ಬೆಂಗಳೂರು: ಸರ್ಕಾರಿ ಕಚೇರಿಗಳು ಸೇರಿದಂತೆ ಜಿಲ್ಲಾಡಳಿತ ಭವನದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಿರಲಿ ಮತ್ತು ಕಚೇರಿಗೆ ಬರುವ ಸಾರ್ವಜನಿಕರ ಮೇಲೆ ನಿಗಾ ವಹಿಸುವುದಕ್ಕೆ ಅಂತಲೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಸಿಸಿ ಕ್ಯಾಮರಾಗಳನ್ನ ಅಳವಡಿಸುತ್ತಾರೆ.
ಆದ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಭದ್ರತೆಗೆ ಅಂತಾ ಹಾಕಿರುವ ಸಿಸಿ ಕ್ಯಾಮರಾಗಳು ಕಚೇರಿಯ ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿಸುತ್ತಿದೆ.
ಕಚೇರಿಯ ಒಳ ಮತ್ತು ಹೊರ ಭಾಗದಲ್ಲಿ ಅಳವಡಿಸಿರುವ ಕ್ಯಾಮರಾಗಳು ಕಚೇರಿಗೆ ಬಂದು ಹೋಗುವ ಸಾರ್ವಜನಿಕರ ಬದಲಿಗೆ ಕಚೇರಿಯ ಗೋಡೆಗಳನ್ನ ನೋಡ್ತಿದ್ದು, ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಕಚೇರಿಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಕೊಠಡಿಗಳ ಬಳಿ ಅಳವಡಿಸಿರುವ ಕ್ಯಾಮರಾಗಳು ಆಗಮನ ಮತ್ತು ನಿರ್ಗಮನದ ದ್ವಾರದ ಬದಲಿಗೆ ಗೋಡೆಗಳನ್ನ ನೋಡುತ್ತಿವೆ.
ಹೀಗಾಗಿ ಕಚೇರಿಯ ಸಿಬ್ಬಂದಿಯೆ ಸಿಸಿಟಿವಿ ಕ್ಯಾಮೆರಾಗಳನ್ನ ತಿರುಗಿಸಿದ್ರಾ ಅನ್ನೋ ಅನುಮಾನವು ಸಾರ್ವಜನಿಕರಲ್ಲಿ ಕಾಡ ತೋಡಗಿದೆ. ಜತೆಗೆ ಕಚೇರಿಯ ಬಳಿ ಕ್ಯಾಮರಾಗಳು ಸರಿಯಾಗಿಲ್ಲ ಅಂತ ಯಾರಾದ್ರು ಏನಾದ್ರು ಅನಾಹುತಗಳನ್ನ ಮಾಡಿದ್ರೆ ಯಾರು ಹೊಣೆ ಅಂತ ಸಾರ್ವಜನಿಕರು ಪ್ರಶ್ನಿಸಿದ್ದು, ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.