AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಶಿಸ್ತಿನ ಪಾಠ: ಲಾರ್ಡ್ ಪ್ರಥಮ್ ಅಬ್ಬರಕ್ಕೆ ಸ್ಪರ್ಧಿಗಳು ತತ್ತರ

Bigg Boss 10: ಕಳೆದ ಬಾರಿ ಒಳ್ಳೆ ಹುಡುಗನಾಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಪ್ರಥಮ್ ಈ ಬಾರಿ ಲಾರ್ಡ್ ಪ್ರಥಮ್ ಆಗಿ ಎಂಟ್ರಿ ಕೊಟ್ಟು, ಸ್ಪರ್ಧಿಗಳ ಬೆವರಿಳಿಸಿದರು. ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡುವ ಜೊತೆಗೆ ಸೂಕ್ತ ಸಲಹೆಗಳನ್ನು ಸಹ ನೀಡಿದರು.

ಬಿಗ್​ಬಾಸ್ ಮನೆಯಲ್ಲಿ ಶಿಸ್ತಿನ ಪಾಠ: ಲಾರ್ಡ್ ಪ್ರಥಮ್ ಅಬ್ಬರಕ್ಕೆ ಸ್ಪರ್ಧಿಗಳು ತತ್ತರ
ಲಾರ್ಡ್ ಪ್ರಥಮ್
Follow us
ಮಂಜುನಾಥ ಸಿ.
|

Updated on:Oct 13, 2023 | 12:03 AM

ಬಿಗ್​ಬಾಸ್ (Bigg Boss) ಗುರುವಾರದ ಮನೆಗೆ ಹಠಾತ್ತಾಗಿ ಮಾಜಿ ಬಿಗ್​ಬಾಸ್ ವಿಜೇತ ಪ್ರಥಮ್ (Pratham) ಎಂಟ್ರಿ ಆಯಿತು. ಕಳೆದ ಬಾರಿ ‘ಒಳ್ಳೆ ಹುಡುಗ’ ಬಂದಿದ್ದ ಪ್ರಥಮ್ ಈ ಬಾರಿ ‘ಲಾರ್ಡ್ ಪ್ರಥಮ್’ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟರು. ‘ಐ ಆಮ್ ವಿಲನ್’ ಎಂದು ಸರ್ವಾಧಿಕಾರಿಯಂತೆ ಸಮವಸ್ತ್ರ ತೊಟ್ಟು ಖಡಕ್ ಆಗಿ ಎಂಟ್ರಿ ಕೊಟ್ಟ ಪ್ರಥಮ್, ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡಿದರು. ಪ್ರಥಮ್ ಆಟಾಟೋಪಕ್ಕೆ ಸ್ಪರ್ಧಿಗಳು ಅಲ್ಲಾಡಿ ಹೋದರು.

ಪ್ರಥಮ್ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೂಡಲೇ ತಮ್ಮ ಶಿಸ್ತಿನ ಕಠು ಮಾತುಗಳಿಂದ ಎಲ್ಲರಿಗೂ ಭಯ ಮೂಡಿಸಿದರು. ಎಲ್ಲರೂ ತಮಗೆ ಗೌರವ ನೀಡುವಂತೆಯೂ, ಲಾರ್ಡ್ ಪ್ರಥಮ್ ಎಂದೇ ಸಂಭೋದಿಸುವಂತೆಯೂ ಆದೇಶ ಮಾಡಿದರು. ಕೆಲವರನ್ನಂತೂ ಸಖತ್ ಆಗಿ ಆಟ ಆಡಿಸಿದರು. ತಮ್ಮ ಅನುಮತಿ ಇಲ್ಲದೆ ತುಟಿ ಬಿಚ್ಚಿದವರಿಗೆ ಮಾತಿನ ಛಾಟಿ ಬೀಸಿದ ಪ್ರಥಮ್, ಥೇಟ್ ಸರ್ವಾಧಿಕಾರಿಯಂತೆ, ಕೈ ಒತ್ತಲು ಕೆಲವರನ್ನು, ಊಟ ತಿನ್ನಿಸಲು ಕೆಲವರನ್ನು ನೇಮಿಸಿಕೊಂಡರು. ತಮ್ಮ ಆದೇಶ ಮೀರಿದವರನ್ನು, ತಮಗೆ ವ್ಯತಿರಿಕ್ತವಾಗಿ ವರ್ತಿಸಿದವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದರು.

