‘ಯಾವ ಸಿಎಂಗೂ ನಾನು ಕಮ್ಮಿಯಿಲ್ಲ, ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಬಂದಿತ್ತು’

|

Updated on: Nov 25, 2019 | 6:07 PM

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ಯಾರು ಮಿನಿಸ್ಟರ್ ಮಾಡಿದರೂ. ಏನು ಮಾಡಿದರೂ.. ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗುಡುಗಿದ್ದಾರೆ. ನನ್ನನ್ನ ಹೊಸಕೋಟೆಗೆ ಕರೆತಂದಿದ್ದ ಎಸ್​.ಎಂ.ಕೃಷ್ಣ: ಎಂಟಿಬಿಯನ್ನ ಹೊಸಕೋಟೆಗೆ ಕರೆದು ತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ. ಇಲ್ಲಿ ಕಾಂಗ್ರೆಸ್​ನಿಂದ ನಿಂತು ಮುನೇಗೌಡರು ಮೂರು ಬಾರಿ ಸೋತಿದ್ರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್​ನಲ್ಲಿ ನನ್ನನ್ನು ತಂದು ನಿಲ್ಲಿಸಿದ್ರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಾಯಿತೇ […]

‘ಯಾವ ಸಿಎಂಗೂ ನಾನು ಕಮ್ಮಿಯಿಲ್ಲ, ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಬಂದಿತ್ತು’
Follow us on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ಯಾರು ಮಿನಿಸ್ಟರ್ ಮಾಡಿದರೂ. ಏನು ಮಾಡಿದರೂ.. ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.

ನನ್ನನ್ನ ಹೊಸಕೋಟೆಗೆ ಕರೆತಂದಿದ್ದ ಎಸ್​.ಎಂ.ಕೃಷ್ಣ:
ಎಂಟಿಬಿಯನ್ನ ಹೊಸಕೋಟೆಗೆ ಕರೆದು ತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ. ಇಲ್ಲಿ ಕಾಂಗ್ರೆಸ್​ನಿಂದ ನಿಂತು ಮುನೇಗೌಡರು ಮೂರು ಬಾರಿ ಸೋತಿದ್ರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್​ನಲ್ಲಿ ನನ್ನನ್ನು ತಂದು ನಿಲ್ಲಿಸಿದ್ರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಾಯಿತೇ ವಿನಹ ಕಾಂಗ್ರೆಸ್​ನಿಂದ ನನಗಲ್ಲ ಎಂದು ಶರತ್ ಬಚ್ಚೇಗೌಡ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ದ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ.

ಶರತ್​ಗೆ ಬುದ್ಧಿ ಭ್ರಮಣೆಯಾಗಿದೆ:
ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಶರತ್ ಬಚ್ಚೇಗೌಡಗೆ ಬುದ್ಧಿಭ್ರಮಣೆಯಾಗಿದೆ. ನಾನು ಸತ್ಯವಾಗಲೂ ಯಾರಿಗೂ ಯಾವ ಬೆಲೆಯನ್ನ ಕಟ್ಟಿಲ್ಲ. ರಿಯಲ್ ಎಸ್ಟೇಟ್​ ಸೈಟ್ ಮಾದರಿಯಲ್ಲಿ ಜನ ನಾಯಕರಿಗೆ ಬೆಲೆ ಕಟ್ಟುತ್ತಿರುವ ಶರತ್ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿದ್ದಾರೆ.

Published On - 5:32 pm, Mon, 25 November 19