AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟವೇ ಮುಗ್ದಿಲ್ಲಾ.. ಶುರುವಾಯ್ತಾ ಹಕ್ಕಿ ಜ್ವರದ ಕಾಟ!

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿತ್ತು. ತನ್ನ ಆರ್ಭಟವನ್ನ ಇಡೀ ವಿಶ್ವದೆಲ್ಲೆಡೆ ರಾರಾಜಿಸಿಬಿಟ್ಟಿತು. ಇಂತಹ ಸಂಕಷ್ಟದಿಂದ ಪಾರಾಗಲು ಜನರು ಹರಸಾಹಸವನ್ನೇ ಮಾಡಬೇಕಾಯಿತು. ಇದರಿಂದ ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿದ್ದಂತೆ, ಜನರಿಗೆ ಭಯ ಬೀಳಿಸುವಂತಹ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಮುನ್ಸೂಚನೆಗಳಿವೆ. ಅದ್ಯಾವುದೆಂದರೆ ಪಕ್ಷಿ ಜ್ವರ ಅಥವಾ ಹಕ್ಕಿ ಜ್ವರ. ಈ ಹಿಂದೆಯೇ ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಪಕ್ಷಿ ಜ್ವರ ಕಾಣಿಸಿಕೊಂಡಿತ್ತು. ಮತ್ತೆ ಪುನಃ ಇಂತಹದ್ದೊಂದು ವೈರಸ್ ಕಾಣಿಸಿಕೊಳ್ಳುತ್ತಿರುವುದು ಜನರ ಪಾಲಿಗೆ ವಿಷಾದನೀಯ ಸಂಗತಿ. ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ […]

ಕೊರೊನಾ ಕಾಟವೇ ಮುಗ್ದಿಲ್ಲಾ.. ಶುರುವಾಯ್ತಾ ಹಕ್ಕಿ ಜ್ವರದ ಕಾಟ!
ಸಾಧು ಶ್ರೀನಾಥ್​
|

Updated on: Nov 17, 2020 | 5:25 PM

Share

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿತ್ತು. ತನ್ನ ಆರ್ಭಟವನ್ನ ಇಡೀ ವಿಶ್ವದೆಲ್ಲೆಡೆ ರಾರಾಜಿಸಿಬಿಟ್ಟಿತು. ಇಂತಹ ಸಂಕಷ್ಟದಿಂದ ಪಾರಾಗಲು ಜನರು ಹರಸಾಹಸವನ್ನೇ ಮಾಡಬೇಕಾಯಿತು. ಇದರಿಂದ ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿದ್ದಂತೆ, ಜನರಿಗೆ ಭಯ ಬೀಳಿಸುವಂತಹ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಮುನ್ಸೂಚನೆಗಳಿವೆ. ಅದ್ಯಾವುದೆಂದರೆ ಪಕ್ಷಿ ಜ್ವರ ಅಥವಾ ಹಕ್ಕಿ ಜ್ವರ. ಈ ಹಿಂದೆಯೇ ಭಾರತ ಸೇರಿದಂತೆ ಇನ್ನಿತರ ದೇಶಗಳಲ್ಲಿ ಪಕ್ಷಿ ಜ್ವರ ಕಾಣಿಸಿಕೊಂಡಿತ್ತು. ಮತ್ತೆ ಪುನಃ ಇಂತಹದ್ದೊಂದು ವೈರಸ್ ಕಾಣಿಸಿಕೊಳ್ಳುತ್ತಿರುವುದು ಜನರ ಪಾಲಿಗೆ ವಿಷಾದನೀಯ ಸಂಗತಿ.

ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ ಎಚ್5 ಎನ್1 ವೈರಸ್ ಏಕಾ ಏಕಿ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಾಪುರದಲ್ಲಿ ಕಾಣಿಸಿಕೊಂಡಿತದೆ. ಇಲ್ಲಿನ ಜನರಿಗೆ ಕೋಳಿ ಸಾಕಾಣಿಕೆಯು ಮುಖ್ಯ ಆದಾಯ ಉದ್ಯಮವಾಗಿದೆ. ಸಾಂಕ್ರಾಮಿಕ ರೋಗವಾದ್ದರಿಂದ ಒಬ್ಬರಿಂದ ಒಬ್ಬರಿಗೆ ಹರಡುವುದು ಹೆಚ್ಚು. ಬಹಳಷ್ಟು ಕೋಳಿಗಳು ಈ ವೈರಸ್ನಿಂದ ನಶಿಸಿಹೋಗಿವೆ. ಇದರಿಂದ ಕೋಳಿ ಉತ್ಪನ್ನದ ಬೆಲೆಗಳು ಕುಸಿತಗೊಂಡಿದೆ.

ಈ ವರ್ಷ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಧೃಡಪಟ್ಟಿದೆ. ಒಂಭತ್ತು ಸಾವಿರಕ್ಕೂ ಹೆಚ್ಚು ಕೋಳಿಗಳು ವೈರಸ್ತಗಲಿ ನಾಶಹೊಂದಿವೆ.

