Karnataka Breaking Kannada News highlights: ಸರಣಿ ಟ್ವೀಟ್‌ ಮಾಡಿ ಹೆಚ್‌ಡಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ

ಆಯೇಷಾ ಬಾನು
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 10, 2023 | 10:29 PM

Breaking News Today highlights: ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು ಅನೇಕ ಕಡೆ ಅವಘಡಗಳು ಸಂಭವಿಸಿವೆ. ರಸ್ತೆಗಳು ಕೆರೆಯಂತಾಗಿವೆ, ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದೆ. ಅಂಡರ್ ಪಾಸ್​ಗಳಲ್ಲಿ ನೀರು ನಿಂತು ವಾಹನಗಳು ಮುಳುಗಿವೆ. ಇಂದು ಕೂಡ ಜಿಟಿ ಜಿಟ ಮಳೆ ಮುಂದುವರೆದಿದ್ದು ಇಡೀ ಬೆಂಗಳೂರು ಕೂಲ್ ಕೂಲ್ ಆಗಿದೆ. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ತಿಳಿಯಲು ಟಿವಿ9 ಡಿಜಿಟಲ್ ಫಾಲೋ ಮಾಡಿ.

Karnataka Breaking Kannada News highlights: ಸರಣಿ ಟ್ವೀಟ್‌ ಮಾಡಿ ಹೆಚ್‌ಡಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ

ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ರಸ್ತೆಗಳು ಮುಳುಗಿ ಕೆರೆಯಂತಾಗಿವೆ. ವಾಹನ ಸವಾರರಿಗೆ ಬೆಂಗಳೂರಿನ ಅಂಡರ್ ಪಾಸ್​ಗಳು ಮೃತ್ಯುಕೂಪದಂತಾಗಿವೆ. ನಿನ್ನೆ ರಾತ್ರಿ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ರಾಜಕಾಲುವೆ ನೀರು ನುಗ್ಗಿ 50 ಮೀಟರ್​ ಉದ್ದದ ರಸ್ತೆ ಜಲಾವೃತಗೊಂಡಿತ್ತು. ಈ ವೇಳೆ ನೀರಿನಲ್ಲಿ ಸಿಲುಕಿದ್ದ ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಶಾಲೆಗಳ ಸಮಯ ಬದಲಾವಣೆ ಸಂಬಂಧ ನಿನ್ನೆ ಮಹತ್ವದ ಸಭೆ ನಡೀತು. ಟ್ರಾಫಿಕ್ ನೆಪ ಇಟ್ಕೊಂಡು ಶಾಲೆಗಳ ಸಮಯ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತವಾಯ್ತು. ಶಾಲಾ ಸಮಯ ಬದಲಾವಣೆ ಬದಲು ಶಾಲೆಗೆ ಮಕ್ಕಳನ್ನು ಬಿಡಲು ಬಿಎಂಟಿಸಿ ಬಸ್ ಬಳಸಬಹುದು. ಶಾಲೆಗಳ ಬಳಿ ಪೋಷಕರನ್ನೇ ಟ್ರಾಫಿಕ್ ವಾರ್ಡನ್​ಗಳಾಗಿ ನೇಮಿಸಿ ಟ್ರಾಫಿಕ್ ಕಂಟ್ರೋಲ್ ಮಾಡಬಹುದು ಎಂಬ ಸಲಹೆಗಳು ಕೇಳಿ ಬಂದಿವೆ. ಹಾಗೂ ಪಡಿತರ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಒಟ್ಟು 3 ಲಕ್ಷದ 80 ಸಾವಿರ ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರದ ಆದೇಶಿಸಿದೆ. ಇದರ ಜೊತೆಗೆ ರಾಜ್ಯದಲ್ಲಾಗುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ತಿಳಿಯಲು ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 10 Oct 2023 10:01 PM (IST)

    Karnataka Breaking News Live: H.D.ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಅಟ್ಯಾಕ್ ಮಾಡಿ ಕೊಲೆಗೆ ಯತ್ನ

    ಹಾಸನ: H.D.ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಅಟ್ಯಾಕ್ ಮಾಡಿ ಕೊಲೆಗೆ ಯತ್ನ ನಡೆಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಗುತ್ತಿಗೆದಾರ ಅಶ್ವತ್ಥ್‌ ಪ್ರಾಣ ಉಳಿಸಿಕೊಂಡಿದ್ದಾರೆ. ಹೌದು, ಸಂಜೆ ಹಾಸನದಿಂದ ರೇವಣ್ಣ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದರು. ಕೆಲಕಾಲ ರೇವಣ್ಣ ಜೊತೆ ಇದ್ದು, ಚನ್ನರಾಯಪಟ್ಟಣ ನಿವಾಸಕ್ಕೆ ವಾಪಸಾಗುತ್ತಿದ್ದರು.  ಮನೆಗೆ ಹೊರಟ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು, ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾರೆ.

  • 10 Oct 2023 09:09 PM (IST)

    Karnataka Breaking News Live: ದಳಪತಿಗಳ ವಿರುದ್ಧ ಕಾಂಗ್ರೆಸ್ ಟ್ವಿಟ್​ ಮೂಲಕ ವಾಗ್ದಾಳಿ

    ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿಯ ಕಾಲ ಬುಡದಲ್ಲಿ ನೈವೇದ್ಯಕ್ಕೆ ಇಟ್ಟು, ನೀವು ಹಾಗೂ ನಿಮ್ಮ ಫ್ಯಾಮಿಲಿ ಬಿಜೆಪಿಯ ಜೀತ ಮಾಡಿಕೊಂಡಿರುವ ಕಾಲ ಶೀಘ್ರದಲ್ಲಿ ಬರಲಿದೆ ಎಂದು ದಳಪತಿಗಳ ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ. ಕುಮಾರಸ್ವಾಮಿ ಅವರೇ, ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ, ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ ಕೆ ಶಿವಕುಮಾರ್ ಅವರು ಮೈತ್ರಿ ಸರ್ಕಾರ ಬೀಳಿಸಿದರು ಎನ್ನುತ್ತಿದ್ದೀರಿ. ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು, ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

  • 10 Oct 2023 08:48 PM (IST)

    Karnataka Breaking News Live: ರಾಜ್ಯದಲ್ಲಿ ಮಾದಕ ವಸ್ತು ನಿಗ್ರಹಕ್ಕೆ ಸೂಕ್ತ ಕ್ರಮ; ಎಡಿಜಿಪಿ ಅಲೋಕ್ ಕುಮಾರ್

