ಭಾರತದ ಮೇಲಿನ ಪ್ರೀತಿಗೆ ಮಹಾತ್ಮ ಗಾಂಧೀಜಿಯವರೇ ಮೂಲ ಕಾರಣ: ಒಬಾಮ
ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮಗೆ ಭಾರತದ ಮೇಲೆ ಇರುವ ವಿಶೇಷ ಅಭಿಮಾನದ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಮೇಲೆ ಪ್ರೀತಿ ಮೂಡಲು ಮಹಾತ್ಮ ಗಾಂಧಿಯವರೆಡೆಗಿನ ಸೆಳೆತವೆ ಮೂಲ ಕಾರಣ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಒಬಾಮ ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಆತ್ಮಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆದಿದ್ದು, ಅದರಲ್ಲಿ ಮೊದಲ ಭಾಗವು ಮಂಗಳವಾರ ಜಾಗತಿಕವಾಗಿ ಪುಸ್ತಕ ಮಳಿಗೆಗಳನ್ನು ಮುಟ್ಟಿತು. ಈ ಪುಸ್ತಕದಲ್ಲಿ ಒಬಾಮ ತನ್ನ 2008ರ ಚುನಾವಣಾ ಪ್ರಚಾರದಿಂದ […]
ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮಗೆ ಭಾರತದ ಮೇಲೆ ಇರುವ ವಿಶೇಷ ಅಭಿಮಾನದ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಮೇಲೆ ಪ್ರೀತಿ ಮೂಡಲು ಮಹಾತ್ಮ ಗಾಂಧಿಯವರೆಡೆಗಿನ ಸೆಳೆತವೆ ಮೂಲ ಕಾರಣ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಒಬಾಮ ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಆತ್ಮಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆದಿದ್ದು, ಅದರಲ್ಲಿ ಮೊದಲ ಭಾಗವು ಮಂಗಳವಾರ ಜಾಗತಿಕವಾಗಿ ಪುಸ್ತಕ ಮಳಿಗೆಗಳನ್ನು ಮುಟ್ಟಿತು. ಈ ಪುಸ್ತಕದಲ್ಲಿ ಒಬಾಮ ತನ್ನ 2008ರ ಚುನಾವಣಾ ಪ್ರಚಾರದಿಂದ ಹಿಡಿದು ಮೊದಲ ಹಂತದ ರಾಜಕೀಯ ಅವಧಿಯ ಅಂತ್ಯದವರೆಗೆ ಬರೆದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ವಿಷಯ ಪಾಂಡಿತ್ಯದ ಕೊರತೆ ಇದೆ -ಒಬಾಮ
ಒಬಾಮಗೆ ಮಾದರಿಯಾದ ಮಹಾತ್ಮಾ ಗಾಂಧಿ: ‘ಯುವಕನಾಗಿದ್ದಾಗ ನಾನು ಗಾಂಧಿಯವರ ಬರಹಗಳನ್ನು ಅಧ್ಯಯನ ಮಾಡಿದ್ದೇನೆ, ಸತ್ಯಾಗ್ರಹ ಅಥವಾ ಸತ್ಯದ ಮೇಲಿನ ಭಕ್ತಿ, ಅಹಿಂಸಾತ್ಮಕ ಪ್ರತಿರೋಧದ ಶಕ್ತಿ, ಮಾನವೀಯತೆ, ಎಲ್ಲಾ ಧರ್ಮಗಳ ಅತ್ಯಗತ್ಯ ಏಕತೆ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿನ ಬಾಧ್ಯತೆಯ ಮೇಲಿನ ಅವರ ನಂಬಿಕೆ, ಜನರ ಮೇಲಿನ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಲವು ಬಾರಿ ಜೈಲು ಸೇರಿದ ಅವರ ಮಾತುಗಳು ನನ್ನ ಮೇಲೆ ತೀವ್ರತರನಾದ ಪ್ರಭಾವವನ್ನು ಬೀರಿದೆ’ ಎಂದು ತಮ್ಮ ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಬರೆದಿದ್ದಾರೆ.
2010ರಲ್ಲಿ ಭಾರತಕ್ಕೆ ಮೊದಲ ಭೇಟಿ: ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಒಬಾಮ ಗಾಂಧೀಜಿಯವರ ಮನೆ ಮತ್ತು ಅವರ ಸರಳ ಜೀವನದ ಬಗ್ಗೆ ತಿಳಿದುಕೊಂಡರು ಹಾಗೂ ಗಾಂಧೀಜಿ ಇದ್ದಿದ್ದರೆ ಅವರ ಪಕ್ಕದಲ್ಲಿ ಕುಳಿತು ನನ್ನಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕೇಳುತ್ತಿದ್ದೆ ಎಂದು ತಮ್ಮ ಆತ್ಮಚರಿತೆಯಲ್ಲಿ ಬರೆದಿದ್ದಾರೆ.
ರಾಜಕೀಯ ಪಕ್ಷಗಳು, ವಿವಿಧ ಸಶಸ್ತ್ರ ಪ್ರತ್ಯೇಕತಾವಾದಿ ಚಳುವಳಿಗಳು ಮತ್ತು ಭ್ರಷ್ಟಾಚಾರದ ಹಗರಣಗಳ ನಡುವೆಯೂ ಆಧುನಿಕ ಭಾರತವನ್ನು ಯಶಸ್ಸಿನ ಕಥೆಯೆಂದು ಪರಿಗಣಿಸಬಹುದು ಎಂದು ಹೇಳಿದ್ದಷ್ಟೇ ಅಲ್ಲದೇ, ಭಾರತದ ಆರ್ಥಿಕ ಪರಿವರ್ತನೆಯ ವಾಸ್ತುಶಿಲ್ಪಿ ಮತ್ತು ಪ್ರಗತಿಯ ಲಾಂಛನದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಣುತ್ತಿದ್ದರು ಎಂದಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಬಗ್ಗೆಯೂ ತಮ್ಮ ಪುಸ್ತಕದಲ್ಲಿ ಬರೆದಿದ್ದು, ತಾವು ಒಟ್ಟಿಗೆ ಕುಳಿತು ಊಟ ಮಾಡಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
Published On - 4:13 pm, Tue, 17 November 20