‘ಬಿಗ್ ಬಾಸ್’ ಮನೆಯಲ್ಲಿ ರಾತ್ರೋರಾತ್ರಿ ಬದಲಾದ ಡ್ರೋನ್ ಪ್ರತಾಪ್

ಡ್ರೋನ್ ಕಂಡು ಹಿಡಿದಿದ್ದೇನೆ ಎಂದು ಖ್ಯಾತಿ ಪಡೆದವರು ಪ್ರತಾಪ್. ಆ ಬಳಿಕ ಅವರು ಡ್ರೋನ್ ಕಂಡು ಹಿಡಿದೇ ಇರಲಿಲ್ಲ ಎನ್ನುವ ವಿಚಾರ ತಿಳಿಯಿತು. ಇದಾದ ಬಳಿಕ ಅವರನ್ನು ಜನರು ಟ್ರೋಲ್ ಮಾಡೋಕೆ ಆರಂಭಿಸಿದರು. ಅವರಿಗೆ ಬಿಗ್ ಬಾಸ್​ಗೆ ಹೋಗೋಕೆ ಈ ಟ್ರೋಲ್ ಕೂಡ ಕಾರಣ ಎಂದರೂ ತಪ್ಪಾಗಲಾರದು.

‘ಬಿಗ್ ಬಾಸ್’ ಮನೆಯಲ್ಲಿ ರಾತ್ರೋರಾತ್ರಿ ಬದಲಾದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
Follow us
ರಾಜೇಶ್ ದುಗ್ಗುಮನೆ
|

Updated on:Oct 12, 2023 | 7:39 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೊದಲ ವಾರದಲ್ಲೇ ಜಗಳಗಳು ಆರಂಭ ಆಗಿವೆ. ಅನೇಕರು ಕಿತ್ತಾಡಿಕೊಂಡಿದ್ದಾರೆ. ಅಸಮರ್ಥರು ಹಾಗೂ ಸಮರ್ಥರ ನಡುವೆ ಮನಸ್ತಾಪ ಉಂಟಾಗುತ್ತಿದೆ. ನಿಯಮ ಪಾಲನೆ ವಿಚಾರದಲ್ಲಿ ಕಿರಿಕ್​ಗಳು ಆಗುತ್ತಿವೆ. ಈ ಎಲ್ಲಾ ವಿಚಾರಗಳು ವೀಕೆಂಡ್​ನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ ಡ್ರೋನ್ ಪ್ರತಾಪ್ (Drone Prathap) ಅವರು ಕೂಡ ಹೈಲೈಟ್ ಆಗುತ್ತಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಅವರು ರಾತ್ರೋರಾತ್ರಿ ಬದಲಾಗಿದ್ದಾರೆ.

ಡ್ರೋನ್ ಕಂಡು ಹಿಡಿದಿದ್ದೇನೆ ಎಂದು ಖ್ಯಾತಿ ಪಡೆದವರು ಪ್ರತಾಪ್. ಆ ಬಳಿಕ ಅವರು ಡ್ರೋನ್ ಕಂಡು ಹಿಡಿದೇ ಇರಲಿಲ್ಲ ಎನ್ನುವ ವಿಚಾರ ತಿಳಿಯಿತು. ಇದಾದ ಬಳಿಕ ಅವರನ್ನು ಜನರು ಟ್ರೋಲ್ ಮಾಡೋಕೆ ಆರಂಭಿಸಿದರು. ಅವರಿಗೆ ಬಿಗ್ ಬಾಸ್​ಗೆ ಹೋಗೋಕೆ ಈ ಟ್ರೋಲ್ ಕೂಡ ಕಾರಣ ಎಂದರೂ ತಪ್ಪಾಗಲಾರದು. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ರಾತ್ರೋರಾತ್ರಿ ಬದಲಾಗಿದ್ದಾರೆ.

‘ನಾನು ಒಂದು ವಾರ ಇರಬಹುದು ಅಷ್ಟೇ, ಆ ಬಳಿಕ ಮನೆಯಿಂದ ಹೋಗ್ತೀನಿ’ ಎಂದು ಪ್ರತಾಪ್ ಹೇಳಿದ್ದರು. ನಾಮಿನೇಷನ್ ವೇಳೆ ಈ ವಿಚಾರ ಚರ್ಚೆಗೆ ಬಂತು. ಅನೇಕರು ಇದೇ ಕಾರಣ ನೀಡಿ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು. ನಾಮಿನೇಷನ್​ಗೆ ಈ ಕಾರಣ ನೀಡಿದ್ದನ್ನು ನೋಡಿ ಪ್ರತಾಪ್​ಗೆ ಸರಿ ಎನಿಸಲಿಲ್ಲ. ಹೀಗಾಗಿ ಅವರು ಬೇಸರ ಮಾಡಿಕೊಂಡರು. ಅಲ್ಲದೆ, ಬದಲಾಗಲು ನಿರ್ಧರಿಸಿದರು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ಗೆ ಡೋಂಗಿ ಎಂದು ಕರೆದ ಸ್ಪರ್ಧಿಗಳು; ಬಿಗ್ ಬಾಸ್ ಮನೆಯಲ್ಲಿ ಕಾವೇರಿತು ಚರ್ಚೆ

‘ನಾನು ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿದ್ದೀನಿ. ಇಷ್ಟು ದಿನ ಒಂದು ವಾರ ಇದ್ರೆ ಸಾಕು ಎಂದುಕೊಂಡಿದ್ದೆ. ಆದರೆ, ಈಗ ಹಾಗಲ್ಲ. ಕೊನೆಯವರೆಗೂ ಇರ್ತೀನಿ. ಒಂದೊಮ್ಮೆ ಇರೋಕೆ ಆಗಿಲ್ಲ ಎಂದರೆ ಕೊನೆಯವರೆಗೂ ಫೈಟ್ ಮಾಡ್ತೀನಿ’ ಎಂದು ಎಲ್ಲರ ಎದುರು ಓಪನ್ ಆಗಿ ಹೇಳಿದರು ಪ್ರತಾಪ್. ‘ರಾತ್ರೋರಾತ್ರಿ ಬದಲಾಗಿಬಿಟ್ಟೆಯಲ್ಲ’ ಎಂದು ಪ್ರತಾಪ್ ಬಗ್ಗೆ ಕೆಲವರು ಮೆಚ್ಚುಗೆ ಸೂಚಿಸಿದರು.  ಡ್ರೋನ್ ವಿಚಾರ ಇಟ್ಟುಕೊಂಡು ಕೆಲವರು ಪ್ರತಾಪ್ ಅವರನ್ನು ಟೀಕಿಸಿದ್ದಾರೆ. ಈ ವಿಚಾರ ದೊಡ್ಮನೆಯಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಶೋ ರಾತ್ರಿ 9:30ಕ್ಕೆ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Thu, 12 October 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್