    ದಾವಣಗೆರೆ: ಜಾಗತಿಕ ಮಟ್ಟದಲ್ಲಿ ಗಾಂಜಾ ಸೇರಿದಂತೆ ಮಾದಕವಸ್ತು ಪೂರೈಕೆ ಹೆಚ್ಚುತ್ತಿದೆ ಎಂದು ದಾವಣಗೆರೆ ಎಸ್​ಪಿ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ರಾಜ್ಯದಲ್ಲಿ ಮಾದಕ ವಸ್ತು ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ ಪೂರೈಕೆ ಮಾಡುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಶಾಲಾ ಆವರಣದಲ್ಲಿ ಇಂತಹ ಘಟನೆ ನಡೆಯುತ್ತಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ದಾವಣಗೆರೆ ಎಸ್​ಪಿ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

  • 10 Oct 2023 08:17 PM (IST)

    ಧರ್ಮದ ಪ್ರತೀಕ ಶ್ರೀರಾಮ ಚಂದ್ರ, ಅವನೇ ನಮಗೆ ಆದರ್ಶ; ಪೇಜಾವರ ಸ್ವಾಮೀಜಿ

    ಉಡುಪಿ: ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಮಾತನಾಡಿದ ಪೇಜಾವರ ಸ್ವಾಮೀಜಿ ಅವರು ಶಿವಮೊಗ್ಗ ಘಟನೆ ತಿರುಗೇಟು ಕೊಟ್ಟಿದ್ದಾರೆ ‘ ಎಷ್ಟು ಅಂಗಡಿ, ಮನೆಗೆ ಕಲ್ಲು ಬಿತ್ತು?. ಎಷ್ಟು ವಾಹನ- ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಬಿತ್ತು?. ನಾವು ಹಿಂದೂಗಳು ಶಾಂತಿ ಪ್ರೀಯರು. ಧರ್ಮದ ಪ್ರತೀಕ ಶ್ರೀರಾಮ ಚಂದ್ರ, ಅವನೇ ನಮಗೆ ಆದರ್ಶ ಎಂದಿದ್ದಾರೆ. ಈ ದೇಶದ ಕಣ ಕಣವೂ ಪವಿತ್ರ, ಮಾತೆಯರು ಸ್ವರ್ಗಕ್ಕೆ ಮಿಗಿಲು. ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ ,ತಲೆ ಒಡೆಯುವುದಿಲ್ಲ. ಒಳ್ಳೆ ವಿಚಾರದಲ್ಲಿ ನಮ್ಮ ಹೃದಯ ಮನೆ ತರೆದಿರುತ್ತದೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

  • 10 Oct 2023 07:59 PM (IST)

    Karnataka Breaking News Live: ಪಟಾಕಿ ಸಂಗ್ರಹಿಸಿದ್ದ 5 ಗೋದಾಮುಗಳ ಮೇಲೆ ಅಧಿಕಾರಿಗಳ ದಾಳಿ

    ಬೆಂಗಳೂರು ಗ್ರಾಮಾಂತರ: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ 14 ಜನ ಸಜೀವದಹನ ಹಿನ್ನೆಲೆ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಆಡಳಿತ, ಪಟಾಕಿ ಸಂಗ್ರಹಿಸಿದ್ದ 5 ಗೋದಾಮುಗಳ ಮೇಲೆ ಅಧಿಕಾರಿಗಳ ದಾಳಿ ನಡೆಸಿದ್ದು, ಪಟಾಕಿ ಸಂಗ್ರಹಿಸಿದ್ದ 5 ಗೋದಾಮು ಜಪ್ತಿ ಮಾಡಲಾಗಿದೆ. ನೆಲಮಂಗಲ ತಹಶೀಲ್ದಾರ್‌ ಅರುಂಧತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

  • 10 Oct 2023 07:40 PM (IST)

    Karnataka Breaking News Live: 71 ಪೊಲೀಸ್ ಸಬ್ ಇನ್ಸಪೇಕ್ಟರ್ ಗಳ ವರ್ಗಾವಣೆ

    ಬೆಂಗಳೂರು: 71 ಪೊಲೀಸ್ ಸಬ್ ಇನ್ಸ್ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್​ಗಳನ್ನು ಆಡಳಿತಾತ್ಮಕ ಕಾರಣಗಳಿಂದ ನಗರದ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.

  • 10 Oct 2023 07:23 PM (IST)

    Karnataka Breaking News Live: ದಸರಾ ಮಹೋತ್ಸವಕ್ಕೆ ಎರಡು ವಾರಗಳಷ್ಟೇ ಬಾಕಿ; ದಸರಾ ಗಜಪಡೆಯ ತಾಲೀಮು ಮತ್ತಷ್ಟು ಬಿರುಸು

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಜಂಬೂಸವಾರಿ ಮೆರವಣಿಗೆಗೆ ಎರಡು ವಾರಗಳಷ್ಟೇ ಬಾಕಿಯಿದ್ದು, ದಸರಾ ಗಜಪಡೆಯ ತಾಲೀಮು ಮತ್ತಷ್ಟು ಬಿರುಸುಗೊಂಡಿದೆ. ಇಂದು ಸಂಜೆ ಮಹೇಂದ್ರನಿಗೆ ಮರದ ಅಂಬಾರಿ ಕಟ್ಟಿ, ಸುಮಾರು 1000 ಕೆಜಿಯಷ್ಟು ಭಾರ ಹೊರಿಸಿ ತಾಲೀಮು ನಡೆಸಿದ್ದಾರೆ.

  • 10 Oct 2023 07:20 PM (IST)

    Karnataka Breaking News Live: ಯಾರಾದ್ರೂ ಕಾನೂನು ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ; ಮೈಸೂರು ಕಮಿಷನರ್​

    ಮೈಸೂರು: ಕಾನೂನು, ಸುವ್ಯವಸ್ಥೆ ದೃಷ್ಟಿಯಿಂದ ಮಹಿಷ ದಸರಾಗೆ ಅನುಮತಿ ನೀಡಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು. ಇನ್ನು ಸೆ.13ರಂದು 144 ಸೆಕ್ಷನ್‌ ಜಾರಿ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಮುಂದಿನ 2 ದಿನದ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಯಾರಾದ್ರೂ ಕಾನೂನು ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

  • 10 Oct 2023 06:45 PM (IST)

    Karnataka Breaking News Live: ಆಯತಪ್ಪಿ ಕೆರೆಗೆ ಬಿದ್ದು ಕುರಿಗಾಹಿ ಯುವಕ ಸಾವು

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾ.ನೂಕಾಪುರ ಗ್ರಾಮದಲ್ಲಿ ಆಯತಪ್ಪಿ ಕೆರೆಗೆ ಬಿದ್ದು ಕುರಿಗಾಹಿ ಯುವಕ ಕೃಷ್ಣ(29) ಎಂಬಾತ ಸಾವನ್ನಪ್ಪಿದ ಘಟನೆ ನಡೆದಿದೆ. ಕುರಿಗಳಿಗೆ ನೀರು ಕುಡಿಸುವಾಗ ಆಯತಪ್ಪಿ ಕೆರೆ ಬಿದ್ದ ಕೃಷ್ಣ ಮೃತನಾಗಿದ್ದಾನೆ. ಸ್ಥಳಕ್ಕೆ ರಾಣೇಬೆನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಲಾಗಿದೆ.

