ಬೆಂಗಳೂರು: ಡಿಸೆಂಬರ್ 5ರಂದು ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, 5 ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವ ಬಗ್ಗೆ ವಾರದ ಹಿಂದೆ ವರದಿಯೊಂದು ಬಿಜೆಪಿ ವರಿಷ್ಠರ ಕೈಸೇರಿದೆ. ಆಯಾ ಕ್ಷೇತ್ರಗಳ ಬಿಜೆಪಿ ಉಸ್ತುವಾರಿಗಳ ಮಾಹಿತಿಯ ಅನ್ವಯ ಈ ವರದಿ ಸಿದ್ಧವಾಗಿದೆ.
ಶಿವಾಜಿನಗರ, ಕೆ.ಆರ್.ಪೇಟೆ, ಹುಣಸೂರು, ಕಾಗವಾಡ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಅನುಮಾನ ಎನ್ನುತ್ತಿದೆ ಸಮೀಕ್ಷಾ ವರದಿ. ಕಾಗವಾಡ ಕ್ಷೇತ್ರದಲ್ಲಿ BJP ಹೀನಾಯವಾಗಿ ಸೋಲಬಹುದು. ಚಿಕ್ಕಬಳ್ಳಾಪುರ, ಹೊಸಕೋಟೆ, ಯಶವಂತಪುರದಲ್ಲಿ 50:50 ಸ್ಥಿತಿಯಿದೆ. 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಅಥವಾ ಸೋಲಬಹುದು.
ಸಿಎಂ ಬಿಎಸ್ ಯಡಿಯೂರಪ್ಪ ಪ್ರವಾಸ ಆರಂಭಿಸುವ ಮುನ್ನ ಈ ವರದಿ ಅವರ ಕೈಸೇರಿತ್ತು. ಅದ್ರೆ ವರದಿ ಕೈಸೇರಿದ ತಕ್ಷಣ ಎಚ್ಚೆತ್ತ ಬಿಎಸ್ವೈ ಪ್ರತಿ ಕ್ಷೇತ್ರದಲ್ಲಿಯೂ 2 ಹಂತದಲ್ಲಿ ಪ್ರವಾಸಕ್ಕೆ ಅಣಿಯಾಗಿದ್ದಾರೆ. ಪಕ್ಷವೂ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸ ಸಿದ್ಧಪಡಿಸಿದೆ. ವರದಿಯ ನಂತರ ಕ್ಷೇತ್ರಗಳಿಗೆ ನಿಯೋಜಿಸಿರುವವರ ಮೇಲೆ ನಿಗಾ ಇಡಲಾಗಿದೆ. ಬಿಜೆಪಿ ನಾಯಕರು ಎಷ್ಟು ಗಂಭೀರವಾಗಿ ಕೆಲಸ ಮಾಡ್ತಿದ್ದಾರೆ ಎಂಬೆಲ್ಲ ವಿಚಾರಗಳ ಬಗ್ಗೆ ಬಿಜೆಪಿ ಮಾನಿಟರಿಂಗ್ ಮಾಡುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.