ಭರ್ಜರಿ ಚರ್ಚೆಗಳು ಆಗುತ್ತಿವೆ. ಸ್ನೇಹಿತ್ ಅವರು ಪ್ರತಾಪ್ (Drone Prathap ) ಅವರನ್ನು ಡೋಂಗಿ ಎಂದೆಲ್ಲ ಕರೆದಿದ್ದರು. ಈಗ ಡ್ರೋನ್ ಪ್ರತಾಪ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ‘ನಾನು ಬಿಗ್ ಬಾಸ್​ಗೆ ಹೋಗಲ್ಲ’ ಎಂದು ಅವರು ಹೇಳಿದ್ದರು.

ಪ್ರತಾಪ್ ಅವರು ತಾವೇ ಡ್ರೋನ್ ಕಂಡು ಹಿಡಿದಿದ್ದಾಗಿ ಹೇಳಿಕೊಂಡರು. ಈ ಕಾರಣದಿಂದ ಅವರಿಗೆ ಸಾಕಷ್ಟು ಪ್ರಚಾರ ನೀಡಲಾಯಿತು. ಅವರನ್ನು ಯುವ ವಿಜ್ಞಾನಿ ಎಂದೆಲ್ಲ ಕರೆಯಲಾಯಿತು. ಅಸಲಿ ವಿಚಾರ ಗೊತ್ತಾದ ಬಳಿಕ ಜನರು ಅವರನ್ನು ಟ್ರೋಲ್ ಮಾಡೋಕೆ ಶುರು ಮಾಡಿದರು. ಅವರಿಗೆ ಈ ಮೊದಲು ಬಿಗ್ ಬಾಸ್ ಮನೆಗೆ ಹೋಗುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದರು.

ಬಿಗ್ ಬಾಸ್ ಮನೆಗೆ ಹೋದರೆ ಜನಪ್ರಿಯತೆ ಸಿಗುತ್ತದೆ. ಕೆಲವೊಮ್ಮೆ ಇದು ಉಲ್ಟಾ ಆಗಿದ್ದೂ ಇದೆ. ಕಾಂಟ್ರವರ್ಸಿ ಮಾಡಿಕೊಂಡು ಕುಖ್ಯಾತಿ ಪಡೆದವರೂ ಅನೇಕರಿದ್ದಾರೆ. ಕೆಲವರಿಗೆ ಈ ಆಟ ಇಷ್ಟವೇ ಆಗುವುದಿಲ್ಲ. ಪ್ರತಾಪ್​ಗೂ ಬಿಗ್ ಬಾಸ್ ಬಗ್ಗೆ ಆಸಕ್ತಿ ಇರಲಿಲ್ಲ. ಅವರು ಈ ಕುರಿತು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ರಾತ್ರೋರಾತ್ರಿ ಬದಲಾದ ಡ್ರೋನ್ ಪ್ರತಾಪ್

‘ನೀವು ಬಿಗ್​ ಬಾಸ್​ಗೆ ಹೋಗುತ್ತೀರಿ ಎನ್ನುವ ಬಗ್ಗೆ ಸುದ್ದಿ ಆಗುತ್ತಲೇ ಇದೆಯಲ್ಲ’ ಎಂದು ಪ್ರತಾಪ್​ಗೆ ಕೇಳಲಾಯಿತು. ‘ಬಿಗ್ ಬಾಸ್​ಗೆ ಬರುವಂತೆ ಕರೆದಿದ್ದರು. ಆದರೆ, ನನಗೆ ಇಷ್ಟವಿಲ್ಲ. ನನಗೆ ಮಾಡೋಕೆ ಬೇರೆ ಕೆಲಸ ಇದೆ. ತಿಂಗಳಾನುಗಟ್ಟಲೆ ಒಂದು ಕಡೆ ಕೂತಿರೋಕೆ ನನಗೆ ಆಗಲ್ಲ’ ಎಂದು ಅವರು ಹೇಳಿದ್ದರು. ‘ಬಿಗ್ ಬಾಸ್ ಮನೆಗೆ ಹೋಗೋಕೆ ಎಲ್ಲರೂ ಬಯಸುತ್ತಾರೆ. ಆದರೆ, ನೀವೇನು ಹೀಗೆ ಹೇಳುತ್ತಿದ್ದೀರಲ್ಲ’ ಎಂದು ಪ್ರತಾಪ್ ಅವರನ್ನು ಕೇಳಲಾಯಿತು. ‘ಅವರೇನು ಮಾಡ್ತಾರೋ ಅದನ್ನು ಮಾಡ್ಲಿ. ಬಿಗ್ ಬಾಸ್ ಏನು ಎನ್ನುವ ಬಗ್ಗೆ ನನಗೆ ಐಡಿಯಾ ಇಲ್ಲ. ಆಸಕ್ತಿ ಇಲ್ಲದ ಜಾಗಕ್ಕೆ ಹೋಗಿ ಏನು ಮಾಡೋಣ’ ಎಂದು ಪ್ರತಾಪ್ ಪ್ರಶ್ನೆ ಮಾಡಿದ್ದರು.

View this post on Instagram

A post shared by KUSHKA HAKLA (@kushka.hakla)

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮಿಲಿಟರಿ ಡ್ರೆಸ್ ಧರಿಸಿ ಬಂದ ಪ್ರಥಮ್; ಹೇಗಿತ್ತು ನೋಡಿ ಖದರ್ ಬಿಗ್ ಬಾಸ್ ಮನೆಗೆ ಬಂದ ದಿನವೇ ‘ನಾನು ಒಂದು ವಾರಕ್ಕೆ ಹೋಗ್ತೀನಿ’ ಎಂದು ಪ್ರತಾಪ್ ಹೇಳಿದ್ದರು. ಆದರೆ, ಈ ಬಗ್ಗೆ ಮನೆಯ ಸದಸ್ಯರು ಟೀಕೆ ಮಾಡಿದ ಬಳಿಕ ಅವರು ಮನಸ್ಸು ಬದಲಿಸಿದ್ದಾರೆ. ‘ಕೊನೆಯವರೆಗೂ ಇರುತ್ತೇನೆ, ಇದ್ದಷ್ಟು ದಿನ ಹೋರಾಡುತ್ತೇನೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Fri, 13 October 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​