  • 10 Oct 2023 06:11 PM (IST)

    Karnataka Breaking News Live: ಮಳೆಯಿಂದ ಬೆಳ್ಳಂದೂರು, ಸಜಾಪುರ ಮುಖ್ಯ ರಸ್ತೆ ಜಲಾವೃತ

    ಆನೇಕಲ್: ಮಳೆಯಿಂದ ಬೆಳ್ಳಂದೂರು ಹಾಗೂ ಸಜಾಪುರ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಈ ಹಿನ್ನಲೆ ವಾಹನ ಸವಾರರು ನೀರು ತುಂಬಿದ ರಸ್ತೆಯಲ್ಲಿ ಪರದಾಟ ನಡೆಸುವಂತಾಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿಯಲ್ಲಿ  ನೀರು ತುಂಬಿದೆ. ಪ್ರತಿ ಬಾರಿ ಮಳೆ ಬಂದಾಗಲೂ ನೀರು ತುಂಬಿ ಅವಾಂತರ ಸೃಷ್ಟಿಯಾಗುತ್ತದೆ.

  • 10 Oct 2023 05:32 PM (IST)

    Karnataka Breaking News Live: ಮಹಿಷಾ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಣೆ; ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶ‌

    ಮೈಸೂರು: ಮಹಿಷಾ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಿಸಿ ಮೈಸೂರು ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶಿಸಿದ್ದಾರೆ. ಅಕ್ಟೋಬರ್ 13 ರಂದು ಮಹಿಷಾ ದಸರಾ ಆಚರಣೆ ಸಮಿತಿ ಅವರು ಮಹಿಷಾ ದಸರಾಕ್ಕೆ ಅನುಮತಿ ಕೋರಿದ್ದರು.  ಅದೇ ದಿನ ಮಹಿಷಾ ದಸರಾ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಬಿಜೆಪಿ ಅನುಮತಿ ಕೋರಿತ್ತು. ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಹಿನ್ನೆಲೆ ಎರಡೂ ಕಾರ್ಯಕ್ರಮಗಳ ಅನುಮತಿ ರದ್ದು ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

  • 10 Oct 2023 05:29 PM (IST)

    Karnataka Breaking News Live: ನನ್ನ ಕ್ಷೇತ್ರದ ಜನರಿಗಾಗಿ ನಾನು ಡಿಸಿಎಂ ಕಾಲು ಬೀಳಲೂ ಸಿದ್ದನಿದ್ದೇನೆ; ಶಾಸಕ ಮುನಿರತ್ನ

    ಬೆಂಗಳೂರು: ‘ನನ್ನ ಕ್ಷೇತ್ರದ ಜನರಿಗಾಗಿ ನಾನು ಅವರ ಕಾಲು ಬೀಳಲೂ ಸಿದ್ದನಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದರು. ಪ್ರತಿಭಟನೆ ಮುಗಿದ ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರು,‌ ಸಂಸದರು ಇಬ್ಬರ ಕಾಲು ಹಿಡಿಯಲು ಸಿದ್ದನಿದ್ದೇನೆ ಎಂದರು. ‘ನನ್ನ ಕೊನೆ ಉಸಿರು ಇರುವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ, ನಾನು ಎಲ್ಲಿಗೂ ಹೋಗಲ್ಲ. ಡಿಸಿಎಂ ರಿಂದಲೇ ಅನುದಾನ ಬೇಕಿರುವುದು. ಬದಲಾವಣೆ ಅನುದಾನ ಕೊಡಿಸಬೇಕಿರುವುದು ಅವರೇ, ನಾನು ಸಿಎಂ ಹತ್ತಿರ ಹೋಗಲ್ಲ, ಡಿಸಿಎಂ ಹತ್ತಿರ ಹೋಗುತ್ತೇನೆ. ಅವರ ಕಾಲನ್ನೇ ನಾನು ಹಿಡಿಯುತ್ತೇನೆ. ಕಾಶ್ಮೀರ ಸಮಸ್ಯೆ ಬಗೆ ಹರಿಯುತ್ತದೆ, ಆದರೆ ನನ್ನ ಕ್ಷೇತ್ರದ ಸಮಸ್ಯೆ ಬಗೆ ಹರಿಯಲ್ಲ ಎಂದು ಹೇಳಿದರು.

  • 10 Oct 2023 04:55 PM (IST)

    Karnataka Breaking News Live: ಸಿಎಂ ಮನೆ ಮೇಲೆ ಕಲ್ಲೇಸೆದ ಪ್ರಕರಣ; ಆರೋಪಿ ವಶಕ್ಕೆ

    ಮೈಸೂರು: ನಗರದ ಟಿ.ಕೆ ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ  ಮನೆ ಮೇಲೆ ಕಲ್ಲೇಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರನ್ನು ಬಂಧಿಸಿದ್ದಾರೆ. ಬೆಳಗ್ಗೆ 8 ಗಂಟೆಯಲ್ಲಿ ನಡೆದಿರುವ ಈ ಘಟನೆ ನಡೆದಿದ್ದು, ಕಲ್ಲೆಸದ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಿಟಕಿ ಗಾಜನ್ನು ಸರಿಪಡಿಸಲಾಗಿದೆ.

  • 10 Oct 2023 04:52 PM (IST)

    Karnataka Breaking News Live: ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವ ಶಕ್ತಿ ಸೋಮಣ್ಣಗೆ ಇತ್ತು;ಕೆಎಸ್ ಈಶ್ವರಪ್ಪ

    ಮೈಸೂರು: ವಿ.ಸೋಮಣ್ಣಗೆ ಬಿಜೆಪಿಯಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಕೆಎಸ್ ಈಶ್ವರಪ್ಪ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ‘ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವ ಶಕ್ತಿ ಸೋಮಣ್ಣಗೆ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಬಿಜೆಪಿ ನಾಯಕರು ವಿ.ಸೋಮಣ್ಣರನ್ನು ಕೈ ಬಿಡುವುದಿಲ್ಲ. ಯಾರಿಗೆ, ಯಾವ ಸ್ಥಾನ ನೀಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷರಿಂದಲೇ ಪಕ್ಷ ಬೆಳೆಯುತ್ತದೆ ಎಂಬುವುದು ತಪ್ಪು ಕಲ್ಪನೆ ಎಂದರು.