ಜೊತೆಗೆ ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಸೂಕ್ತ ಸಲಹೆಗಳನ್ನು ನೀಡಿದರು, ಅವರು ಮನೆಯಲ್ಲಿ ಮಾಡುತ್ತಿರುವ ತಪ್ಪುಗಳು, ಸುಧಾರಿಸಿಕೊಳ್ಳಬೇಕಾದ ವಿಧಾನ ಎಲ್ಲವನ್ನೂ ತಮ್ಮದೇ ಶೈಲಿಯಲ್ಲಿ ವಿವರಿಸಿದರು. ಗೌರೀಶ್ ಅಕ್ಕಿಯವರು ಹೆಚ್ಚು ಮಾತನಾಡಬೇಕೆಂದು, ಸಂತೋಶ್ ಹಳ್ಳಿಕಾರ್ ಸಹ ಸರಿಯಾಗಿ ಎಲ್ಲರೊಟ್ಟಿಗೆ ಬೆರೆಯಬೇಕೆಂದು, ಮೈಖಲ್ ಮನೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳಬೇಕೆಂದು ಹೀಗೆ ಎಲ್ಲರಿಗೂ ವಿವಿಧ ಸಲಹೆಗಳನ್ನು ಪ್ರಥಮ್ ನೀಡಿದರು. ಡ್ರೋನ್ ಪ್ರತಾಪ್​ಗೆ ವಿಶೇಷ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಜೊತೆಗೆ ಮನೆಯ ಇತರೆ ಸದಸ್ಯರಿಗೆ ಡ್ರೋನ್ ಪ್ರತಾಪ್ ಅವರ ಹೊರಗಿನ ವಿಷಯಕ್ಕೆ ಇಲ್ಲಿ ಅವರನ್ನು ಹೀಗಳೆಯುವುದು ಬೇಡ, ಬದಲಿಗೆ ಮನೆಯ ಒಳಗಿನ ಅವರ ವರ್ತನೆ ಬಗ್ಗೆ ಟೀಕೆ ಮಾಡಿ ಶಿಕ್ಷೆ ನೀಡಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ

ಪ್ರಥಮ್​ರ ಸರ್ವಾಧಿಕಾರಿತನ ಬಿಗ್​ಬಾಸ್ ಮನೆಯೊಳಗಿನವರಿಗೆ ಪೀಕಲಾಟ ತಂದರೆ ನೋಡುಗರಿಗೆ ಸಖತ್ ಮಜಾ ಕೊಟ್ಟಿರದೇ ಇರದು. ಅದರಲ್ಲಿಯೂ ಕಾರ್ತಿಕ್ ಅವರನ್ನು ಎದುರಿಗೆ ನಿಲ್ಲಿಸಿಕೊಂಡು, ಸಂಗೀತಾ ಅವರು ತಮಗೆ ಊಟ ತಿನ್ನಿಸುವಂತೆ ಹೇಳಿದ್ದು, ಬಾತ್​ರೂಂ ಬಳಸುತ್ತೇನೆ ಎಂದು ಕ್ಯಾಪ್ಟನ್ ಸ್ನೇಹಿತ್ ಅಂದಾಗ ಹೇಳಿದ ಡೈಲಾಗ್​ಗಳು ನೋಡುಗರಿಗೆ ಮಾತ್ರವಲ್ಲ ಮನೆಯ ಸದಸ್ಯರೂ ನಗುವಂತೆ ಮಾಡಿತು.

ಕೊನೆಗೆ ಸಮರ್ಥರು ಹಾಗೂ ಅಸಮರ್ಥರಿಗೆ ಟಾಸ್ಕ್ ಅನ್ನು ಸಹ ಮಾಡಿಸಿದ ಪ್ರಥಮ್, ಎಲ್ಲರಿಗೂ ಶುಭಾಶಯ ತಿಳಿಸಿ ಮನೆಯಿಂದ ಹೊರನಡೆದರು. ಪ್ರಥಮ್ ಆಗಮನದಿಂದ ಮನೆಯ ಕೆಲ ಸದಸ್ಯರು ಉತ್ಸಾಹಿತರಾದರೆ, ಪ್ರಥಮ್ ರ ಕಡು ಮಾತುಗಳಿಂದ ಕೆಲವರಿಗೆ ಇರಿಸು ಮುರುಸು ಸಹ ಆಯಿತು. ಬಿಗ್​ಬಾಸ್ ಕನ್ನಡ ಸೀಸನ್ 10 ಜಿಯೋ ಸಿನಿಮಾಸ್ ಹಾಗೂ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 pm, Thu, 12 October 23

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