ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮೊದಲೆರಡು ದಿನ ಆರಾಮವಾಗಿ ಹಾಡು-ಆಡುತ್ತಾ ಸಮಯ ಕಳೆದ ಸ್ಪರ್ಧಿಗಳು ಆಟದ ಬಿಸಿಯನ್ನು ಎದುರಿಸಿದ್ದಾರೆ.

ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ
ಬಿಗ್​ಬಾಸ್
Follow us
ಮಂಜುನಾಥ ಸಿ.
|

Updated on:Oct 10, 2023 | 11:21 PM

ಬಿಗ್​ಬಾಸ್​ ಕನ್ನಡ ಸೀಸನ್ 10 (Bigg Boss) ಶುರುವಾಗಿದೆ. ಮೊದಲೆರಡು ದಿನಗಳು ಆರಾಮದಿಂದ ಜಾಲಿಯಾಗಿ ಕಳೆದ ಸ್ಪರ್ಧಿಗಳಿಗೆ ಮೂರನೇ ದಿನಕ್ಕೆ ಆಟದ ಶಾಖ ಅನುಭವಕ್ಕೆ ಬರಲು ಆರಂಭವಾದಂತಿದೆ. ಬಿಗ್​ಬಾಸ್​ ಆರಂಭವಾದ ಮೂರನೇ ದಿನಕ್ಕೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ನಾಮಿನೇಟ್ ಆದವರಿಗೆ ಬಿಗ್​ಬಾಸ್ ಬಣ್ಣದ ಗುಂಡು ಹೊಡೆದಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ನಿರೀಕ್ಷೆಯಂತೆಯೇ ಸ್ಪರ್ಧಿಗಳ ನಡುವೆ ರಾಗ-ದ್ವೇಷಗಳನ್ನು ಮೂಡಿಸಿದೆ.

ಬಿಗ್​ಬಾಸ್ ಆರಂಭದ ದಿನದಂದು ಕಡಿಮೆ ಮತಗಳನ್ನು ಪಡೆದ ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ತನಿಷಾ, ಸಂಗೀತಾ ಶ್ರಿಂಗೇರಿ, ರಕ್ಷಕ್ ಬುಲೆಟ್, ಕಾರ್ತಿಕ್ ಈ ಆರು ಜನರಲ್ಲಿ ತಲಾ ಇಬ್ಬರನ್ನು ಮನೆಯ ಇತರೆ ಸದಸ್ಯರು ನಾಮಿನೇಟ್ ಮಾಡಬೇಕೆಂದು ಬಿಗ್​ಬಾಸ್ ಆದೇಶ ಹೊರಡಿಸಿದರು.

ಅಂತೆಯೇ ನಮ್ರತಾ, ಸಂತೋಶ್, ತನಿಷಾ ಅವರನ್ನು, ನಟ ಸ್ನೇಹಿತ್, ಡ್ರೋನ್ ಪ್ರತಾಪ್ ಹಾಗೂ ಹಳ್ಳಿಕಾರ್ ಸಂತೋಶ್ ಅವರನ್ನು, ರ್ಯಾಪರ್ ಈಶಾನಿ ತನಿಷಾ ಹಾಗೂ ಸಂತೋಶ್ ಅವರನ್ನು, ಸ್ನೇಕ್ ಶ್ಯಾಮ್ ಅವರು ಡ್ರೋನ್ ಪ್ರತಾಪ್ ಹಾಗೂ ಹಳ್ಳಿಕಾರ್ ಸಂತೋಶ್ ಅವರನ್ನು, ನೀತು ವನಜಾಕ್ಷಿ ಅವರು ಪ್ರತಾಪ್ ಹಾಗೂ ರಕ್ಷಕ್ ಅವರನ್ನು ನಟ ತುಕಾಲಿ ಸಂತೋಶ್, ಸಂಗೀತ ಶ್ರಿಂಗೇರಿ ಹಾಗೂ ಕಾರ್ತಿಕ್ ಅವರನ್ನು, ನೈಜೀರಿಯನ್ ಕನ್ನಡಿಗ ಮೈಖಲ್ ಕಾರ್ತಿಕ್ ಹಾಗೂ ಪ್ರತಾಪ್ ಅವರನ್ನು, ನಟಿ ಸಿರಿ ಅವರು ರಕ್ಷಕ್, ಪ್ರತಾಪ್ ಅವರನ್ನು, ವಿನಯ್ ಅವರು ಕಾರ್ತಿಕ್ ಹಾಗೂ ಸಂಗೀತ ಅವರನ್ನು ಗೌರೀಶ್ ಅಕ್ಕಿ ಅವರು ಪ್ರತಾಪ್ ಹಾಗೂ ಸಂತೋಶ್ ಅವರನ್ನು ನಟಿ ಭಾಗ್ಯ ಅವರು ತನಿಷಾ, ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದರು.