  • 10 Oct 2023 04:09 PM (IST)

    Karnataka Breaking News Live: 2A ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಲು ನಿರ್ಧಾರ; ಬಸವಜಯ ಮೃತುಂಜಯ ಸ್ವಾಮೀಜಿ 

    ಧಾರವಾಡ: ಪಂಚಮಸಾಲಿ 2ಎ ಮೀಸಲಾತಿ ಅನುಷ್ಠಾನ ವಿಚಾರ ‘ ಧಾರವಾಡದಲ್ಲಿ ಕೂಡಲಸಂಗಮ ಪೀಠದ ಬಸವಜಯ ಮೃತುಂಜಯ ಸ್ವಾಮೀಜಿ ಮಾತನಾಡಿ ‘ ಲಿಂಗಾಯತ ಪಂಚಮಸಾಲಿ ಸಮಾಜ ದಾಸೋಹ ಸಮಾಜ, ಮೀಸಲಾತಿ ಸಿಗಬೇಕು  ಎಂದು 3 ವರ್ಷದಿಂದ ಹೋರಾಡುತ್ತಿದ್ದೇವೆ. ನಮ್ಮದು ನಿರಂತರ ಹೋರಾಟ, ಹಿಂದಿನ ಸರ್ಕಾರ ಮೀಸಲಾತಿ ಕೊಡಲು ವಿಳಂಬ ಮಾಡಿತು. ಆದ್ರೆ, ಹೋರಾಟ ಫ್ರೀಡಂ ಪಾರ್ಕ್ ನಲ್ಲಿ ನಡೆಯಿತು. 2D ಎಂದು ಆಗಿನ ಸರ್ಕಾರ ಘೋಷಣೆ ಮಾಡಿತ್ತು. ಅದಾದ ಮೇಲೆ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಅದು ಅಲ್ಲಿಯೇ ನಿಂತಿದೆ. ಇದೀಗ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

  • 10 Oct 2023 03:34 PM (IST)

    Karnataka Breaking News Live: ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ; ಸಿಎಂ ಗರಂ

    ಬೆಂಗಳೂರು: ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್​ ಗರಂ ಆಗಿದ್ದಾರೆ. ಹೌದು, ‘ಪಾಪ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಆಗ್ತಿನಿ ಎಂದು ಅಂದುಕೊಂಡಿದ್ದರು, ಈಗ ಅದು ಆಗಲಿಲ್ವಲ್ಲ, ಅದಕ್ಕೆ ಏನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ?, ಕುಮಾರಸ್ವಾಮಿ ಮಾತಿನಲ್ಲಿ ಸತ್ಯ ಇದೆಯಾ?, ನಾವು ಅವರ ಹೇಳಿಕೆಗೆ ಮಾತಾಡೋದಿಲ್ಲ ಎಂದಿದ್ದಾರೆ.

  • 10 Oct 2023 03:19 PM (IST)

    Karnataka Breaking News Live: ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಹೆಚ್​ಡಿಕೆ ಹೇಳಿದ್ದಾರಾ-ಸಚಿವ ಜಮೀರ್

    ಬೆಂಗಳೂರು: ಸರ್ಕಾರ ಪತನ ಗ್ಯಾರಂಟಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ‘ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಹೇಳಿದ್ದಾರಾ?, ಯಡಿಯೂರಪ್ಪ , ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು, ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೇಗೆ ಸರ್ಕಾರ ಬೀಳಲು ಸಾಧ್ಯ, ಎನ್ನುವ ಮೂಲಕ ಹೆಚ್ಡಿಕೆ ಹೇಳಿಕೆಗೆ ಸಚಿವ ಜಮೀರ್ ತಿರುಗೇಟು ನೀಡಿದ್ದಾರೆ. ‘ಬಿಜೆಪಿ 104 ಶಾಸಕರು ಇದ್ದುಕೊಂಡು ಅಪರೇಷನ್ ಕಮಲ ಮಾಡಿ 4 ವರ್ಷ ಸರ್ಕಾರ ನಡೆಸಿದ್ರು, ನಾವು 137 + 3 ಒಟ್ಟು 140 ಇದ್ದೇವೆ. ಸರ್ಕಾರ ಹೇಗೆ ಬಿಳುತ್ತೆ, ಕುಮಾರಸ್ವಾಮಿ ಅವರದ್ದು ರಾತ್ರಿ ಕನಸು ಹಗಲು ಕಾಣ್ತಿದ್ದಾರೆ. ಸರ್ಕಾರ ಹೇಗೆ ಪತನಾವಾಗುತ್ತೆ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದರು.

  • 10 Oct 2023 03:15 PM (IST)

    Karnataka Breaking News Live: ಬೇರೆ ಪಕ್ಷದ ರಾಜಕೀಯ ಹೇಳಿಕೆ ಬಗ್ಗೆ ಹೆಚ್ಚು ಗಮನ ಕೊಡಲ್ಲ;ಕೃಷ್ಣ ಭೈರೇಗೌಡ

    ಚಿತ್ರದುರ್ಗ: 2024ಕ್ಕೆ ಡಿಕೆಶಿ ತಿಹಾರ್ ಜೈಲಿಗೆ‌ ಹೋಗ್ತಾರೆ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರ ‘ ಬೇರೆ ಪಕ್ಷದ ರಾಜಕೀಯ ಹೇಳಿಕೆ ಬಗ್ಗೆ ಹೆಚ್ಚು ಗಮನ ಕೊಡಲ್ಲ, ಹೆಚ್ ಡಿಕೆ ಹೇಳಿಕೆಗೆ ಡಿಕೆಶಿ ಈಗಾಗಲೇ ಉತ್ತರಿಸಿದ್ದಾರೆ. ಬಿಜೆಪಿ‌ ಜೊತೆ ಜೆಡಿಎಸ್ ಕೈಜೋಡಿಸಿದೆ. ಡಿಕೆಶಿ ಅವರನ್ನು ಜೈಲಿಗೆ ಕಳಿಸುವ ಷಡ್ಯಂತ್ರವಿದೆ ಎಂಬುದು ಹೆಚ್ ಡಿಕೆ ಮಾತಲ್ಲಿ‌ ಹೇಳಿದ್ದಾರೆ. ನಾವು ಎಲ್ಲವನ್ನೂ ಎದುರಿಸಲು ಸಜ್ಜಾಗಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿದ್ದು, ಜನಪರ ಆಡಳಿತ‌ ನೀಡ್ತಿದ್ದೇವೆ ಎನ್ನುವ ಮೂಲಕ ಜೆಡಿಎಸ್, ಬಿಜೆಪಿ ನಾಯಕರಿಗೆ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ.

