ಒಂದೇ ದಿನಕ್ಕೆ ಬಿಗ್​ ಬಾಸ್​ನಿಂದ ಆಚೆ ಬಂದ ಪ್ರದೀಪ್ ಈಶ್ವರ್: ಟ್ರೋಲ್, ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ಶಾಸಕ

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಒಂದೇ ದಿನಕ್ಕೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು. ಪ್ರದೀಪ್ ಈಶ್ವರ್. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಒಂದೇ ದಿನಕ್ಕೆ ಆಚೆ ಬಂದಿದ್ದು, ತಮ್ಮ ಬಗ್ಗೆ ಕೇಳಿಬಂದ ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಒಂದೇ ದಿನಕ್ಕೆ ಬಿಗ್​ ಬಾಸ್​ನಿಂದ ಆಚೆ ಬಂದ ಪ್ರದೀಪ್ ಈಶ್ವರ್: ಟ್ರೋಲ್, ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ಶಾಸಕ
ಶಾಸಕ ಪ್ರದೀಶ್ ಇಶ್ವರ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 10, 2023 | 2:26 PM

ಬೆಂಗಳೂರು, (ಅಕ್ಟೋಬರ್ 10): ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್​ ಈಶ್ವರ್(Pradeep Eshwar), ಕನ್ನಡ​ ಬಿಗ್​ಬಾಸ್​(Bigg Boss Kannada Season 10) ಮನೆಯಿಂದ ಹೊರ ಬಂದಿದ್ದಾರೆ. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಬಿಸ್​ಬಾಸ್​ ಮನೆಯಲ್ಲೇ ಉಳಿಯಲಿದ್ದಾರೆ ಎನ್ನಲಾಗಿತ್ತು. ಇದರಿಂದ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಸಾಮಾಜಿಕ ಜಾಕತಾಣಗಳಲ್ಲಂತೂ ಟ್ರೋಲ್​ ಪೇಜ್ಗೆ ಆಹಾರವಾಗಿದ್ದರು. ಇದೆಲ್ಲದರ ಬೆಳವಣಿಗೆಗಳ ನಡುವೆ ಪ್ರದೀಪ್ ಈಶ್ವರ್​, ಒಂದೇ ದಿನಕ್ಕೆ ಬಿಗ್​ ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ. ಇದರೊಂದಿಗೆ ಟೀಕೆಕಾರರ ಬಾಯಿ ಮುಚ್ಚಿಸಿದ್ದಾರೆ. ಇನ್ನು ಈ ಬಗ್ಗೆ ಪ್ರದೀಪ್ ಪ್ರತಿಕ್ರಿಯಿಸಿದ್ದು, ಎಲ್ಲಾ ಅಂತೆ-ಕಂತೆ ಸುದ್ದಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಬಿಗ್​ಬಾಸ್ ಸ್ಪರ್ಧಾಳುಗಳಿಗೆ ಮೋಟಿವೇಷನ್ ಮಾಡಲು ಕರೆದಿದ್ದರು. ಹೀಗಾಗಿ ರಿಯಾಲಿಟಿ ಶೋ ಅತಿಥಿಯಾಗಿ 3 ತಾಸು ಮಾತ್ರ ನಾನು ಒಳಹೋಗಿದ್ದೆ. ಆಯೋಜಕರ ಆಹ್ವಾನದ ಮೇರೆಗೆ ಹೋಗಿ ಬಂದಿದ್ದೇನೆ. ರಾಜ್ಯದ ಯುವಕರಿಗೆ ಅನುಕೂಲವಾಗಲಿ ಎಂದು ಭಾವಿಸಿ ಹೋಗಿದ್ದೇನೆ. ಕೆಲವರು ನನ್ನನ್ನು ಟೀಕೆ ಮಾಡುತ್ತಿದ್ದಾರೆ, ಅದು ಅವರ ಅಭಿಪ್ರಾಯ ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ: Pradeep Eshwar: ಶಾಸಕ ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ಗೆ ಬಂದಿದ್ದರ ಹಿಂದಿನ ಅಸಲಿ ಟ್ವಿಸ್ಟ್​ ಬಹಿರಂಗ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಪ್ರಭಾವಿ ಮಾಜಿ ಮಂತ್ರಿ ಡಾ.ಕೆ.ಸುಧಾಕರ್ ಸೋಲಿಸುವುದರ ಮೂಲಕ ರಾಜ್ಯದ ಗಮನವನ್ನೆ ಸೆಳೆದಿದ್ದರು. ಶಾಸಕರಾದ ಬೆನ್ನಲ್ಲೇ ಪ್ರದೀಪ್ ಈಶ್ವರ್ ಮನೆಮನೆಗಳಿಗೆ ತೆರಳಿ ಜನ ಕಷ್ಟ ಆಲಿಸಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ತಮ್ಮ ಮಾತುಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಆದ್ರೆ ಈಗ ಮತ್ತೊಮ್ಮೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 10 ನಲ್ಲಿ ಭಾಗವಹಿಸಿ ಚರ್ಚೆಗೆ ಗ್ರಾಸವಾಗಿದ್ದರು. ಅಲ್ಲದೇ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೇ ಅಸ್ತ್ರ ಮಾಡಿಕೊಂಡಿದ್ದ ಬಿಜೆಪಿ ನಾಯಕರು ಪ್ರದೀಪ್ ಈಶ್ವರ್ ಮೇಲೆ ಮುಗಿಬಿದ್ದಿದ್ದರು. ಕ್ಷೇತ್ರದಲ್ಲಿ ಬರ ಬಂದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ, ಬಿತ್ತಿದ ಬೆಳೆಗಳು ಕೈಗೆ ಬಾರದೆ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ, ಆದ್ರೆ ರೈತರ ನೆರವಿಗೆ ಬರಬೇಕಿದ್ದ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಹೌಸ್ ನಲ್ಲಿ ಜಾಲಿಯಾಗಿ ಮನರಂಜನೆಯಲ್ಲಿ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಸುಧಾಕರ್ ಕಿಡಿಕಾರಿದ್ದರು. ಇನ್ನೊಂದೆಡೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ . ಮನರಂಜನಾ ಕಾರ್ಯಕ್ರಮದಲ್ಲಿ ಇಚ್ಛೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಕ್ಷೇತ್ರದಲ್ಲಿ ಸಮಸ್ಯೆಗಳು ಬಹಳಷ್ಟು ಇವೆ ಎಂದು ಟೀಕಿಸಿದ್ದರು.

ಸರ್ವ ಸಂಘಟನೆಗಳ ಒಕ್ಕೂಟ ಕೂಡ ಪ್ರದೀಪ್ ಈಶ್ವರ್​ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು.. ಅವರಿಗೆ ಯಾವುದೇ ರೀತಿಯ ಭತ್ಯೆ ನೀಡಬಾರದೆಂದು ಮನವಿ ಮಾಡಿತ್ತು.

ಇನ್ನಷ್ಟು ಬಿಗ್​ ಬಾಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Tue, 10 October 23

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Weekly horoscope: ಡಿಸೆಂಬರ್ 30 ರಿಂದ ಜನವರಿ 5ರವರೆಗಿನ ವಾರ ಭವಿಷ್ಯ
Weekly horoscope: ಡಿಸೆಂಬರ್ 30 ರಿಂದ ಜನವರಿ 5ರವರೆಗಿನ ವಾರ ಭವಿಷ್ಯ