ಇದನ್ನೂ ಓದಿ:ಕೋಟಿ ಕೊಟ್ರು ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ನಟಿ ಬಿಗ್​ಬಾಸ್​ಗೆ ಬಂದಿದ್ದು ಏಕೆ?

ನಾಮಿನೇಟ್ ಆದ ಪ್ರತಿ ಬಾರಿಯೂ ನಾಮಿನೇಟ್ ಆದವರು ದೊಡ್ಡ ಸಿಡಿಮದ್ದು ತೋಪಿನ ಮುಂದೆ ಕೂರಬೇಕಿತ್ತು, ಆ ತೋಪಿನ ಮೂಲದ ಜೋರಾಗಿ ಬಣ್ಣವನ್ನು ನಾಮಿನೇಟ್ ಆದವರ ಮೇಲೆ ಸಿಡಿಸಲಾಯ್ತು. ಆ ತೋಪಿನ ಶಬ್ದ, ಬಣ್ಣ ಚೆಲ್ಲುವ ವೇಗ ಇತರೆ ಸ್ಪರ್ಧಿಗಳಲ್ಲಿ ಭಯ ಮೂಡಿಸಿತು. ನಾಮಿನೇಟ್ ಆದ ಸ್ಪರ್ಧಿಗಳು, ಬಣ್ಣ ನೇರವಾಗಿ ಎದೆಗೆ ತಗುಲಿ ನೋವು ಅನುಭವಿಸಿದರು.

ಅಂತಿಮವಾಗಿ ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ನಟ ಕಾರ್ತಿಕ್ ಹಾಗೂ ನಟಿ ತನಿಷಾ ಅತಿ ಹೆಚ್ಚು ಜನರಿಂದ ನಾಮಿನೇಟ್ ಆದವರು ಎನಿಸಿಕೊಂಡು ಡೇಂಜರ್ ಜೋನ್​ಗೆ ತಳ್ಳಪಟ್ಟರು. ನಾಮಿನೇಶನ್ ಪ್ರಕ್ರಿಯೆ ಬಳಿಕ ನಟಿ ಸಂಗೀತಾ ಶ್ರಿಂಗೇರಿ ಅವರು ‘ಹರ ಹರ ಮಹದೇವ್’ ಧಾರಾವಾಹಿಯ ತಮ್ಮ ಸಹನಟ ವಿನಯ್ ಜೊತೆ ಇದೇ ಕಾರಣಕ್ಕೆ ವಾಗ್ವಾದವನ್ನೂ ಮಾಡಿದರು. ಕ್ಷುಲ್ಲಕ ಕಾರಣ ನೀಡಿ ತಮ್ಮನ್ನು ಉದ್ದೇಶಪೂರ್ವಕಾಗಿ ನಾಮಿನೇಟ್ ಮಾಡಿದ್ದೀಯ ಎಂಬುದು ಸಂಗೀತಾ ವಾದವಾಗಿತ್ತು.

ಇದಾದ ಬಳಿಕ ಮನೆಯ ಇತರೆ ಸ್ಪರ್ಧಿಗಳು ಸಹ ಪರಸ್ಪರರನ್ನು ನಾಮಿನೇಟ್ ಮಾಡಬೇಕಾದ ಪರಿಸ್ಥಿತಿ ಬಂತು. ಆಗ ಸ್ನೇಕ್ ಶ್ಯಾಮ್ ಅವರು ನೀತು ವನಜಾಕ್ಷಿ ಅವರನ್ನು ನಾಮಿನೇಟ್ ಮಾಡಿದರು. ನೀತು, ವಿನಯ್ ಹಾಗೂ ಸ್ನೇಹಿತ್​ರನ್ನು ನಾಮಿನೇಟ್ ಮಾಡಿದರು. ನಟ ವಿನಯ್ ಅವರು ಸ್ನೇಕ್ ಶಾಮ್ ಹಾಗೂ ನೀತು ವನಜಾಕ್ಷಿ ಅವರನ್ನು ನಾಮಿನೇಟ್ ಮಾಡಿದರು. ಹೀಗೆ ಪ್ರತಿಯೊಬ್ಬ ಸದಸ್ಯರು ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡಿದರು. ನಾಮಿನೇಷನ್ ಮುಗಿಯುವ ವೇಳೆಗೆ ಸ್ಪರ್ಧಿಗಳ ನಡುವೆ ಗುಂಪು ಚರ್ಚೆಗಳು ಆರಂಭವಾಗಿದ್ದು, ಪರಸ್ಪರರ ಬಗ್ಗೆ ಮೂದಲಿಕೆ, ಅನುಮಾನಗಳು ಆರಂಭವಾಗಿವೆ. ಈ ವಾರಾಂತ್ಯಕ್ಕೆ ಬಿಗ್​ಬಾಸ್ ಮನೆಯಿಂದ ಯಾರು ಹೊಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Tue, 10 October 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