  • 10 Oct 2023 02:42 PM (IST)

    Karnataka Breaking News Live: ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಗಣೇಶ ಮೆರವಣಿಗೆ ವೇಳೆ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು ‘ಮದುವೆ, ರಾಜಕೀಯ ಕಾರ್ಯಕ್ರಮದಲ್ಲೂ ಪಟಾಕಿ ಹೊಡೆಯುವುದು ನಿಷೇಧವಾಗಿದೆ. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದ್ದು, ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದೆ. ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

  • 10 Oct 2023 02:19 PM (IST)

    Karnataka Breaking News Live: ಹಸಿರು ಪಟಾಕಿ ಮಾರಾಟ ಮಾಡುತ್ತಿರುವವ ವಿರುದ್ಧ ಕ್ರಮಕ್ಕೆ‌ ಸೂಚನೆ- ಸಿಎಂ

    ಬೆಂಗಳೂರು: ಗ್ರೀನ್ ಕ್ರ್ಯಾಕರ್ಸ್ ಮಾತ್ರ ಮಾರಾಟಕ್ಕೆ ಸುಪ್ರೀಂ ಹೇಳಿಕೆ ನೀಡಿದ್ದು, ‘ಹಸಿರು ಪಟಾಕಿ ಮಾರಾಟ ಮಾಡುತ್ತಿರುವವ ವಿರುದ್ಧ ಕ್ರಮಕ್ಕೆ‌ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಕಂಡೀಷನ್ ನ ಅನುರಿಸದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ, ಇನ್ಮುಂದೆ ಕಠಿಣವಾಗಿ ಸುಪ್ರೀಂ ಆದೇಶವನ್ನ ಪಾಲಿಸಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

  • 10 Oct 2023 01:56 PM (IST)

    Karnataka Breaking News Live: ಅಕ್ಟೋಬರ್ 15 ರಿಂದ 24 ರವರೆಗೆ ದಸರಾ ಫಲಪುಷ್ಪ ಪ್ರದರ್ಶನ

    ಅಕ್ಟೋಬರ್ 15 ರಿಂದ 24ರವರೆಗೆ ಮೈಸೂರಿನ ಕುಪ್ಪಣ್ಣ ಪಾರ್ಕ್​ನಲ್ಲಿ ಫಲಪುಷ್ಪ ಪ್ರದರ್ಶನ ಅನಾವರಣಗೊಳ್ಳಲಿದೆ. ಈ ಬಾರಿ 2 ಲಕ್ಷ ಗುಲಾಬಿ ಹೂವುಗಳಿಂದ ಚಂದ್ರಯಾನದ ಪರಿಕಲ್ಪನೆಯ ಕಲಾಕೃತಿ ನಿರ್ಮಾಣ ಮಾಡಲಾಗುತ್ತೆ ಎಂದು ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಗಾಯತ್ರಿ ತಿಳಿಸಿದ್ದಾರೆ. ಇದರ ಜೊತೆಗೆ ಚಾಮುಂಡೇಶ್ವರಿ ದೇವಿ ಹಾಗು ದೇವಸ್ಥಾನದ ಗೋಪುರ, ಸುವರ್ಣ ಕರ್ನಾಟಕ – ಕರ್ನಾಟಕದ ಶ್ರೀಮಂತ ಪರಂಪರೆ, ಕ್ರೀಡೆಗಳ ಥೀಮ್, ಕ್ರಿಕೆಟ್ ಹೂವಿನ ಕಲಾಕೃತಿ, ಅಂಬಾರಿ ಹೂವಿನ ಕಲಾಕೃತಿ, ಕಾಫಿ ಕಪ್ ಹೂವಿನ ಕಲಾಕೃತಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು.

  • 10 Oct 2023 01:20 PM (IST)

    Karnataka Breaking News Live: 5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್​ಶೋ

    ಪಂಜಿನ ಕವಾಯತ ಮೈದಾನದಲ್ಲಿ ಅಕ್ಟೋಬರ್​ 22 & 23ರಂದು ದಸರಾ ಏರ್​ಶೋ ನಡೆಯಲಿದೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. 5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್​ಶೋ ನಡೆಯುತ್ತಿದೆ. ಅ.22ರಂದು ಏರ್​ಶೋ ರಿಹರ್ಸಲ್, 23ರಂದು ಮುಖ್ಯ ಏರ್​ಶೋ ನಡೆಯಲಿದೆ. ಅ.23ರ ಸಂಜೆ 4 ಗಂಟೆಗೆ 45 ನಿಮಿಷ ಏರ್​ಶೋ ನಡೆಯಲಿದೆ ಎಂದರು.

  • 10 Oct 2023 01:13 PM (IST)

    Karnataka Breaking News Live: ಬಿಗ್​ಬಾಸ್ ಸ್ಪರ್ಧಾಳುಗಳಿಗೆ ಮೋಟಿವೇಟ್ ಮಾಡಿ ಹೊರ ಬಂದ ಪ್ರದೀಪ್ ಈಶ್ವರ್

    ಅತಿಥಿಯಾಗಿ ಬಿಗ್‌ಬಾಸ್ ಶೋಗೆ 3 ತಾಸು ಮಾತ್ರ ಹೋಗಿದ್ದೆ. ಬಿಗ್​ಬಾಸ್ ಸ್ಪರ್ಧಾಳುಗಳಿಗೆ ಮೋಟಿವೇಷನ್ ಮಾಡಲು ಕರೆದಿದ್ದರು. ಹೀಗಾಗಿ ಆಯೋಜಕರ ಆಹ್ವಾನದ ಮೇರೆಗೆ ಹೋಗಿ ಬಂದಿದ್ದೇನೆ ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದಾರೆ.

  • 10 Oct 2023 12:55 PM (IST)

    Karnataka Breaking News Live: ವೈದ್ಯರ ಎಡವಟ್ಟಿನಿಂದ ಹತ್ತು ವರ್ಷದ ಬಾಲಕ ಸಾವು?

    ವೈದ್ಯರ ಎಡವಟ್ಟಿನಿಂದ ಹತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ನಿವಾಸಿ ಪ್ರೀತಮ್ ನಾಯ್ಕ್ (10) ಮೃತ ದುರ್ದೈವಿ. ಜ್ವರ ಎಂದು ಕೋಣನಕುಂಟೆ ಬಳಿಯ ರಾಜನಂದಿನಿ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಒಂದು ಇಂಜೆಕ್ಷನ್‌ ನೀಡಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಇಂಜೆಕ್ಷನ್‌ ಕೊಟ್ಟ ಜಾಗದಲ್ಲಿ ನೋವು ಉಂಟಾಗಿ ಬಳಿಕ ಮರುದಿನವೇ ಮತ್ತೆ ಅದೇ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮತ್ತೆ ಕೆಲ ಟಾನಿಕ್ ಮತ್ತು ಮೆಡಿಸಿನ್ ನೀಡಿ ರಾಜನಂದಿನಿ ಆಸ್ಪತ್ರೆ ವೈದ್ಯರು ಬಾಲಕನನ್ನು ಕಳಿಸಿದ್ರು. ನೋವು ಕಡಿಮೆ ಆಗದೆ ಕಾಲು ಊತ ಬಂದಿದೆ. ಈ ರೀತಿ ಬಾಲಕನ ಸಾವಾಗಿದೆ.

