
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿತ್ತು. ತನ್ನ ಆರ್ಭಟವನ್ನ ಇಡೀ ವಿಶ್ವದೆಲ್ಲೆಡೆ ರಾರಾಜಿಸಿಬಿಟ್ಟಿತು. ಇಂತಹ ಸಂಕಷ್ಟದಿಂದ ಪಾರಾಗಲು ಜನರು ಹರಸಾಹಸವನ್ನೇ ಮಾಡಬೇಕಾಯಿತು. ಇದರಿಂದ ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿದ್ದಂತೆ, ಜನರಿಗೆ ಭಯ ಬೀಳಿಸುವಂತಹ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಮುನ್ಸೂಚನೆಗಳಿವೆ. ಅದ್ಯಾವುದೆಂದರೆ ಪಕ್ಷಿ ಜ್ವರ ಅಥವಾ ಹಕ್ಕಿ ಜ್ವರ. ಈ ಹಿಂದೆಯೇ ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಪಕ್ಷಿ ಜ್ವರ ಕಾಣಿಸಿಕೊಂಡಿತ್ತು. ಮತ್ತೆ ಪುನಃ ಇಂತಹದ್ದೊಂದು ವೈರಸ್ ಕಾಣಿಸಿಕೊಳ್ಳುತ್ತಿರುವುದು ಜನರ ಪಾಲಿಗೆ ವಿಷಾದನೀಯ ಸಂಗತಿ.
ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ ಎಚ್5 ಎನ್1 ವೈರಸ್ ಏಕಾ ಏಕಿ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಾಪುರದಲ್ಲಿ ಕಾಣಿಸಿಕೊಂಡಿತದೆ. ಇಲ್ಲಿನ ಜನರಿಗೆ ಕೋಳಿ ಸಾಕಾಣಿಕೆಯು ಮುಖ್ಯ ಆದಾಯ ಉದ್ಯಮವಾಗಿದೆ. ಸಾಂಕ್ರಾಮಿಕ ರೋಗವಾದ್ದರಿಂದ ಒಬ್ಬರಿಂದ ಒಬ್ಬರಿಗೆ ಹರಡುವುದು ಹೆಚ್ಚು. ಬಹಳಷ್ಟು ಕೋಳಿಗಳು ಈ ವೈರಸ್ನಿಂದ ನಶಿಸಿಹೋಗಿವೆ. ಇದರಿಂದ ಕೋಳಿ ಉತ್ಪನ್ನದ ಬೆಲೆಗಳು ಕುಸಿತಗೊಂಡಿದೆ.
ಈ ವರ್ಷ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಧೃಡಪಟ್ಟಿದೆ. ಒಂಭತ್ತು ಸಾವಿರಕ್ಕೂ ಹೆಚ್ಚು ಕೋಳಿಗಳು ವೈರಸ್ತಗಲಿ ನಾಶಹೊಂದಿವೆ.
ಈಗ ಎಲ್ಲೆಲ್ಲಿವೆ ಈ ವೈರಸ್?
ಏನೆಂದು ಕರೆಯುತ್ತಾರೆ ಈ ಜ್ವರವನ್ನು?
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಬೇರೆ ದೇಶಗಳಿಂದ ಹಕ್ಕಿಗಳು ವಲಸೆ ಬರುವುದು ಹೆಚ್ಚು. ಆ ಪಕ್ಷಿಗಳಿಗೆ ರೋಗದ ಗುಣಲಕ್ಷಣಗಳಿದ್ದರೆ ಅವುಗಳಿಂದ ವೈರಸ್ ಅಂಶಗಳು ಕೋಳಿ ಸಾಕಾಣಿಕಾ ಕೇಂದ್ರದ ಆಸುಪಾಸಿನಲ್ಲಿ ಬಿದ್ದರೆ ಕೋಳಿಗಳಿಗೆ ಹರಡುವುದು. ಅದನ್ನು ತಡೆಗಟ್ಟಲು ನನ್ನ ಕೋಳಿ ಸಾಕಾಣಿಕಾ ಕೇಂದ್ರದ ಸುತ್ತ “ಫಾರ್ಮಲಿನ್” ಔಷಧವನ್ನು ಸಿಂಪಡಿಸುತ್ತ್ತೇನೆ. ಇದರಿಂದ ಸಾಮಾನ್ಯವಾಗಿ ಸಾಕಾಣಿಕ ಕೇಂದ್ರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು
-ಮಹೇಂದ್ರ ಹೆಗಡೆ ಶಿಂಗ್ನಳ್ಳಿ
ಕೋಳಿ ಸಾಕಾಣಿಕಾದಾರರು