ಕೆ.ಜಿ ಹಳ್ಳಿ-ಡಿ.ಜೆ ಹಳ್ಳಿ ಹಿಂಸಾಚಾರ: ಮಾಜಿ ಮೇಯರ್ ಸಂಪತ್ ರಾಜ್ CCB ಕಸ್ಟಡಿಗೆ
ಬೆಂಗಳೂರು: ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಸಿಸಿಬಿಯಿಂದ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ನ ನ್ನು ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿಗೆ ಇಂದು ಮಧ್ಯಾಹ್ನ ಹಾಜರುಪಡಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶೆ ಕಾತ್ಯಾಯಿನಿ, ಮೊದಲಿಗೆ ಸಂಪತ್ ರಾಜ್ ಅವರ ಹೆಸರು, ವಿಳಾಸ ಕೇಳಿದ್ದಾರೆ. ನಂತರ ಎಷ್ಟು ಗಂಟೆಗೆ ನಿಮ್ಮನ್ನು ಹಿಡಿದರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಪತ್ ರಾಜ್ ನಿನ್ನೆ 10 ಗಂಟೆಗೆ ಹಿಡಿದರು ಎಂದು ಉತ್ತರ ನೀಡಿದ್ದಾರೆ. […]

ಬೆಂಗಳೂರು: ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಸಿಸಿಬಿಯಿಂದ ನಿನ್ನೆ ರಾತ್ರಿ ಬಂಧನಕ್ಕೊಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ನ ನ್ನು ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿಗೆ ಇಂದು ಮಧ್ಯಾಹ್ನ ಹಾಜರುಪಡಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶೆ ಕಾತ್ಯಾಯಿನಿ, ಮೊದಲಿಗೆ ಸಂಪತ್ ರಾಜ್ ಅವರ ಹೆಸರು, ವಿಳಾಸ ಕೇಳಿದ್ದಾರೆ. ನಂತರ ಎಷ್ಟು ಗಂಟೆಗೆ ನಿಮ್ಮನ್ನು ಹಿಡಿದರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಪತ್ ರಾಜ್ ನಿನ್ನೆ 10 ಗಂಟೆಗೆ ಹಿಡಿದರು ಎಂದು ಉತ್ತರ ನೀಡಿದ್ದಾರೆ. ನಂತರ ನ್ಯಾಯಾಧೀಶೆ ವಕಾಲತ್ಗೆ ಸಹಿ ಹಾಕಿಸಿಕೊಳ್ಳಲು ವಕೀಲರಿಗೆ ಅನುಮತಿ ನೀಡಿದ್ದಾರೆ.
ಸಂಪತ್ ರಾಜ್ ಪರ ವಕೀಲ ಮಹೇಶ್ ವಕಾಲತ್ ಅರ್ಜಿ ಹಾಕಿದರು. ನಂತರ 10 ದಿನ ಕಸ್ಟಡಿಗೆ ನೀಡುವಂತೆ ಸಿಸಿಬಿ ಎಸ್ ಪಿಪಿ ಪ್ರಸನ್ನಕುಮಾರ್ ಮನವಿ ಮಾಡಿದರು. ಸಿಸಿಬಿ ಪರ ವಕೀಲರ ಮನವಿಯಂತೆ ಈಗಾಗಲೇ ಆರೋಪಪಟ್ಟಿ ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಕಾತ್ಯಾಯಿನಿ ನವೆಂಬರ್19 ರವರೆಗೆ ಅಂದರೆ ಎರಡು ದಿನಗಳ ಕಾಲ ಸಂಪತ್ ರಾಜ್ ಅವರನ್ನು ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
Published On - 5:00 pm, Tue, 17 November 20