  • 10 Oct 2023 12:23 PM (IST)

    Karnataka Breaking News Live: ಜೈನ ಮಂದಿರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಗಳ ಬಂಧನ

    ಬೆಂಗಳೂರಿನ ಅಶೋಕ್​​ನಗರದ ಜೈನ್ ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. 14 ಕೆಜಿ ದೇವರ ಬೆಳ್ಳಿಯ ಆಭರಣ, ದೇವಾಲಯದ ವಸ್ತುಗಳ ಕಳ್ಳತನ ಮಾಡಲಾಗಿತ್ತು. 6 ಜನ ಆರೋಪಿಗಳ ಪೈಕಿ ಓರ್ವ ದೇವಾಲಯದ ಟೈಲ್ಸ್ ಕೆಲಸ ಮಾಡಿದ್ದ. ಆರು ಆರೋಪಿಗಳನ್ನ ಅಶೋಕ್​​ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

  • 10 Oct 2023 11:55 AM (IST)

    Karnataka Breaking News Live: ತರಗತಿ ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟಿಸಿದ ವಿದ್ಯಾರ್ಥಿಗಳು

    ಮಡಿಕೇರಿಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊಡಗು ವಿಶ್ವವಿದ್ಯಾನಿಲಯ ವಿರುದ್ಧ, ಫೀಲ್ಡ್ ಮಾರ್ಷಲ್​​ ಕೆ.ಎಂ.ಕರಿಯಪ್ಪ ಕಾಲೇಜು ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 1500 ವಿದ್ಯಾರ್ಥಿಗಳಿಗೆ ಕೇವಲ 43 ಬೋಧಕ ಸಿಬ್ಬಂದಿ ಇದ್ದಾರೆ. ಹೆಚ್ಚಿನ ಬೋಧಕ ಸಿಬ್ಬಂದಿ ಇಲ್ಲದೆ ಅಭ್ಯಾಸ ಕುಂಟಿತವಾಗುತ್ತಿದೆ. ಮೊದಲ ಸೆಮಿಸ್ಟರ್ ಪರೀಕ್ಷೆ ಸಮೀಪಿಸಿದರೂ ತರಗತಿ ನಡೆದಿಲ್ಲ. ಕೊಡಗು ವಿವಿ ಅವ್ಯವಸ್ಥೆ ಆಗರವಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

  • 10 Oct 2023 11:47 AM (IST)

    Karnataka Breaking News Live: ಅಧಿಕಾರಿಗಳ ಜೊತೆ ಸಾರಿಗೆ ಬಸ್​ನಲ್ಲಿ ಜನತಾ ದರ್ಶನಕ್ಕೆ ಹೊರಟ ಬಾಗಲಕೋಟೆ DC

    ಜನತಾದರ್ಶನ ಕಾರ್ಯಕ್ರಮ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣ ಮಾಡಿದರು. ಶಕ್ತಿ ಯೋಜನೆಯಡಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಗಳು ಉಚಿತ ಪ್ರಯಾಣ ಮಾಡಿದರು.

  • 10 Oct 2023 11:45 AM (IST)

    Karnataka Breaking News Live: ಬಳ್ಳಾರಿಯಲ್ಲಿ ನೇಣು ಬಿಗಿದುಕೊಂಡು ಡಿಎಆರ್​ ಕಾನ್ಸ್​ಟೇಬಲ್ ಆತ್ಮಹತ್ಯೆ

    ಬಳ್ಳಾರಿಯಲ್ಲಿ ನೇಣು ಬಿಗಿದುಕೊಂಡು ಡಿಎಆರ್​ ಕಾನ್ಸ್​ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕಾಶ್ ನಾಯ್ಕ್(25) ಆತ್ಮಹತ್ಯೆ ಮಾಡಿಕೊಂಡ ಡಿಎಆರ್ ಕಾನ್ಸ್​ಟೇಬಲ್. ಇವರು ಕಳೆದೊಂದು ವರ್ಷದ ಹಿಂದೆ‌ಯಷ್ಟೇ ಇಲಾಖೆಗೆ ಸೇರಿದ್ದರು.

  • 10 Oct 2023 11:15 AM (IST)

    Karnataka Breaking News Live: ಯುವ ದಸರೆಯ ಲೋಗೋ ಅನಾವರಣ

    ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರೆಯ ಲೋಗೋ ಅನಾವರಣ ಮಾಡಲಾಯಿತು. ಅ 18, 19, 20 ಹಾಗೂ 21 ರಂದು ಯುವ ದಸರಾ ನಡೆಯಲಿದೆ. ಈ ಬಾರಿ ಬರ ಹಿನ್ನೆಲೆ ಪ್ರಾಯೋಜಕತ್ವದಲ್ಲಿ ಯುವ ದಸರಾ ನಡೆಯಲಿದೆ. ಕಲಾವಿದರ ಪಟ್ಟಿ ಇನ್ನು ಅಂತಿಮಗೊಂಡಿಲ್ಲ. ಪ್ರತಿಬಾರಿ ಬಾಲಿವುಡ್ ಗಾಯಕರು, ಕಲಾವಿದರು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ಬಾರಿ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

  • 10 Oct 2023 10:30 AM (IST)

    Karnataka Breaking News Live: ಬೈಯ್ಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ವರೆಗೆ ನಿನ್ನೆ ಒಂದೇ ದಿನ 61,179 ಪ್ರಯಾಣಿಕರ ಸಂಚಾರ

    ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ವಿಸ್ತೃತ ಮಾರ್ಗದಲ್ಲಿ ನಿನ್ನೆಯಿಂದ ನಮ್ಮ ಮೆಟ್ರೋ ಸಂಚಾರ ನಡೆಸುತ್ತಿದ್ದು ನಿನ್ನೆ ಒಂದೇ ಮಾರ್ಗದಲ್ಲಿ ಸಾವಿರಾರು ಜನರು ಸಂಚಾರ ಮಾಡಿದ್ದಾರೆ. ಬೈಯ್ಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ವರೆಗೆ ನಿನ್ನೆ ಒಂದೇ ದಿನ 61,179 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ.