ಈಗ ಎಲ್ಲೆಲ್ಲಿವೆ ಈ ವೈರಸ್? ವೈರಸ್ ಹಾವಳಿ ಬಿಹಾರ್, ಕೇರಳ, ತಮಿಳುನಾಡು ಹೀಗೆ ಇತರ ದೇಶಗಳಿಗೆ ಈಗಲೇ ಬಂದು ಹೋಗಿವೆ. ಈಗ ಮತ್ತೆ ಯುರೋಪ್ನಲ್ಲಿ ಈ ಜ್ವರ ಕಾಣಿಸಿಕೊಳ್ಳುತ್ತಿದೆ. ನೆದರ್ಲ್ಯಾಂಡ್ ಯುರೋಪಿನ ಅತಿದೊಡ್ಡ ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ರಫ್ತು ಮಾಡುವ ದೇಶವಾಗಿದ್ದು, 2,000 ಹೊಲಗಳಲ್ಲಿ 10,000 ಜನರಿಗೆ ಉದ್ಯೋಗ ನೀಡುತ್ತಿದೆ. 2003 ರಲ್ಲಿ ಪಕ್ಷಿ ಜ್ವರ ಹರಡುವಿಕೆಯಲ್ಲಿ ಡಚ್ಚರು 30 ದಶಲಕ್ಷಕ್ಕೂ ಹೆಚ್ಚು ಕೋಳಿಗಳು, ಬಾತುಕೋಳಿಗಳು ಮತ್ತು ಇತರ ಕೋಳಿಗಳು ಪ್ರಾಣ ಕಳೆದುಕೊಂಡಿವೆ ಎಂದು ಬಿಬಿಸಿ ವರದಿ ಮಾಡಿದೆ.

ಏನೆಂದು ಕರೆಯುತ್ತಾರೆ ಈ ಜ್ವರವನ್ನು? ಎ, ಬಿ ಮತ್ತು ಸಿ ಎಂಬ ಮೂರು ರೀತಿಯ ವೈಸರ್ಗಳನ್ನು ನಾವು ಹಕ್ಕಿಜ್ವರದಲ್ಲಿ ಕಾಣಬಹುದು. ಏವಿಯನ್ ಇನ್ಫ್ಲುಯೆನ್ಸ್ ಅಥವಾ ಏವಿಯನ್ ಫ್ಯೂ ಎಂದೂ ಇದನ್ನು ಕರೆಯಲಾಗುತ್ತದೆ. ಹಕ್ಕಿಯ ಜೊಲ್ಲು ಮತ್ತು ಉಚ್ಛಿಷ್ಟಗಳಿಂದ ಹರಡುತ್ತದೆ. ಕೊರೊನಾ ವೈರಸ್ ಹರಡುವಿಕೆಯ ರೀತಿಯಲ್ಲಿಯೇ, ಸೋಂಕು ಸ್ಪರ್ಶದಿಂದ ಹರಡುವ ರೋಗವಿದು. ಜನರು ಕೋಳಿ ಮಾಂಸವನ್ನು ಹಾಗೂ ಮೊಟ್ಟೆಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತಾರೆ. ಹಾಗೆಯೇ ಹಕ್ಕಿ ಜ್ವರದ ವೈರಸ್ ಮೊಟ್ಟೆಗಳಲ್ಲಿ ಅಥವಾ ಮಾಂಸದಲ್ಲಿ ಇದ್ದರೆ ಬಹುಬೇಗ ಮಾನವರ ದೇಹಕ್ಕೆ ಪ್ರವೇಶಿಸುತ್ತದೆ.

ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಬೇರೆ ದೇಶಗಳಿಂದ ಹಕ್ಕಿಗಳು ವಲಸೆ ಬರುವುದು ಹೆಚ್ಚು. ಆ ಪಕ್ಷಿಗಳಿಗೆ ರೋಗದ ಗುಣಲಕ್ಷಣಗಳಿದ್ದರೆ ಅವುಗಳಿಂದ ವೈರಸ್ ಅಂಶಗಳು ಕೋಳಿ ಸಾಕಾಣಿಕಾ ಕೇಂದ್ರದ ಆಸುಪಾಸಿನಲ್ಲಿ ಬಿದ್ದರೆ ಕೋಳಿಗಳಿಗೆ ಹರಡುವುದು. ಅದನ್ನು ತಡೆಗಟ್ಟಲು ನನ್ನ ಕೋಳಿ ಸಾಕಾಣಿಕಾ ಕೇಂದ್ರದ ಸುತ್ತ “ಫಾರ್ಮಲಿನ್” ಔಷಧವನ್ನು ಸಿಂಪಡಿಸುತ್ತ್ತೇನೆ. ಇದರಿಂದ ಸಾಮಾನ್ಯವಾಗಿ ಸಾಕಾಣಿಕ ಕೇಂದ್ರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು -ಮಹೇಂದ್ರ ಹೆಗಡೆ ಶಿಂಗ್ನಳ್ಳಿ ಕೋಳಿ ಸಾಕಾಣಿಕಾದಾರರು