AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಜಾಗೃತಿ ಮೂಡಿಸುವ ‘ವಿಶ್ವ ಶೌಚಾಲಯ ದಿನ’ದ ಮಹತ್ವ ಅತ್ಯಮೂಲ್ಯ ತಿಳಿಯಿರಿ..

ಇಡೀ ವಿಶ್ವದಲ್ಲಿ ಕಾಡುವ ಅತಿದೊಡ್ಡ ಸಮಸ್ಯೆಯೆಂದರೆ ಶೌಚಾಲಯವನ್ನು ಬಳಸದೆ ಇರುವುದು. ದಿನಕ್ಕೊಂದು ಆರೋಗ್ಯ ಸಮಸ್ಯೆಗಳು ಹುಟ್ಟುವುದು ಇದರ ನಿರ್ಲಕ್ಷತನದಿಂದಲೇ. ಬಯಲು ಶೌಚ ಮುಕ್ತಗೊಳಿಸಲು ಆಯಾ ಸರ್ಕಾರಗಳು, ಅಂತಾರಾಕ್ಷ್ಟ್ರೀಯ ಸಂಘಸಂಸ್ಥೆಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆದರೆ ಇದನ್ನು ಸರಿಯಾಗಿ ಬಳಸದೆ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ವಿಶ್ವ ಸಂಸ್ಥೆ ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯಿಂದ 2013ರಲ್ಲಿ ನವೆಂಬರ್ 19ರಂದು ‘ವಿಶ್ವ ಶೌಚಾಲಯ ದಿನ’ ಎಂದು ಘೋಷಿಸಿತು. ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ […]

ಜನಜಾಗೃತಿ ಮೂಡಿಸುವ ‘ವಿಶ್ವ ಶೌಚಾಲಯ ದಿನ’ದ ಮಹತ್ವ ಅತ್ಯಮೂಲ್ಯ ತಿಳಿಯಿರಿ..
Follow us
ಸಾಧು ಶ್ರೀನಾಥ್​
|

Updated on: Nov 18, 2020 | 2:37 PM

ಇಡೀ ವಿಶ್ವದಲ್ಲಿ ಕಾಡುವ ಅತಿದೊಡ್ಡ ಸಮಸ್ಯೆಯೆಂದರೆ ಶೌಚಾಲಯವನ್ನು ಬಳಸದೆ ಇರುವುದು. ದಿನಕ್ಕೊಂದು ಆರೋಗ್ಯ ಸಮಸ್ಯೆಗಳು ಹುಟ್ಟುವುದು ಇದರ ನಿರ್ಲಕ್ಷತನದಿಂದಲೇ. ಬಯಲು ಶೌಚ ಮುಕ್ತಗೊಳಿಸಲು ಆಯಾ ಸರ್ಕಾರಗಳು, ಅಂತಾರಾಕ್ಷ್ಟ್ರೀಯ ಸಂಘಸಂಸ್ಥೆಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆದರೆ ಇದನ್ನು ಸರಿಯಾಗಿ ಬಳಸದೆ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ವಿಶ್ವ ಸಂಸ್ಥೆ ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯಿಂದ 2013ರಲ್ಲಿ ನವೆಂಬರ್ 19ರಂದು ‘ವಿಶ್ವ ಶೌಚಾಲಯ ದಿನ’ ಎಂದು ಘೋಷಿಸಿತು.

ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನ ಎಂದು ಆಚರಿಸಲಾಗುತ್ತದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಈ ದಿನ ಅತ್ಯಂತ ಪ್ರಮುಖ ದಿನವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಗ್ರಾಮ ಪಂಚಾಯಿತಿ, ವಿಶ್ವ ಶೌಚಾಲಯ ದಿನ ಹೆಸರಿನಲ್ಲಿ ಜನರಿಗೆ ಶೌಚಾಲಯ ಮಹತ್ವವನ್ನು ತಿಳಿಸಲು ಅಂಗನವಾಡಿ ಕೇಂದ್ರ, ಶಾಲೆಗಳು ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ.

ನೀರಿನ ಮಿತ ಬಳಕೆಗೆ ಅರಿವು ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸೂಚನೆ: ವಿಶ್ವ ಶೌಚಾಲಯ ದಿನದ ಅಂಗವಾಗಿ ನಿರಂತರ ಶೌಚಾಲಯದ ಬಳಕೆ, ವೈಯಕ್ತಿಕ ಶುಚಿತ್ವದ ಜೊತೆಗೆ ಶುದ್ಧ ನೀರಿನ ಪ್ರಾಮುಖ್ಯತೆ, ಮಳೆ ನೀರಿನ ಕೊಯಲು ಪದ್ಧತಿ ಅಳವಡಿಕೆ, ಬೂದು ನೀರು ನಿರ್ವಹಣೆ, ನೀರಿನ ಮಿತ ಬಳಕೆ ಕುರಿತು ಗ್ರಾಮೀಣ ಸಮುದಾಯ ಸೇರಿದಂತೆ ಎಲ್ಲಾ ಭಾಗಿದಾರರಲ್ಲಿ ಅರಿವು ಮೂಡಿಸಲು ಶಿಕ್ಷಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಎಲ್ಲಾ ಜಿಲ್ಲಾ ಪಂಚಾಯತ್ ಗಳು ತಿಳಿಸಿವೆ.