  • 10 Oct 2023 10:17 AM (IST)

    Karnataka Breaking News Live: ಕಾಂಗ್ರೆಸ್ ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ -ಹೆಚ್​ಡಿ ಕುಮಾರಸ್ವಾಮಿ

    ಸರ್ಕಾರ ಈಗಾಗಲೇ ಅರೆಬರೆ 5 ಗ್ಯಾರಂಟಿ ನೀಡಿ ಕೈ ತೊಳೆದುಕೊಂಡಿದೆ. ಶೀಘ್ರವೇ 6ನೇ ಗ್ಯಾರಂಟಿ ಕತ್ತಲೆಭಾಗ್ಯ ಕೊಡಲು ಸನ್ನಾಹವನ್ನೂ ನಡೆಸಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ. ಡಿಸೆಂಬರ್ ವೇಳೆಗೆ ಕರ್ನಾಟಕ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ. ಕಾವೇರಿ ನದಿ ನೀರು ಬಗ್ಗೆ ಕಾಂಗ್ರೆಸ್ ಸರ್ಕಾರ ಕಳ್ಳಾಟ ಆಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • 10 Oct 2023 09:47 AM (IST)

    Karnataka Breaking News Live: ಗೃಹಲಕ್ಷ್ಮೀ ಯೋಜನೆ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮೀ ಯೋಜನೆ ಗೊಂದಲದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಭಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲ ಎಂದು ಕೆಲವೆಡೆ ಅಪಸ್ವರ ಕೇಳಿಬಂದಿತ್ತು. ಈ ಬಗ್ಗೆ ಲಕ್ಷ್ಮೀ ಹೆಬ್ಭಾಳ್ಕರ್ ಮಾಧ್ಯಮ ಪ್ರಕಟಣೆ‌ ಹೊರಡಿಸಿ ಗೊಂದಲಗಳಿಗೆ ತೆರೆಎಳೆದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಯೋಜನೆಗೆ 1.08 ಕೋಟಿ ಅರ್ಜಿ ಸಲ್ಲಿಕೆಯಾಗಿತ್ತು. 1.08 ಕೋಟಿ ಅರ್ಜಿದಾರರಿಗೆ 2,169 ಕೋಟಿ ಹಣ ಬಿಡುಗಡೆಯಾಗಿದೆ. 1.8 ಕೋಟಿ ಅರ್ಜಿದಾರರಲ್ಲಿ 93 ಲಕ್ಷ ಫಲಾನುಭವಿಗಳಿಗೆ ಹಣ ಜಮೆ ಆಗಿದೆ. 5.5 ಲಕ್ಷ ಅರ್ಜಿದಾರರಿಗೆ ಡಿಬಿಟಿ ಮೂಲಕ‌ ಹಣ ವರ್ಗಾವಣೆ ಚಾಲ್ತಿಯಲ್ಲಿದೆ. ಈವರೆಗೆ 9‌.44 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಜಮೆ‌ಯಾಗಿಲ್ಲ. 3082 ಅರ್ಜಿದಾರರು ಮರಣ ಹೊಂದಿದ್ದು ಅನರ್ಹಗೊಳಿಸಲಾಗಿದೆ. 1 ಲಕ್ಷದ 59 ಸಾವಿರ ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. 5 ಲಕ್ಷ 96 ಸಾವಿರ ಅರ್ಜಿದಾರರ ಬ್ಯಾಂಕ್ ಆಧಾರ್ ಜೋಡಣೆಯಾಗಿಲ್ಲ. 1 ಲಕ್ಷದ 75 ಅರ್ಜಿದಾರರ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ ಇದೆ ಎಂದು ಮಾಹಿತಿ ನೀಡಿದ್ದಾರೆ.

  • 10 Oct 2023 09:12 AM (IST)

    Karnataka Breaking News Live: ಕಬಿನಿ ಜಲಾಶಯದಲ್ಲಿ ಮತ್ತಷ್ಟು ಕುಸಿದ ಒಳಹರಿವಿನ ಪ್ರಮಾಣ

    ಕಬಿನಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಮತ್ತಷ್ಟು ಕುಸಿದಿದೆ. 1,008 ಕ್ಯೂಸೆಕ್ ಒಳಹರಿವು, 1 ಸಾವಿರ ಕ್ಯೂಸೆಕ್ ಹೊರಹರಿವು ಇದೆ. ನಿನ್ನೆ ಜಲಾಶಯಕ್ಕೆ 1,261 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಸದ್ಯ ನೀರಿನ ಮಟ್ಟ 76.35 ಅಡಿ ಇದೆ. ಜಲಾಶಯ 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ.ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಇದೆ.

  • 10 Oct 2023 09:10 AM (IST)

    Karnataka Breaking News Live: ಬರಿಗಾಲಲ್ಲಿ ಬೆಟ್ಟ ಹತ್ತಿ, ಮಹಿಷ ದಸರಾ ಕೈ ಬಿಡಿ ಎಂದ ಚಾಮುಂಡೇಶ್ವರಿ ಭಕ್ತರು

    ಮೈಸೂರು: ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ಮಹಿಷ ದಸರಾ ಕೈ ಬಿಡಿ ಎಂದು ಚಾಮುಂಡೇಶ್ವರಿ ಭಕ್ತರು ಮನವಿ ಮಾಡಿದ್ದಾರೆ. ಬರಿಗಾಲಲ್ಲಿ ಬೆಟ್ಟ ಹತ್ತಿ ದೇವರಲ್ಲಿ ಪ್ರಾರ್ಥನೆ ಮಾಡಿ ಮಹಿಷ ದಸರಾ ಮಾಡುವವರಿಗೆ ಒಳ್ಳೆಯ ಬುದ್ದಿಕೊಡಲಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸು ಎಂದು ಭಕ್ತರು ಪ್ರಾರ್ಥನೆ ಮಾಡಿದ್ದಾರೆ.

  • 10 Oct 2023 09:06 AM (IST)

    Karnataka Breaking News Live: ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಸೌಂಡ್​ಗೆ ಯುವಕ ಬಲಿ?

    ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ನಡೆದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಸೌಂಡ್​ಗೆ ಡ್ಯಾನ್ಸ್ ಮಾಡ್ತಿದ್ದಾಗ ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಸುದೀಪ್ ಸಜ್ಜನ್(30) ಮೃತ ದುರ್ದೈವಿ. ಪ್ರಶಾಂತನಗರದ ಯುವಕರು ಆಯೋಜಿಸಿದ್ದ ಡಿಜೆ ಮೆರವಣಿಗೆ ಸಾಗುತ್ತಿದ್ದ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಸುದೀಪ್ ಮೃತ ಪಟ್ಟಿದ್ದಾನೆ. ಘಟನೆಯಿಂದ ಯುವಕರು ಸ್ವಯಂಪ್ರೇರಿತವಾಗಿ ಅರ್ಧಕ್ಕೆ ಡಿಜೆ ನಿಲ್ಲಿಸಿದ್ದಾರೆ. ಸುದೀಪ್ ಸಜ್ಜನ್ ಮೃತದೇಹ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

  • 10 Oct 2023 08:50 AM (IST)

