ಪುಸ್ತಕ, ಲೇಖನ ಬರೆಯುವ ಉದ್ದೇಶ ಬಹಿರಂಗಪಡಿಸಿದ ಸುಧಾ ಮೂರ್ತಿ ​

Sudha Murthy: ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ರಿವಿಲ್​ ಮಾಡಿದ್ದಾರೆ. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪುಸ್ತಕ, ಲೇಖನ ಬರೆಯುವ ಉದ್ದೇಶ ಬಹಿರಂಗಪಡಿಸಿದ ಸುಧಾ ಮೂರ್ತಿ ​
ಸುಧಾ ಮೂರ್ತಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Oct 10, 2023 | 8:44 AM

ಬೆಳಗಾವಿ ಅ.10: ಇನ್ಫೋಸಿಸ್ (Infosys) ಫೌಂಡೇಶನ್‌ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ (Sudha Murthy) ಅವರು ಬೆಳಗಾವಿಯ (Belagavi) ಸಪ್ನ ಬುಕ್ ಹೌಸ್‌ನಲ್ಲಿ ಭಾನುವಾರ ಬೆಳಗಾವಿ ಬುಕ್ ಕ್ಲಬ್ ಸದಸ್ಯರೊಂದಿಗೆ ಸಂವಾದ ನಡೆಸಿದರು. ಸುಧಾ ಮೂರ್ತಿಯವರು ತಾವು ಪುಸ್ತಕ ಮತ್ತು ಲೇಖನಗಳನ್ನು ಬರೆಯಲು ಆರಂಭಿಸಿದ್ದು ಹೇಗೆ, ಹಿಂದಿನ ಕಾರಣವೇನು ಎಂಬುವುದರ ಬಗ್ಗೆ ತಿಳಿಸಿದರು. ಅಲ್ಲದೆ ಬರೆಯಲು ಪ್ರಾರಂಭಿಸಿದ್ದಾಗಿನಿಂದ ತಮಗೆ ಆದ ಅನುಭವಗಳನ್ನು ಸದಸ್ಯರೊಂದಿಗೆ ಹಂಚಿಕೊಂಡರು.

“ತಮ್ಮ ಜೀವನದಲ್ಲಿ ಆದ ಧನಾತ್ಮಕ ಅನುಭವಗಳು ಮತ್ತು ತಮ್ಮ ಕೆಲಸಗಳಿಗೆ ಧನಾತ್ಮಕ ಪ್ರತಿಕ್ರಿಯೆ ಬರಲು ಪ್ರಾರಂಭವಾದವು. ಇದರಿಂದ ಪ್ರೇರಣೆಗೊಂಡು ನಿಯಮಿತವಾಗಿ ಬರೆಯಲು ಆರಂಭಿಸಿದೆ” ಎಂದು ಲೇಖಕಿ ಸುಧಾ ಮೂರ್ತಿಯವರು ತಿಳಿಸಿದರು.

ಬೆಳಗಾವಿಯ ಬುಕ್ ಕ್ಲಬ್​​ ಜನರಲ್ಲಿ ಸಾಹಿತ್ಯದ ಪ್ರೀತಿಯನ್ನು ಬೆಳೆಸಲು ಮತ್ತು ಪುಸ್ತಕ ಉತ್ಸಾಹಿಗಳಿಗೆ ಉತ್ತಮ ವೇದಿಕೆಯಾಗಿದೆ. ಬುಕ್ ಕ್ಲಬ್​​ ಪ್ರತಿ ಭಾನುವಾರ ಸ್ನೇಹಶೀಲ ಕೆಫೆಗಳಿಂದ ಹಿಡಿದು ಸಮುದಾಯ ಭವನಗಳವರೆಗೆ ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಸಾಹಿತ್ಯದ ಅರಿವು ಮೂಡಿಸುತ್ತದೆ.

ಕ್ಲಬ್‌ಗೆ ಯಾವುದೇ ಪ್ರವೇಶ ಶುಲ್ಕವಿಲ್ಲ ಮತ್ತು ವೆಬ್‌ಸೈಟ್, www.bookreads.in/club ಅಥವಾ www.instagram.com/belagavibookclub Instagram ಹ್ಯಾಂಡಲ್​​ಗೆ ಭೇಟಿ ನೀಡುವ ಮೂಲಕ ಯಾರಾದರೂ ಸೇರಿಕೊಳ್ಳಬಹುದು ಎಂದು ಕ್ಲಬ್ ಅನ್ನು ಬೆಂಬಲಿಸುವ ರೋಸ್ಟ್ರಮ್ ಡೈರೀಸ್ ಸಂಸ್ಥಾಪಕ ಅಭಿಷೇಕ್ ಬೆಂಡಿಗೇರಿ ಹೇಳಿದರು.

ಬೆಳಗಾವಿ ಬುಕ್ ಕ್ಲಬ್, ರೋಸ್ಟ್ರಮ್ ಡೈರೀಸ್‌ನ ಸಹಯೋಗದೊಂದಿಗೆ ಲೇಖಕರನ್ನು ಮುಂಚೂಣಿಗೆ ತರಲು ಬದ್ಧವಾಗಿದೆ. ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕರಾದ ರಘು ಎಂ.ವಿ ಮತ್ತು ಮೇಘನಾ ಎಂ.ಆರ್ ಹಾಗೂ ಕ್ಲಬ್​​ನ ಇತರ ಸದಸ್ಯರು ಸಂವಾದದಲ್ಲಿ ಉಪಸ್ಥಿತರಿದ್ದರು. ರವಿವಾರ ಸಪ್ನಾ ಬುಕ್ ಹೌಸ್‌ನಲ್ಲಿ ನಡೆದ ಕೊನೆಯ ಸಭೆಯು ಅದ್ಭುತ ಯಶಸ್ಸನ್ನು ಕಂಡಿತು. ಬುಕ್ ಕ್ಲಬ್ ತಂಡಕ್ಕೆ ಸಾಹಿತ್ಯ ಆಸಕ್ತರು ಧನ್ಯವಾದ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?