ಬೆಂಗಳೂರು: ವೋಟರ್ ಲಿಸ್ಟ್ ಇನ್ನೂ ಬಂದೇ ಇಲ್ಲ. ಆಗಲೇ, ಪ್ರತಿ ಮನೆಗೆ ಹೋಗಿ ಜಾತಿಯನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್‌ನವರು ಸುಮ್ಮನೆ ಪ್ರಚಾರ ಮಾಡುತ್ತಿಲ್ಲ. ಹೊರಗಡೆಯಿಂದ 4 ಸಾವಿರ ಜನರು ಬಂದಿದ್ದಾರೆ ಎಂದು ಟಿವಿ 9ಗೆ ರಾಜರಾಜೇಶ್ವರಿನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
‘ಕೈ’ ಕಾರ್ಯಕರ್ತರ ಮೇಲೆ ಬಿಜೆಪಿಯವರಿಂದ ಹಲ್ಲೆ ಆರೋಪ
ಮುನಿರತ್ನ ಬೆಂಬಲಿಗರ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹೇಳಿಕೆಕೊಟ್ಟಿದ್ದಾರೆ. ‘ಕೈ’ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಚುನಾವಣಾ ಪ್ರಚಾರದ ವೇಳೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರಕ್ಕೆ ಅಡ್ಡಿಪಡಿಸಿ ವೋಟರ್ ಲಿಸ್ಟ್ ಹರಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ವೇಲು 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಜೊತೆ ಬಂದಿದ್ದರು ಎಂದು ಹೇಳಲಾಗಿದೆ.
ಈ ನಿಟ್ಟಿನಲ್ಲಿ, ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಜೊತೆಗೆ, ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಠಾಣೆ ಬಳಿ ಪ್ರತಿಭಟನೆ ಸಹ ನಡೆಯಿತು. ಮುನಿರತ್ನ ಹಾಗೂ ವೇಲು ನಾಯ್ಕರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಎರಡೂ ಬಣಗಳಿಂದ ಘೋಷಣೆ, ಕೂಗಾಟ
ಸ್ವಲ್ಪ ಹೊತ್ತಿನ ಬಳಿಕ ಸ್ಟೇಷನ್ ಎದುರು ಬಿಜೆಪಿ ಕಾರ್ಯಕರ್ತರು ಸಹ ಜಮಾಯಿಸಿದರು. ಎರಡೂ ಬಣಗಳು ಘೋಷಣೆ ಕೂಗುತ್ತ ಗದ್ದಲ ಎಬ್ಬಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಂದ ಡಿ.ಕೆ. ಡಿ.ಕೆ. ಎಂದು ಘೋಷಣೆ ಕೂಗಿದರೆ ಬಿಜೆಪಿ ಕಾರ್ಯಕರ್ತರು ಮುನಿರತ್ನ ಪರ ಘೋಷಣೆ ಕೂಗಿದರು. ಎರಡು ಕಡೆಯ ಕಾರ್ಯಕರ್ತರ ತಡೆಯಲು ಪೊಲಿಸರ ಪರದಾಡುವ ಸ್ಥಿತಿ ಎದುರಾಯ್ತ.
‘ಅಣ್ಣ ಕಾಯ್ತವ್ರೆ ಅಂತಾ ಮುನಿರತ್ನಗೆ ಹೇಳಿ’
ಅಣ್ಣ ಕಾಯ್ತವ್ರೆ ಅಂತಾ ಮುನಿರತ್ನಗೆ ಹೇಳಿ ಎಂದು ಆಶ್ರಯ ನಗರದ ಪ್ರಚಾರದಲ್ಲಿ ಮುನಿರತ್ನಗೆ ಸಂಸದ ಡಿ.ಕೆ. ಸುರೇಶ್ ಬಹಿರಂಗವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಚುನಾವಣೆ ಅದರ ಪಾಡಿಗೆ ನಡೀಬೇಕು. ನಮ್ಮವರನ್ನು ಹೆದರಿಸೋದು, ಬೆದರಿಸೋದು ಮಾಡಿದ್ರೆ ಪೊಲೀಸ್ ಸ್ಟೇಷನ್ ಮುಂದೆ ರಾಜಕೀಯ ನಡೆಯಬೇಕಾಗುತ್ತೆ. ಮುನಿರತ್ನಗೆ ಹೇಳಿ ಅಣ್ಣ ಕಾಯ್ತವ್ರೆ ಅಂತಾ ಸಂಸದ ಡಿ.ಕೆ.ಸುರೇಶ್ ಭಾಷಣದ ವೇಳೆ ಹೇಳಿದ್ದಾರೆ. ಏನಾದ್ರೂ ಹೆಚ್ಚು ಕಮ್ಮಿ ಮಾಡಿದ್ರೆ ನಾನು ಕಾಯ್ತಿದ್ದೀನಿ ಎಂದು ಪ್ರಚಾರ ಭಾಷಣದ ವೇಳೆ ಡಿ.ಕೆ.ಸುರೇಶ್ ಮುನಿರತ್ನಗೆ ಎಚ್ಚರಿಕೆ ನೀಡಿದ್ದಾರೆ.
Published On - 2:24 pm, Wed, 21 October 20