    Karnataka Breaking News Live: ಅರಮನೆ ರಸ್ತೆಯ ಲೀ ಮೆರಿಡಿಯನ್ ಅಂಡರ್​ಪಾಸ್​ ಜಲಾವೃತ

    ಬೆಂಗಳೂರಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಅರಮನೆ ರಸ್ತೆಯ ಲೀ ಮೆರಿಡಿಯನ್ ಅಂಡರ್​ಪಾಸ್​ ಜಲಾವೃತಗೊಂಡಿದೆ. ಅಂಡರ್​ಪಾಸ್ ಬಳಿ ವಾಹನ ಓಡಾಡದಂತೆ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿದೆ. ಇತ್ತೀಚಿಗಷ್ಟೇ ಲಕ್ಷಾಂತರ ವೆಚ್ಚದಲ್ಲಿ ಅಂಡರ್​ಪಾಸ್ ನಿರ್ಮಿಸಲಾಗಿತ್ತು. ನಿನ್ನೆ ಸಂಜೆ ಸುರಿದ ಮಳೆಯಿಂದ ನೀರು ನುಗ್ಗಿ ಅವಾಂತರವಾಗಿದೆ. ಬಿಬಿಎಂಪಿ ಕಳಪೆ ಕಾಮಗಾರಿ ಮತ್ತೊಮ್ಮೆ ಬಟಾಬಯಲಾಗಿದೆ.

  • 10 Oct 2023 08:48 AM (IST)

    Karnataka Breaking News Live: ಕೋಲಾರದ ಹಿರಿಯ ಪತ್ರಕರ್ತ ಕೆ.ಪ್ರಹಲ್ಲಾದ ರಾವ್ ನಿಧನ

    ಕೋಲಾರ ಪತ್ರಿಕೆ ಸಂಪಾದಕ, ಹಿರಿಯ ಪತ್ರಕರ್ತ ಕೆ.ಪ್ರಹಲ್ಲಾದ ರಾವ್(81) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮಧ್ಯರಾತ್ರಿ ಸುಮಾರಿಗೆ ಕೋಲಾರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1975 ರಲ್ಲಿ ಕೋಲಾರ ಪತ್ರಿಕೆ ಸ್ಥಳೀಯ ಪತ್ರಿಕೆ ಆರಂಭಿಸಿದ್ದ ಪ್ರಹಲ್ಲಾದರಾವ್, ನಿರಂತರ ಪತ್ರಿಕಾ ವೃತ್ತಿಯನ್ನೆ ಉಸಿರಾಗಿಸಿಕೊಂಡಿದ್ದರು. ಕೋಲಾರ ಪತ್ರಿಕೆ ರಾಯರು ಎಂದೇ ಖ್ಯಾತಿ ಪಡೆದಿದ್ದರು.

  • 10 Oct 2023 08:46 AM (IST)

    Karnataka Breaking News Live: ಏರ್​ಪೋರ್ಟ್​ ರಸ್ತೆಯ ಹೆಣ್ಣೂರು ಬಂಡೆ ಬಳಿ ಕೆರೆಯಂತಾದ ರಸ್ತೆ

    ರಾತ್ರಿ ಸುರಿದ ಮಳೆಯಿಂದ ಬೆಂಗಳೂರಿನ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಏರ್​ಪೋರ್ಟ್​ ರಸ್ತೆಯ ಹೆಣ್ಣೂರು ಬಂಡೆ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಕೆರೆಯಂತಾಗಿದೆ. ಈ ಹಿನ್ನೆಲೆ ಸಂಚಾರಕ್ಕೆ ತೊಡಕು ಉಂಟಾಗಿದೆ. ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಾಧ್ಯತೆ.

  • 10 Oct 2023 08:44 AM (IST)

    Karnataka Breaking News Live: ಮೈಸೂರಿನಲ್ಲಿ ಕಾಡಾನೆಗಳ ದಾಳಿಗೆ ಕಬ್ಬು ಬೆಳೆ ನಾಶ

    ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೊಸವೀಡು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ರೈತ ಮಹೇಶ್ ಎಂಬುವವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶವಾಗಿದೆ. ಹಗಲು ರಾತ್ರಿ ಎನ್ನದೆ ರೈತರು ಬೆಳೆದ ಫಸಲಿಗೆ ಆನೆಗಳು ಲಗ್ಗೆ ಇಟ್ಟಿವೆ. ಜಮೀನಿನ ಸುತ್ತ ಅಳವಡಿಸಲಾಗಿದ್ದ ತಂತಿ ಬೇಲಿ ಕಿತ್ತು ಆನೆಗಳು ನುಗ್ಗುತ್ತಿವೆ.

  • 10 Oct 2023 08:04 AM (IST)

    Karnataka Breaking News Live: ರಸ್ತೆಗೆ 10 ರೂ. ನೋಟು ಬಿಸಾಡಿ 1 ಲಕ್ಷ ಹಣ ಎಗರಿಸಿದ ದುಷ್ಕರ್ಮಿ

    ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ರಸ್ತೆಗೆ 10 ರೂ. ನೋಟು ಬಿಸಾಡಿ 1 ಲಕ್ಷ ಹಣ ಎಗರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಅವರು ಬ್ಯಾಂಕ್​ನಿಂದ ಹಣ ಡ್ರಾಮಾಡಿಕೊಂಡು ಬರುತ್ತಿದ್ದ ವೇಳೆ ರಸ್ತೆಗೆ 10 ರೂ. ನೋಟು ಬಿಸಾಡಿ ಹಣ ಬಿದ್ದಿದ್ದೆ ಎಂದು ದುಷ್ಕರ್ಮಿ ಹೇಳಿದ್ದಾನೆ. ಆಗ 1 ಲಕ್ಷ ಹಣವಿದ್ದ ಕವರ್​ ಬೈಕ್ ಬಳಿ ಬಿಟ್ಟು 10 ರೂ. ಎತ್ತಿಕೊಳ್ಳಲು ಬಗ್ಗಿದ್ದಾರೆ. ಈ ವೇಳೆ ದುಷ್ಕರ್ಮಿ ಹಣ ಎಗರಿಸಿ ಪರಾರಿಯಾಗಿದ್ದಾನೆ.

  • 10 Oct 2023 08:02 AM (IST)

    Karnataka Breaking News Live: ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್

    ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್​ ಜಾಮ್​ ಆಗಿದ್ದು ಸುಮಾರು 4-5 ಕಿಲೋ ಮೀಟರ್​ವರೆಗೆ ವಾಹನಗಳು ನಿಂತಿವೆ.

  • Published On - Oct 10,2023 8:01 AM

    Follow us
    ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
    ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
    ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
    ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
    ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
    ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
    ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
    ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
    ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
    ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
    ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
    ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
    ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
    ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
    ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
    ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
    ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
    ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
    ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
    ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು